ಶಿವಮೊಗ್ಗ: ಎಟಿಎಂನಲ್ಲಿ ಸಾರ್ವಜನಿಕರಿಗೆ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್ ನಂಬರ್ ಹಾಗೂ ಪಿನ್ ನಂಬರ್ ಪಡೆದು ಮೋಸ ಮಾಡುತ್ತಿದ್ದ ವ್ಯಕ್ತಿಯನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ಎಟಿಎಂನಲ್ಲಿ ಸಹಾಯ ಮಾಡುವ ನೆಪ: ಪಾಸ್ಕೋಡ್ ಪಡೆದು ಮೋಸ ಮಾಡುತ್ತಿದ್ದವನ ಬಂಧನ - shimoga latest news
ವ್ಯಕ್ತಿಯೊಬ್ಬರು ಕೆನಾರಾ ಬ್ಯಾಂಕ್ ಎಟಿಎಂನಲ್ಲಿ ಹಣ ಡ್ರಾ ಮಾಡುವಾಗ ಸಮಸ್ಯೆ ಉಂಟಾಗಿದೆ. ಆರೋಪಿ ಆ ವ್ಯಕ್ತಿಯ ಬಳಿ ಪರಿಚಿತನಂತೆ ಹೋಗಿ ಕಾರ್ಡ್ ನಂಬರ್ ಹಾಗೂ ಎಟಿಎಂ ಪಿನ್ ತೆಗೆದು ಕೊಂಡು ಅವರ ಖಾತೆಯಿಂದ 37.887 ರೂ ಹಣವನ್ನು ಡ್ರಾ ಮಾಡಿಕೊಂಡು ಮೋಸ ಮಾಡಿದ್ದಾನೆ. ಈ ಹಿನ್ನೆಲೆ ಆರೋಪಿಯನ್ನು ಬಂಧಿಸಲಾಗಿದೆ.
ಭದ್ರಾವತಿಯ ಹುಡ್ಕೊ ಕಾಲೋನಿಯ ಸಾಗರ ಅಲಿಯಾಸ್ ದಡಿಯಾ ದಿಲೀಪ್ ಬಂಧಿತ ಆರೋಪಿ. ಹೊಸೂರು ಸಿದ್ದಾಪುರ ಗ್ರಾಮದ ವ್ಯಕ್ತಿಯೊಬ್ಬರು ಕೆನಾರಾ ಬ್ಯಾಂಕ್ ಎಟಿಎಂನಲ್ಲಿ ಹಣ ಡ್ರಾ ಮಾಡುವಾಗ ಸಮಸ್ಯೆ ಉಂಟಾಗಿದೆ. ಆರೋಪಿ ಆ ವ್ಯಕ್ತಿಯ ಬಳಿ ಪರಿಚಿತನಂತೆ ಹೋಗಿ ಕಾರ್ಡ್ ನಂಬರ್ ಹಾಗೂ ಎಟಿಎಂ ಪಿನ್ ತೆಗೆದು ಕೊಂಡು ಅವರ ಖಾತೆಯಿಂದ 37.887 ರೂ ಹಣವನ್ನು ಡ್ರಾ ಮಾಡಿಕೊಂಡು ಮೋಸ ಮಾಡಿದ್ದಾನೆ.
ಈ ಕುರಿತು ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಇಎನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗುರುರಾಜ್ ರವರ ನೇತೃತ್ವದಲ್ಲಿ ಸಾಗರನನ್ನು ವಶಕ್ಕೆ ಪಡೆದು ಆತನಿಂದ 45 ಸಾವಿರ ರೂ ನಗದು ವಶಕ್ಕೆ ಪಡೆಯಾಗಿದೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ.