ಶಿವಮೊಗ್ಗ:ಮಾದಕ ದ್ರವ್ಯ ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಕೆಲ ನಟಿಯರನ್ನು ಬಂಧಿಸಲಾಗಿತ್ತು. ಈ ಕುರಿತು ಇಂದು ಹೈದರಬಾದ್ನ ಸೆಂಟ್ರಲ್ ಎಫ್ಎಸ್ಎಲ್ ವರದಿ ಬಂದಿದ್ದು, ನಟಿಯರು ಡ್ರಗ್ ಸೇವನೆ ಮಾಡಿದ್ದು ದೃಢವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ರಾಗಿಣಿ ಹಾಗೂ ಸಂಜನಾ ಡ್ರಗ್ಸ್ ಸೇವಿಸಿದ್ದು ಧೃಡ ತಾಲೂಕು ಮಾಚೇನಹಳ್ಳಿಯಲ್ಲಿ ಪ್ರತಿಕ್ರಿಯಿಸಿದ ಅವರು, ಎಫ್ಎಸ್ಎಲ್ ವರದಿಯನ್ನು ನಮ್ಮ ಪೊಲೀಸರು ಕೋರ್ಟ್ಗೆ ಸಲ್ಲಿಸಲಿದ್ದಾರೆ. ಅದರಿಂದಾಗಿ ಪ್ರಕರಣ ಇನ್ನುಷ್ಟು ಗಟ್ಟಿಯಾಗುತ್ತದೆ. ಮಾದಕ ವಸ್ತುಗಳನ್ನು ಪೊಲೀಸರು ಟನ್ ಗಟ್ಟಲೆ ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ. ಎಲ್ಲವನ್ನೂ ನಾಶ ಮಾಡಲಾಗುತ್ತಿದೆ. ಇಷ್ಟೆಲ್ಲ ಮಾದಕ ದ್ರವ್ಯ ಹೊರಗಡೆ ಸಿಕ್ಕಿದರೆ ಏನ್ ಆಗ್ತಾ ಇತ್ತು ಎಂದು ಊಹಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಎಫ್ಎಸ್ಎಲ್ ಲ್ಯಾಬ್ ಅಭಿವೃದ್ದಿ: ರಾಜ್ಯದಲ್ಲಿ ಎಫ್ಎಸ್ಎಲ್ ಲ್ಯಾಬ್ ನಿರ್ಮಾಣ ಮಾಡಲಾಗುತ್ತಿದೆ. ಲ್ಯಾಬ್ನಲ್ಲಿ ಇನ್ನಷ್ಟು ವಿಷಯಗಳನ್ನು ಸೇರಿಸಿ ಅಭಿವೃದ್ಧಿ ಪಡಿಸಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದರು.
ಪೊಲೀಸರಿಗೆ ಉತ್ತಮವಾದ ಮನೆ: ಪೊಲೀಸ್ ಸಿಬ್ಬಂದಿಗೆ ಉತ್ತಮವಾದ ಮನೆ ನಿರ್ಮಾಣ ಮಾಡಿ ಕೊಡಲಾಗುತ್ತಿದೆ. ನಮ್ಮಲ್ಲಿ ಬ್ರಿಟೀಷ್ ಕಾಲದ ಕ್ವಾರ್ಟಸ್ ನಿರ್ಮಾಣ ಮಾಡಲಾಗುತ್ತಿದೆ. ಈಗ ಎಲ್ಲ ಹೆಚ್ಚಾಗಿ ಉನ್ನತ ವಿದ್ಯಾಭ್ಯಾಸ ಮಾಡಿರುವವರು ಬರುತ್ತಿದ್ದಾರೆ. ಅವರಿಗೆಲ್ಲ ಒಳ್ಳೆಯ ಮನೆ ನಿರ್ಮಾಣ ಮಾಡಿ ಕೊಡಲಾಗುತ್ತಿದೆ ಎಂದರು.
ಗಣೇಶನ ಹಬ್ಬಕ್ಕಿಂತ ಬದುಕು ಮುಖ್ಯ: ಗಣೇಶನ ಹಬ್ಬಕ್ಕಿಂತ ಬದುಕು ಮುಖ್ಯ ಎಂದು ಸಿಎಂ ಹೇಳಿದ್ದಾರೆ. ಈಗ ಮತ್ತೆ ಎಲ್ಲ ಕಡೆ ಕೋವಿಡ್ ಸೋಂಕು ಹರಡುತ್ತಿದೆ. ಇದರಿಂದ ಹಬ್ಬ ಹರಿದಿನಗಳಲ್ಲಿ ಪಾಸಿಟಿವಿಟಿ ಹೆಚ್ಚಾಗುತ್ತದೆ. ಗಣೇಶ ಹಬ್ಬದ ಕುರಿತು ಚರ್ಚೆ ನಡೆಸಲಾಗುವುದು. ಅಲ್ಲದೇ, ಯತ್ನಾಳ್ ಮನವೊಲಿಸುವುದಾಗಿ ತಿಳಿಸಿದರು.
ಆಫ್ಘನ್ನಲ್ಲಿರುವ ಕನ್ನಡಿಗರ ಸಂಖ್ಯೆ ತಿಳಿದುಕೊಳ್ಳಲು ಅಧಿಕಾರಿ ನೇಮಕ: ಅಫ್ಘಾನಿಸ್ತಾನ ದಿಂದ ಭಾರತಕ್ಕೆ 9 ಜನರು ಬಂದಿದ್ದಾರೆ. ಇದರಲ್ಲಿ ಓರ್ವರು ಇಟಲಿಗೆ ತೆರಳಿದ್ದಾರೆ. ಅಲ್ಲಿ ಕನ್ನಡಿಗರೆಷ್ಟು ಮಂದಿ ಇದ್ದಾರೆ ಅಂತ ನಮಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಇದಕ್ಕಾಗಿ ಸಿಒಡಿಯ ಎಡಿಜಿಪಿ ಉಮೇಶ್ ಅವರನ್ನು ನೇಮಕ ಮಾಡಲಾಗಿದೆ. ಈಗಾಗಲೇ ದಿಲೀಪ್ ರೈ ಎನ್ನುವವರು ಮಂಗಳೂರಿಗೆ ಬಂದಿದ್ದು, ಅವರ ಜೊತೆ ನಾನು ಮಾತನಾಡಿದ್ದೇನೆ ಎಂದರು.