ಕರ್ನಾಟಕ

karnataka

ETV Bharat / state

ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿತ.. ಕರಾವಳಿಗೆ ಬದಲಿ ಮಾರ್ಗ - Traffic stop in agumbe ghat

ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿತ-ಸಂಚಾರ ನಿರ್ಬಂಧ-ಉಡುಪಿ ಮತ್ತು ಮಂಗಳೂರಿಗೆ ಬದಲಿ ಮಾರ್ಗದ ವ್ಯವಸ್ಥೆ

another route from shivamogga to Mangalore udupi as agumbe hill collapsed
ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿತ-ಕರಾವಳಿಗೆ ಬದಲಿ ಮಾರ್ಗ

By

Published : Jul 10, 2022, 6:11 PM IST

Updated : Jul 10, 2022, 7:00 PM IST

ಶಿವಮೊಗ್ಗ: ಆಗುಂಬೆ ಘಾಟಿಯಲ್ಲಿ ಗುಡ್ಡ(ಮಣ್ಣು) ಕುಸಿತವಾಗಿರುವುದರಿಂದ ಕರಾವಳಿಗೆ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ತಿಳಿಸಿದ್ದಾರೆ. ಕುಸಿತವಾಗಿರುವ ಮಣ್ಣು ಮತ್ತು ಮರಮುಟ್ಟುಗಳನ್ನು ತೆರವುಗೊಳಿಸುವ ಕಾರ್ಯ ಚುರುಕುಗೊಂಡಿದೆ.

ಈ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಜುಲೈ 12ರ ಮುಂಜಾನೆ 8 ಗಂಟೆಯವರೆಗೂ ನಿರ್ಬಂಧಿಸಲಾಗಿದೆ. ನಂತರ ಜುಲೈ 30ರ ವರೆಗೆ ಈ ಮಾರ್ಗದಲ್ಲಿ ಲಘು ವಾಹನ ಸಂಚಾರಕ್ಕೆ ಮಾತ್ರ ಅನುವು ಮಾಡಿಕೊಡಲಾಗುತ್ತದೆ.

ಬದಲಿ ಮಾರ್ಗ:ಶಿವಮೊಗ್ಗದಿಂದ ಉಡುಪಿ-ಮಂಗಳೂರಿಗೆ ಹೋಗುವ ಪ್ರಯಾಣಿಕರು ತೀರ್ಥಹಳ್ಳಿ-ಕೊಪ್ಪ-ಶೃಂಗೇರಿ- ಕಾರ್ಕಳ-ಮಂಗಳೂರು ತಲುಪಬಹುದು ಹಾಗೂ ತೀರ್ಥಹಳ್ಳಿ-ಮಾಸ್ತಿಕಟ್ಟೆ-ಕುಂದಾಪುರ ಮಾರ್ಗವನ್ನು ಬಳಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ರೈಸ್ ಮಿಲ್​​ನ ಮೇಲ್ಛಾವಣಿ ಕುಸಿತ

ರೈಸ್ ಮಿಲ್​​ನ ಮೇಲ್ಛಾವಣಿ ಕುಸಿತ:ಭಾರಿ ಮಳೆ ಹಿನ್ನೆಲೆ ಕಾರ್ಗಲ್​ನ ಬೃಂದಾವನ ಡ್ರೈಯರ್​ ರೈಸ್ ಮಿಲ್​​ನ ಮೇಲ್ಛಾವಣಿ ಕುಸಿದು ಬಿದ್ದು ಸಾವಿರಾರು ಭತ್ತದ ಚೀಲ ಹಾಳಾಗಿದೆ. ಸುಮಾರು 80 ಅಡಿ ಎತ್ತರದ ಗೋಡೆ ಜೊತೆಗೆ ಮೇಲ್ಛಾವಣಿ ಸಹ ಕುಸಿದು ಬಿದ್ದಿದೆ. ರೈಸ್ ಮಿಲ್​ನ ಯಂತ್ರೋಪಕರಣಗಳು, ಡ್ರೈಯರ್ ಮಷಿನ್, ಎರಡು ಜನರೇಟರ್​ಗಳು ಹಾನಿಗೊಳಗಾಗಿದೆ. ಪರಿಣಾಮ ಸುಮಾರು ಒಂದು ಕೋಟಿಗೂ ಅಧಿಕ ನಷ್ಟ ಉಂಟಾಗಿದೆ.

ಇದನ್ನೂ ಓದಿ:ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿತ.. ಗೃಹ ಸಚಿವರ ಭೇಟಿ-ತುರ್ತು ಕಾರ್ಯಕ್ಕೆ ಸೂಚನೆ

ಅದೃಷ್ಟವಶಾತ್ ಕಾರ್ಮಿರು ಕೆಲಸ ಮಾಡುವ ಸ್ಥಳದಲ್ಲಿ ಯಾವುದೇ ಹಾನಿಯಾಗಿಲ್ಲ. ಒಂದು ವೇಳೆ ಹಾಗಾಗಿದ್ರೆ ಅನೇಕರ ಪ್ರಾಣಕ್ಕೆ ಕುತ್ತು ಬರುತ್ತಿತ್ತು ಎಂದು ರೈಸ್ ಮಿಲ್ ಮಾಲೀಕ ವಿನೋದ್ ಮಹಲೆ ತಿಳಿಸಿದ್ದಾರೆ. ಈ ಕುರಿತು ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Jul 10, 2022, 7:00 PM IST

ABOUT THE AUTHOR

...view details