ಶಿವಮೊಗ್ಗ: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಮ್ಮನ್ನು ಅಗಲಿ ಒಂದು ವರ್ಷವಾದರೂ ಅಭಿಮಾನಿಗಳು ಇನ್ನೂ ಮರೆತಿಲ್ಲ. ಇದಕ್ಕೆ ನೈಜ ಉದಾಹರಣೆ ಎಂಬಂತೆ ದೀಪಾವಳಿ ಸಮಯದಲ್ಲಿ ಆಚರಿಸುವ ಮಲೆನಾಡಿನ ಅಂಟಿಗೆ ಪಿಂಟಿಗೆ ಹಬ್ಬ.
ಮಲೆನಾಡಿನಲ್ಲಿ ದೀಪಾವಳಿ ಹಬ್ಬವನ್ನ ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ಈ ಹಬ್ಬದಲ್ಲಿ ಜನಪದ ಕಲೆಗಳು ಆನಾವರಣಗೊಳ್ಳುತ್ತವೆ. ಹಳ್ಳಿಯ ಜನರು ತಮ್ಮದೇ ಜನಪದ ಭಾಷೆಯಲ್ಲಿ ಹಾಡುಗಳನ್ನು ಕಟ್ಟಿ ಹಾಡುವ ಮೂಲಕ ಮನೆ ಮನೆ ತೆರಳಿ ಶುಭ ಕೋರುತ್ತಾರೆ. ಅಟಿಂಗೆ ಪಿಂಟಿಗೆಯಲ್ಲಿ ಮನೆಯಿಂದ ಮನೆಗೆ ದೀಪ ತೆಗೆದುಕೊಂಡು ಹೋಗಿ ದೇವರ ಹಾಡುಗಳನ್ನ ಹಾಡುವುದು ಸಾಮಾನ್ಯ. ಆದರೆ ಶಿವಮೊಗ್ಗ ತಾಲೂಕು ಪುರದಾಳು ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆಸಿದ ಅಂಟಿಗೆ ಪಿಂಟಿಗೆಯಲ್ಲಿ ಅಪ್ಪು ಅಭಿನಯದ ಗೊಂಬೆ ಹೇಳುತೈತೆ.. ನೀನೇ ರಾಜಕುಮಾರ ಹಾಡನ್ನು ಹಾಡಿದ್ದಾರೆ.