ಕರ್ನಾಟಕ

karnataka

ETV Bharat / state

ಪೊಲೀಸ್, ಪತ್ರಕರ್ತ ಎಂದು ಹೇಳಿಕೊಂಡು ಕೊರೊನಾ ಫಂಡ್ ವಸೂಲಿ: ಆರೋಪಿ ವಶಕ್ಕೆ

ಶಿವಮೊಗ್ಗದ ಎಪಿಎಂಸಿಯಲ್ಲಿ ಸಂತೋಷ್ ಎಂಬಾತ ಕೈಯಲ್ಲಿ ಫೈಲ್ ಹಿಡಿದು ತಾನು ಪೊಲೀಸ್ ಅಂತ ಕೆಲವರ ಬಳಿ, ಇನ್ನೂ ಕೆಲವರ ಬಳಿ ತಾನು ಪತ್ರಕರ್ತನೆಂದು ಹೇಳಿ ಹಣ ವಸೂಲಿ ಮಾಡುತ್ತಿದ್ದ. ಈಗ ಪೊಲೀಸರ ಅತಿಥಿಯಾಗಿದ್ದಾನೆ.

Arrest of accused who was collect fund name of corona
ಪೊಲೀಸ್, ಪತ್ರಕರ್ತ ಎಂದೇಳಿಕೊಂಡು ಕೊರೊನಾ ಫಂಡ್ ವಸೂಲಿ:

By

Published : Apr 27, 2020, 12:20 PM IST

ಶಿವಮೊಗ್ಗ: ಪೊಲೀಸ್ ಹಾಗೂ ಪತ್ರಕರ್ತನೆಂದು ಹೇಳಿಕೊಂಡು ಕೊರೊನಾ ಫಂಡ್ ಹೆಸರಲ್ಲಿ ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿಯನ್ನು ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಶಿವಮೊಗ್ಗದ ಎಪಿಎಂಸಿಯಲ್ಲಿ ಇಂದು ಸಂತೋಷ್ ಎಂಬಾತ ಕೈಯ್ಯಲ್ಲಿ ಫೈಲ್ ಹಿಡಿದು ತಾನು ಪೊಲೀಸ್ ಅಂತ ಕೆಲವರ ಬಳಿ, ಇನ್ನೂ ಕೆಲವರ ಬಳಿ ತಾನು ಪತ್ರಕರ್ತನೆಂದು ಹೇಳಿ ಹಣ ವಸೂಲಿ ಮಾಡುತ್ತಿದ್ದ.

ಈ ಬಗ್ಗೆ ಪ್ರಶ್ನೆ ಮಾಡಿದಾಗ ಸರಿಯಾಗಿ ಉತ್ತರಿಸಿದ ಕಾರಣ ಸಾರ್ವಜನಿಕರು ಸಂತೋಷ್​ನನ್ನು ವಿನೋಬನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಈತ ಶಿವಮೊಗ್ಗದ ದುರ್ಗಿಗುಡಿಯ ಎರಡನೇ ತಿರುವಿನ ನಿವಾಸಿಯಾಗಿದ್ದು, ಈ ಹಿಂದೆ ಹಲವು ಸಂಘಟನೆಗಳ ಹೆಸರಿನಲ್ಲಿ ಹಣ ವಸೂಲಿ ಮಾಡಿದ್ದ ಎನ್ನಲಾಗಿದೆ.

ABOUT THE AUTHOR

...view details