ಶಿವಮೊಗ್ಗ :ಜಿಂಕೆ ಕೊಂಬು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನ ಅರಣ್ಯ ಸಂಚಾರಿದಳದ ಸಿಬ್ಬಂದಿ ಬಂಧಿಸಿದ್ದಾರೆ. ತಾಲೂಕಿನ ಯರೇಕೊಪ್ಪ ಗ್ರಾಮದ ಟಿ.ನಾಗೇಶ್ ನಾಯ್ಕ ಬಂಧಿತ ಆರೋಪಿ. ಜಿಂಕೆ ಕೊಂಬನ್ನು ಮಾರಾಟ ಮಾಡಲು ಯತ್ನಿಸುವಾಗ ಖಚಿತ ಮಾಹಿತಿ ಪಡೆದ ಅರಣ್ಯ ಸಂಚಾರಿದಳದ ಸಿಬ್ಬಂದಿ ದಾಳಿ ಮಾಡಿದ್ದಾರೆ.
ಅರಣ್ಯ ಸಂಚಾರಿದಳ ಕಾರ್ಯಾಚರಣೆ : ಜಿಂಕೆ ಕೊಂಬು ಮಾರಾಟಗಾರನ ಬಂಧನ - ಶಿವಮೊಗ್ಗದಲ್ಲಿ ಜಿಂಕೆ ಕೊಂಬು ಮಾರಾಟಗಾರನ ಬಂಧನ
ದಾಳಿಯ ವೇಳೆ ಆರೋಪಿಯಿಂದ ಮೂರು ಜೊತೆ ಜಿಂಕೆ ಕೊಂಬುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ನಾಗೇಶ್ ನಾಯ್ಕ ತಾವರೆಕೊಪ್ಪದ ಬಳಿ ಈ ಜಿಂಕೆ ಕೊಂಬುಗಳನ್ನು ಮಾರಾಟ ಮಾಡಲು ಯತ್ನಿಸಿದ್ದ. ಆರೋಪಿ ನಾಗೇಶ್ ನಾಯ್ಕನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ..
ಜಿಂಕೆ ಕೊಂಬು ಮಾರಾಟಗಾರನ ಬಂಧನ
ದಾಳಿಯ ವೇಳೆ ಆರೋಪಿಯಿಂದ ಮೂರು ಜೊತೆ ಜಿಂಕೆ ಕೊಂಬುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ನಾಗೇಶ್ ನಾಯ್ಕ ತಾವರೆಕೊಪ್ಪದ ಬಳಿ ಈ ಜಿಂಕೆ ಕೊಂಬುಗಳನ್ನು ಮಾರಾಟ ಮಾಡಲು ಯತ್ನಿಸಿದ್ದ. ಆರೋಪಿ ನಾಗೇಶ್ ನಾಯ್ಕನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.