ಕರ್ನಾಟಕ

karnataka

ETV Bharat / state

ಭತ್ತದ ಗದ್ದೆಗೆ ನುಗ್ಗಿದ‌ ಕಾಡಾನೆ: ಭತ್ತದ ಬೆಳೆ‌ ನಾಶ - ಸಾರಿಗೆರೆ ಕಾಡಾನೆ

ಶಿವಮೊಗ್ಗ ತಾಲೂಕಿನ ಸಾರಿಗೆರೆ ಗ್ರಾಮದ ಸಿದ್ದರಾಮ ಶಿವಕುಮಾರ ಎಂಬಾತನ ಗದ್ದೆಗೆ ನಿನ್ನೆ ರಾತ್ರಿ ಕಾಡಾನೆಯೊಂದು ನುಗ್ಗಿದ್ದು, ಭತ್ತದ ಪೈರು ಸಂಪೂರ್ಣ ನಾಶಗೊಂಡಿದೆ.

Paddy Field
ಬತ್ತದ ಗದ್ದೆ

By

Published : Sep 15, 2020, 1:44 PM IST

ಶಿವಮೊಗ್ಗ: ಕಾಡಾನೆಯೊಂದು ಭತ್ತದ ಗದ್ದೆಗೆ ನುಗ್ಗಿ ಬೆಳೆ ನಾಶ ಮಾಡಿರುವ ಘಟನೆ ತಾಲೂಕಿನ ಉಂಬ್ಳೆಬೈಲು ಸಮೀಪದ ಸಾರಿಗೆರೆ ಎಂಬ ಗ್ರಾಮದಲ್ಲಿ ನಡೆದಿದೆ.

ಸಾರಿಗೆರೆ ಗ್ರಾಮದ ರೈತ ಸಿದ್ದರಾಮ ಶಿವಕುಮಾರ ಎಂಬಾತನ ಜಮೀನಿಗೆ ತಡರಾತ್ರಿ ನುಗ್ಗಿದ ಕಾಡಾನೆ, ಗದ್ದೆಯಲ್ಲಿ ಓಡಾಟ ನಡೆಸಿ ಭತ್ತದ ಪೈರುಗಳನ್ನೆಲ್ಲಾ ಸಂಪೂರ್ಣವಾಗಿ ನಾಶಪಡಿಸಿದೆ. ಆಹಾರ ಅರಸಿ ಕಾಡಾನೆ ಊರಿಗೆ ಬಂದಿರಬಹುದು ಎನ್ನಲಾಗಿದೆ.

ಇನ್ನು ಈ ವಿಚಾರವನ್ನು ಅರಣ್ಯಾಧಿಕಾರಿಗಳಿಗೆ ತಿಳಿಸಿಲಾಗಿದ್ದು, ಇಲಾಖೆ ಅಧಿಕಾರಿಗಳಾದ ಅಬ್ದುಲ್ ಕರೀಂ ನೇತೃತ್ವದ ತಂಡ ಭೇಟಿ‌ ನೀಡಿ ಬೆಳೆ ಹಾನಿಗೆ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದೆ.

ABOUT THE AUTHOR

...view details