ಕರ್ನಾಟಕ

karnataka

ETV Bharat / state

ಆಗುಂಬೆ ಘಾಟ್​ನಲ್ಲಿ ಮೃತದೇಹವಿದ್ದ ಆಂಬ್ಯುಲೆನ್ಸ್ ಪಲ್ಟಿ, ಓರ್ವನಿಗೆ ಗಾಯ - etv bharat kannda

ಆಗುಂಬೆ ಘಾಟ್​ ಪ್ರದೇಶದಲ್ಲಿ ಆಂಬ್ಯುಲೆನ್ಸ್ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ ವ್ಯಕ್ತಿಯೊಬ್ಬ ಗಾಯಗೊಂಡಿದ್ದಾನೆ.

ambulance-overturns-in-agumbe-ghat
ಆಗುಂಬೆ ಘಾಟ್​ನಲ್ಲಿ ಆಂಬ್ಯುಲೆನ್ಸ್ ಅಪಘಾತ

By

Published : Aug 1, 2022, 6:12 PM IST

ಶಿವಮೊಗ್ಗ:ಮೃತದೇಹ ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಜಿಲ್ಲೆಯ ಆಗುಂಬೆ ಸಮೀಪ ಸಂಭವಿಸಿದೆ. ಮಂಗಳೂರಿನಿಂದ ತರೀಕೆರೆಗೆ ವ್ಯಕ್ತಿಯ ಶವ ತರುತ್ತಿರುವಾಗ ಅವಘಡ ನಡೆದಿದೆ.


ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತರಾದ ತರೀಕೆರೆ ನಿವಾಸಿಯೊಬ್ಬರ ಮೃತದೇಹ ತರುವಾಗ ಆಗುಂಬೆ ಸಮೀಪದ ತಿರುವಿನಲ್ಲಿ ಆಂಬ್ಯುಲೆನ್ಸ್ ಉರುಳಿದೆ. ಅಪಘಾತದಲ್ಲಿ ತಂದೆಯ ಮೃತದೇಹ ತರುತ್ತಿದ್ದ ಮಗನಿಗೆ ಗಾಯಗಳಾಗಿದ್ದು, ತೀರ್ಥಹಳ್ಳಿಯ ಆಸ್ಪತ್ರೆಗೆ ಸೇರಿಸಲಾಗಿದೆ. ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅಪಘಾತಕ್ಕೀಡಾದ ಆಂಬ್ಯುಲೆನ್ಸ್

ಇದನ್ನೂ ಓದಿ:ಮಂಗಳೂರು ಬೀಚ್​ನಲ್ಲಿ ವಿದ್ಯಾರ್ಥಿನಿ ಮೇಲೆ ರೇಪ್​: ವಿಡಿಯೋ ಮಾಡಿ ಬ್ಲಾಕ್​ಮೇಲ್‌, ಆರೋಪಿ ಅರೆಸ್ಟ್

ABOUT THE AUTHOR

...view details