ಶಿವಮೊಗ್ಗ: ದ್ವಿಚಕ್ರ ವಾಹನ ಸವಾರನ ಮೇಲೆ ಕಾಡುಕೋಣ ದಾಳಿ ನಡೆಸಿರುವ ಘಟನೆ ಸಾಗರ ತಾಲೂಕಿನ ಮಂಕಳಲೆ ಗ್ರಾಮದ ಬಳಿ ನಡೆದಿದೆ.
ಬೈಕ್ ಸವಾರನ ಮೇಲೆ ಕಾಡು ಕೋಣದ ದಾಳಿ: ಸವಾರನಿಗೆ ಗಾಯ - ಶಿವಮೊಗ್ಗದಲ್ಲಿ ಕಾಡುಕೋಣ ದಾಳಿ
ದ್ವಿಚಕ್ರ ವಾಹನದಲ್ಲಿ ತೆರಳುತ್ತಿರುವಾಗ ಕಾಡುಕೋಣ ದಾಳಿ ಮಾಡಿದ್ದು, ಸವಾರ ಶಶಿಧರ್ ಎಂಬುವವರು ಗಾಯಗೊಂಡಿದ್ದಾರೆ. ಅವರನ್ನು ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
![ಬೈಕ್ ಸವಾರನ ಮೇಲೆ ಕಾಡು ಕೋಣದ ದಾಳಿ: ಸವಾರನಿಗೆ ಗಾಯ animal Attack on a bike rider](https://etvbharatimages.akamaized.net/etvbharat/prod-images/768-512-7008795-202-7008795-1588263537395.jpg)
ಬೈಕ್ ಸವಾರನ ಮೇಲೆ ಕಾಡು ಕೋಣ ದಾಳಿ
ಮಂಕಳಲೆ ಗ್ರಾಮದ ಸವಾರ ಶಶಿಧರ್ ಗಾಯಗೊಂಡ ವ್ಯಕ್ತಿಯಾಗಿದ್ದು, ಹೊಟ್ಟೆ ಭಾಗದಲ್ಲಿ ಪೆಟ್ಟಾಗಿದೆ.
ಬೈಕ್ನಲ್ಲಿ ತೆರಳುತ್ತಿರುವಾಗ ಕಾಡುಕೋಣ ಏಕಾಏಕಿ ದಾಳಿ ಮಾಡಿದೆ. ಗಾಯಾಳುವನ್ನು ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.