ಶಿವಮೊಗ್ಗ:''ಶಿವಮೊಗ್ಗ, ಮಾನ್ವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಟಿಕೆಟ್ ಇಂದೇ ಘೋಷಣೆ ಆಗಲಿದೆ'' ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಟಿಕೆಟ್ ಘೋಷಣೆ ಆಗದಿರುವುದಕ್ಕೆ ಕಾರಣ ಗೊತ್ತಿಲ್ಲ. ವಾತಾವರಣ ಚೆನ್ನಾಗಿದೆ. ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಹೋದರು ಅಂತ ಹೇಳಿ ಚುನಾವಣೆ ಫಲಿತಾಂಶದ ಮೇಲೆ ಯಾವುದೇ ದುಷ್ಪರಿಣಾಮ ಆಗುವುದಿಲ್ಲ'' ಎಂದರು.
ಇದನ್ನೂ ಓದಿ:ಪದ್ಮನಾಭನಗರದಿಂದ ನಾನು ಅಥವಾ ಡಿಕೆ ಸುರೇಶ್ ಇಬ್ಬರಲ್ಲಿ ಒಬ್ಬರು ನಾಮಪತ್ರ ಸಲ್ಲಿಸುತ್ತೇವೆ: ರಘುನಾಥ್ ನಾಯ್ಡು
''ಬಿಜೆಪಿಗೆ 125ರಿಂದ 130 ಸೀಟುಗಳು ಬರಲಿವೆ. ಯಾರದೇ ಸಹಕಾರ ಇಲ್ಲದೇ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚನೆ ಮಾಡುವುದು ನಿಶ್ಚಿತ. ಆ ದಿಕ್ಕಿನಲ್ಲಿ ನಾಳೆ ಮಧ್ಯಾಹ್ನದ ಮೇಲೆ ವಾಪಸು ನನ್ನ ಪ್ರವಾಸ ಪ್ರಾರಂಭ ಮಾಡುತ್ತೇನೆ. ನಾಳೆ ವಿಜಯೇಂದ್ರ ನಾಮಪತ್ರ ಸಲ್ಲಿಸುತ್ತಿದ್ದಾರೆ. ಹಾಗಾಗಿ ಅಲ್ಲಿ ಎರಡು, ಮೂರು ಗಂಟೆ ಇದ್ದು, ಬೆಂಗಳೂರಿಗೆ ಹೋಗುತ್ತೇನೆ'' ಎಂದರು.
ಇದನ್ನೂ ಓದಿ:ಮಧ್ಯ ಕರ್ನಾಟಕದಲ್ಲಿ ಬಿಜೆಪಿಯದ್ದೇ ಪಾರುಪತ್ಯ: ಗತವೈಭವ ಮೆರೆಯುತ್ತಾ ಕಾಂಗ್ರೆಸ್?
''ಜಗದೀಶ್ ಶೆಟ್ಟರ್ಗೆ ಕೇಂದ್ರದ ನಾಯಕರೇ ಮಾತನಾಡಿ, ತಮ್ಮ ಪತ್ನಿಗೆ ಟಿಕೆಟ್ ಕೊಡುತ್ತೇವೆ. ನಿಮ್ಮನ್ನು ರಾಜ್ಯಸಭೆಗೆ ತಗೊಂಡು ಕೇಂದ್ರ ಮಂತ್ರಿ ಮಾಡುತ್ತೇವೆ, ದಯಮಾಡಿ ಸಹಕರಿಸಿ ಎಂದು ಹೇಳಿದ್ದರು. ಆದ್ರೆ ಅವರ ತಮ್ಮ ಹಠ ಬಿಡಲಿಲ್ಲ. ಚುನಾವಣೆಗೆ ಸಿದ್ಧತೆ ನಡೆದಿದೆ. ನಾಳೆಯೊಳಗೆ ಎಲ್ಲವೂ ಅಂತಿಮ ಆಗಲಿದೆ" ಎಂದರು. ಜಗದೀಶ್ ಶೆಟ್ಟರ್ ಏನೋ ಹೇಳಿದರು ಅಂತ ನಾವು ಉತ್ತರ ಕೊಡಲು ಹೋಗುವುದಿಲ್ಲ ಅವರ ತೀರ್ಮಾನ ಸರಿಯಲ್ಲ. ಅವರೇ ನಿರ್ಧಾರ ತಗೊಂಡಿದ್ದಾರೆ. ಇದು ಅವರ ಮೇಲೆಯೇ ದುಷ್ಪರಿಣಾಮ ಆಗುತ್ತೆ, ನಾವು ಚಿಂತನೆ ಮಾಡುವ ಅಗತ್ಯ ಇಲ್ಲ'' ಎಂದು ಹೇಳಿದರು.
ಇದನ್ನೂ ಓದಿ:ಕೆಆರ್ಪಿಪಿ ಕಚೇರಿ ಮೇಲೆ ಚುನಾವಣಾಧಿಕಾರಿಗಳಿಂದ ದಾಳಿ: ಜನಾರ್ದನ ರೆಡ್ಡಿಗೆ ನೋಟಿಸ್ ಜಾರಿ
ಯಡಿಯೂರಪ್ಪನವರೂ ಸಹ ಕಾಂಗ್ರೆಸ್ಗೆ ಬರುತ್ತಾರೆ ಎನ್ನುವ ಶಾಮನೂರು ಶಿವಶಂಕರಪ್ಪನವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ''ಶ್ಯಾಮನೂರು ಶಿವಶಂಕರಪ್ಪನವರಿಗೆ 92 ವರ್ಷ ಅಲ್ವಾ, ವಯಸ್ಸಾಗಿದೆ ಹಾಗಾಗಿ ತಮಾಷೆಗೆ ಹೇಳಿದ್ದಾರೆ. ಅವರ ಮೇಲೆ ನನಗೂ ಗೌರವ ಇದೆ. ಅವರಿಗೂ ನನ್ನ ಮೇಲೆ ಗೌರವ ಇದೆ. ಈ ಜನ್ಮದಲ್ಲಿ ನಾನು ಕಾಂಗ್ರೆಸ್ ಸೇರುವುದು ಅಸಾಧ್ಯ ಅಂತ ಅವರಿಗೂ ಗೊತ್ತಿದೆ, ನಿಮಗೂ ಗೊತ್ತಿದೆ. ಈ ಥರಹದ ಸಂಗತಿಗೆ ಹೆಚ್ಚು ಮಾನ್ಯತೆ ಬೇಡ'' ಎಂದು ತಿಳಿಸಿದರು.
ಇದನ್ನೂ ಓದಿ:ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಿಂದ ಬಿಜೆಪಿ ಮೇಲೆ ಯಾವುದೇ ಪರಿಣಾಮವಿಲ್ಲ: ಆರಗ ಜ್ಞಾನೇಂದ್ರ
ಅವರ ಕುಟುಂಬವೇ ವಿರೋಧಿಸಿದ್ದ ಕಾಂಗ್ರೆಸ್ ಮನೆಗೆ ಶೆಟ್ಟರ್ ಹೋಗಿದ್ದಾರೆ: ಶೋಭಾ ಕರಂದ್ಲಾಜೆ