ಕರ್ನಾಟಕ

karnataka

ETV Bharat / state

ಇಷ್ಟು ಮೌಲ್ಯದ....! ಚಾಂಪಿಯನ್​ ಶಿಫ್​ ರೈಫಲ್ ಕದ್ದ ಕಳ್ಳನ ಬಂಧನ - 4.75 ಲಕ್ಷ ಮೌಲ್ಯದ ರೈಫಲ್ ಕದ್ದ ಕಳ್ಳನ ಬಂಧನ

ತೋಟದ ಮನೆಯಲ್ಲಿಟ್ಟಿದ್ದ 4 ಲಕ್ಷ 75 ಸಾವಿರ ರೂ ಮೌಲ್ಯದ ರೈಫಲ್ ಕದ್ದ ಕದೀಮನನ್ನು ಹೊಳೆಹೊನ್ನೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

arrest-of-a-thief-who-stole-a-rifle-worth-rs-4-dot-75-lakh-in-shimoga
4.75 ಲಕ್ಷ ಮೌಲ್ಯದ ರೈಫಲ್ ಕದ್ದ ಕಳ್ಳನ ಬಂಧನ...

By

Published : Jan 1, 2020, 11:11 PM IST

ಶಿವಮೊಗ್ಗ:ಜಿಲ್ಲೆಯತೋಟದ ಮನೆಯಲ್ಲಿಟ್ಟಿದ್ದ 4 ಲಕ್ಷ 75 ಸಾವಿರ ರೂ ಮೌಲ್ಯದ ರೈಫಲ್ ಕದ್ದ ಕದೀಮನನ್ನು ಹೊಳೆಹೊನ್ನೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಡಿಸೆಂಬರ್ 23 ರಂದು ಭದ್ರಾವತಿ ತಾಲೂಕು ಹುನುಮಂತಪುರ ಗ್ರಾಮದ ತೋಟದ ಮನೆಯಲ್ಲಿದ್ದ ಶೂಟಿಂಗ್ ಚಾಪಿಯನ್​ ಶಿಫ್​​ನಲ್ಲಿ ಬಳಸುವ ವಿದೇಶಿ ನಿರ್ಮಿತ ರೈಫಲ್​ನ್ನ ರಾತ್ರಿ ಹೊತ್ತು ನುಗ್ಗಿ ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಮಾಲೀಕ ಶರತ್ ಪೊಲೀಸರಿಗೆ ದೂರು ನೀಡಿದ್ದರು.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಹೊಳೆಹೊನ್ನೂರು ಪೊಲೀಸರು ತನಿಖೆ ನಡೆಸಿ, ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಕೊರಟಿಕೆರೆ ಗ್ರಾಮದ ನಾಗರಾಜ ಅಲಿಯಾಸ್ ರಾಜ (35) ಎಂಬಾತನನ್ನು ಬಂಧಿಸಿದ್ದಾರೆ.

ಕಳ್ಳತನ ನಡೆದ ಒಂದು ವಾರದಲ್ಲೇ ಕಳ್ಳನನ್ನು ಬಂಧಿಸಿದ ಹೊಳೆಹೊನ್ನೂರು ಪೊಲೀಸರಿಗೆ ಎಸ್ಪಿ ಶಾಂತರಾಜು ಅಭಿನಂದನೆ ಸಲ್ಲಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details