ಶಿವಮೊಗ್ಗ:ಸಂಸದ ಬಿ.ವೈ ರಾಘವೇಂದ್ರ ಯಡಿಯೂರಪ್ಪ ಅವರ ಮಗನಾಗಿ ಉಳಿಯದೇ ಜನನಾಯಕನಾಗಿ ಗುರುತಿಸಿಕೊಂಡಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಇಂದು ಶಿಕಾರಿಪುರದ ಕುಮದ್ವತಿ ಕಾಲೇಜು ಆವರಣದಲ್ಲಿ ಸಂಸದ ಬಿ. ವೈ ರಾಘವೇಂದ್ರ ಅವರ ಹುಟ್ಟುಹಬ್ಬದಲ್ಲಿ ಭಾಗಿಯಾಗಿ ಅಭಿನಂದನಾ ನುಡಿಗಳನ್ನು ಆಡಿದರು.
ಮೊದಲು ನಾವೆಲ್ಲಾ ರಾಘವೇಂದ್ರ ಅವರನ್ನು ಯಡಿಯೂರಪ್ಪ ಅವರ ಮಗ ಎಂದು ಎತ್ತಿ ಅಪ್ಪಿಕೊಂಡಿದ್ದೇವೆ. ಆದರೆ, ಈಗ ರಾಘವೇಂದ್ರ ತಮ್ಮ ಅಭಿವೃದ್ದಿಯ ಕೆಲಸದ ಮೂಲಕ ತಮ್ಮನ್ನು ಗುರುತಿಸಿಕೊಂಡಿದ್ದಾರೆ ಎಂದರು.
ಕ್ಷೇತ್ರದಲ್ಲಿ ರಾಘವೇಂದ್ರ ಅವರು ತಮ್ಮದೇ ಆದ ಚಾಪು ಮೂಡಿಸಿದ್ದಾರೆ. ಅವರು ನಾಯಕತ್ವ ಗುಣವನ್ನು ಹೊಂದಿದ್ದಾರೆ. ಹಿಂದಿನ ಲೋಕಸಭಾ ಸದಸ್ಯರುಗಳು ಏನೂ ಮಾಡಿದ್ರು ಅಂತ ಗೂತ್ತಾಗುತ್ತಿರಲಿಲ್ಲ. ಲೋಕಸಭೆಗೆ ಹೋಗಿದ್ರಾ, ಅಲ್ಲಿ ಪ್ರಶ್ನೆ ಕೇಳಿದ್ರಾ ಅಂತ ಗೊತ್ತಿಲ್ಲ. ಆದರೆ, ರಾಘವೇಂದ್ರ ಅವರು ಪ್ರತಿ ಗ್ರಾಮೀಣ ಪ್ರದೇಶ ಸುತ್ತಿ ಅಭಿವೃದ್ದಿ ಮಾಡಿದ್ದಾರೆ. ನಮ್ಮ ಕ್ಷೇತ್ರದ ಅಭಿವೃದ್ದಿ ಮಾಡಿದ್ದಾರೆ. ಇದರಿಂದ ನಮ್ಮ ಹೆಮ್ಮೆ ರಾಘಣ್ಣ ಎಂದು ತಿಳಿಸಿದರು.
ರಾಘವೇಂದ್ರ ಅವರು ಪಾದರಸದ ರೀತಿ ಓಡಾಟ ನಡೆಸಿ ಕ್ಷೇತ್ರವನ್ನು ಅಭಿವೃದ್ದಿ ಪಡಿಸಿದ್ದಾರೆ. ಅಭಿವೃದ್ದಿಗೆ ಕೇವಲ ಪತ್ರ ಬರೆಯದೇ, ಟೇಬಲ್ ಟೇಬಲ್ ತಿರುಗಾಡಿ ಅನುದಾನ ತಂದು ಅಭಿವೃದ್ದಿ ಮಾಡಿದ್ದಾರೆ. ಅವರ ಅಭಿವೃದ್ದಿ ನಮ್ಮ ಕಣ್ಣಿನ ಮುಂದಿದೆ. ಸ್ವಾತಂತ್ರ ಪೂರ್ವದ ತೀರ್ಥಹಳ್ಳಿ ತುಂಗಾ ಸೇತುವೆಗೆ ನೂತನ ಸೇತುವೆ ಮಂಜೂರು ಮಾಡಿಸಿದ್ದಾರೆ.