ಶಿವಮೊಗ್ಗ:ಭಾರತ ಸಂವಿಧಾನ ರಚಿಸಿದ ವ್ಯಕ್ತಿ ಡಾ. ಬಿ ಆರ್ ಅಂಬೇಡ್ಕರ್ ಅವರು ದಲಿತರು ಅನ್ನುವುದು ನಮ್ಮ ಹೆಮ್ಮೆ ಎಂದು ಹೈಕೋರ್ಟ್ ವಕೀಲ ಲೋಕನಾಥ್ ಹೇಳಿದ್ದಾರೆ.
ಅಂಬೇಡ್ಕರ್ ದಲಿತರಾಗಿರುವುದು ನಮ್ಮ ಹೆಮ್ಮೆ.. ವಕೀಲ ಲೋಕನಾಥ್ - ಶಿವಮೊಗ್ಗ ಡಿಎಸ್ಎಸ್
ಸಂವಿಧಾನ ರಚಿಸಿದ ಅಂಬೇಡ್ಕರ್ ದೇಶಕ್ಕೆ ಮಾದರಿಯಾಗಿದ್ದಾರೆ ಎಂದು ಶಿವಮೊಗ್ಗದಲ್ಲಿ ಹೈಕೋರ್ಟ್ ವಕೀಲ ಲೋಕನಾಥ್ ಹೇಳಿದ್ದಾರೆ.

ಅಂಬೇಡ್ಕರ್ ದಲಿತರಾಗಿರುವುದು ನಮ್ಮ ಹೆಮ್ಮೆ:ವಕೀಲ ಲೋಕನಾಥ್
ನಗರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸರ್ವ ಜನರ ಸಂವಿಧಾನ ಸಮಾವೇಶದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಎಲ್ಲಾ ಸಂಕಷ್ಟ ಎದುರಿಸಿ ಸಾಧನೆಯ ಶಿಖರವೇರಿ ಸಾಧಿಸಿದ ವ್ಯಕ್ತಿಯೇ ನಮ್ಮ ಅಂಬೇಡ್ಕರ್ ಎಂದು ಸಂವಿಧಾನ ಶಿಲ್ಪಿಯ ಗುಣಗಾನ ಮಾಡಿದರು.
ಅಂಬೇಡ್ಕರ್ ದಲಿತರಾಗಿರುವುದು ನಮ್ಮ ಹೆಮ್ಮೆ.. ವಕೀಲ ಲೋಕನಾಥ್
ಕಾರ್ಯಕ್ರಮವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಉದ್ಘಾಟಿಸಿದರು. ಇದಕ್ಕೂ ಮುನ್ನ ನಗರದ ಸೈನ್ಸ್ ಮೈದಾನದಿಂದ ಮೆರವಣಿಗೆ ಪ್ರಾರಂಭವಾಗಿ ನೆಹರು ರಸ್ತೆ ಮೂಲಕ ಅಂಬೇಡ್ಕರ್ ಭವನದವರೆಗೆ ಸಾಗಿತು.
Last Updated : Nov 15, 2019, 11:25 PM IST