ಶಿವಮೊಗ್ಗ:ನಾಲ್ಕು ದಿನದ ಹಿಂದೆ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದ ಬಾಣಂತಿ ಮಂಗಳವಾರ ದಿಢೀರ್ ಆಗಿ ಸಾವಿಗೀಡಾಗಿರುವ ಘಟನೆ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದೆ. ಶಿವಮೊಗ್ಗದ ಹೊಸಮನೆಯ ಸವಿತಾ (20) ಮೃತ ಬಾಣಂತಿ. ಸವಿತಾ ಕಳೆದ ವರ್ಷ ಬೆಂಗಳೂರಿನ ಯುವಕನೊಂದಿಗೆ ಮದುವೆಯಾಗಿದ್ದರು. ಕಳೆದ ಐದು ದಿನದ ಹಿಂದೆ ಹೆರಿಗೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ನಾಲ್ಕು ದಿನದ ಹಿಂದಷ್ಟೇ ಸವಿತಾ ಗಂಡು ಮಗುವಿಗೆ ಜನ್ಮ ನೀಡಿದ್ದರು.
ಸಿಸೇರಿಯನ್ ಮೂಲಕ ಮಗು ಹೊರತೆಗೆಯಲಾಗಿತ್ತು. ಆಪರೇಷನ್ ನಡೆಸಿದ ನಂತರ ಸವಿತಾ ಹಾಗೂ ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದರು. ಆದರೆ ಇಂದು ಬೆಳಗಿನ ಜಾವ ಸವಿತಾ ಮೃತಪಟ್ಟಿದ್ದಾರೆ. ಸವಿತಾ ಭಾನುವಾರ ಸ್ವಲ್ಪ ಸುಸ್ತಾಗಿದ್ದರು. ಆದರೆ ಹೆದರುವ ಅವಶ್ಯಕತೆ ಇಲ್ಲ. ಎಲ್ಲಾ ಸರಿ ಹೋಗುತ್ತದೆ ಎಂದು ವೈದ್ಯರು ಧೈರ್ಯ ಹೇಳಿದ್ದರು. ಆದ್ರೆ ಇಂದು ಬೆಳಗಿನ ಜಾವ ಸವಿತಾ ದಿಢೀರ್ ಉಸಿರು ನಿಲ್ಲಿಸಿದ್ದಾರೆ.