ಶಿವಮೊಗ್ಗ: ಬಜರಂಗ ದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹತ್ತು ಜನರನ್ನು ಬಂಧಿಸಿದ್ದೇವೆ. ವಶಕ್ಕೆ ಪಡೆದವರ ವಿಚಾರಣೆ ಆರಂಭಿಸುತ್ತೇವೆ. ಹದಿನಾಲ್ಕು ದಿನದ ಬಳಿಕ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುತ್ತೇವೆ ಎಂದು ಶಿವಮೊಗ್ಗ ಎಸ್ಪಿ ಲಕ್ಷ್ಮಿಪ್ರಸಾದ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲೆ ಮಾಡಲು ಬಳಸಿಕೊಂಡಿದ್ದ ಕಾರು, ಆರೋಪಿಗಳು ತಪ್ಪಿಸಿಕೊಳ್ಳಲು ಬಳಸಿದ್ದ ಕಾರು ಮತ್ತು ಬೈಕ್ನನ್ನು ವಶಕ್ಕೆ ಪಡೆದಿದ್ದೇವೆ. ಕೊಲೆ ಮಾಡಲು ಬೇರೆ ರಾಜ್ಯದ ಕಾರನ್ನು ಬಳಸಿಕೊಂಡಿದ್ದಾರೆ. ಆ ಕಾರು ಯಾರದ್ದು, ಶಿವಮೊಗ್ಗಕ್ಕೆ ಯಾಕೆ ಬಂತು, ಕಾರಿನ ಮಾಲೀಕರು ಯಾರು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದರು.
ಶಿವಮೊಗ್ಗ ಎಸ್ಪಿ ಲಕ್ಷ್ಮಿಪ್ರಸಾದ್ ವಿಡಿಯೋ ಕಾಲ್ ಮಾಡಿದವರು ಪತ್ತೆ: ಹರ್ಷನ ಮೊಬೈಲ್ ಇದುವರೆಗೆ ಪತ್ತೆಯಾಗಿಲ್ಲ. ಆದರೆ ಆತನಿಗೆ ವಿಡಿಯೋ ಕರೆ ಮಾಡಿದವರನ್ನು ಪತ್ತೆ ಮಾಡಿದ್ದೇವೆ. ಪೊಲೀಸರಿಗೆ ಲಾಂಗ್- ಮಚ್ಚು ತೋರಿಸಿ ಬೆದರಿಕೆ ಹಾಕಿದವರು ಯಾರು ಎಂಬುದು ಗೊತ್ತಾಗಿದೆ. ಅವರನ್ನು ಶೀಘ್ರವೇ ಬಂಧಿಸುತ್ತೇವೆ ಎಂದು ಎಸ್ ಪಿ ಮಾಹಿತಿ ನೀಡಿದರು. ಕೊಲೆ ಹಿಂದೆ ಯಾವುದಾದರೂ ಸಂಘಟನೆಗಳಿವೆಯೇ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ ಎಂದರು.
ಇದನ್ನೂ ಓದಿ:ಹರ್ಷ ಕೊಲೆ ಪ್ರಕರಣ: ಬಂಧಿತ 10 ಆರೋಪಿಗಳು 11 ದಿನ ಪೊಲೀಸ್ ಕಸ್ಟಡಿಗೆ
ಖಾಸಿಫ್, ಆಸಿಫ್ ಮೇಲೆ ಐದು, ರಿಹಾನ್ ಮೇಲೆ ಮೂರು ಹಾಗೂ ಅಪ್ನಾನ್ ಮೇಲೆ ಎರಡು ಕಾನೂನು ಸುವ್ಯವಸ್ಥೆ ಪ್ರಕರಣಗಳಿವೆ. ಉಳಿದಂತೆ ಇವರ ಮೇಲೆ ಹಲವು ಡಕಾಯಿತಿ, ಕಳ್ಳತನ ಪ್ರಕರಣಗಳು ದಾಖಲಾಗಿವೆ. ಕೊಲೆಯಾದ ಹರ್ಷನ ಮೇಲೆ ರಿಲಿಜಿಯನ್ ಸಂಬಂಧಿಸಿದ ಎರಡು ಕೇಸ್ಗಳಿದ್ದವು ಎಂದು ಹೇಳಿದರು.