ಕರ್ನಾಟಕ

karnataka

ETV Bharat / state

ಗೃಹ ಸಚಿವರ ಕ್ಷೇತ್ರದಲ್ಲಿ ಮೂಲಸೌಕರ್ಯ ಮರೀಚಿಕೆ ಆರೋಪ.. ಮತದಾನ ಬಹಿಷ್ಕರಿಸಿಲು ಗ್ರಾಮಸ್ಥರ ನಿರ್ಧಾರ - ಸುಳ್ಳು ಭರವಸೆಗೆ ಬೇಸತ್ತು ಬಹಿಷ್ಕಾರ

ಜನಪ್ರತಿನಿಧಿಗಳು ಗ್ರಾಮಗಳಿಗೆ ಮೂಲಸೌಕರ್ಯ ಒದಗಿಸಲು ವಿಫಲ, ಹುಂಚದಕಟ್ಟೆ ಗ್ರಾಪಂ ವ್ಯಾಪ್ತಿ ಉಂಬ್ಳೆಬೈಲು ಮಾದ್ಲುಮನೆ ಗ್ರಾಮಸ್ಥರು ಸಾಮೂಹಿಕ ಮತದಾನ ಬಹಿಷ್ಕರಿಸಲು ತೀರ್ಮಾನ. ಹಲವಾರು ದಶಕಗಳಿಂದ ನಮ್ಮೂರಿಗೆ ಒಂದು ನಯಾ ಪೈಸೆ ಸರ್ಕಾರದಿಂದ ಅನುದಾನ ದೊರಕಿಲ್ಲ ಎಂದು ಗ್ರಾಮಸ್ಥರ ಆರೋಪ.

Umblebailu Madlumane villagers decide to boycott voting.
ಉಂಬ್ಳೆಬೈಲು ಮಾದ್ಲುಮನೆ ಗ್ರಾಮಸ್ಥರು ಮತದಾನ ಬಹಿಷ್ಕರಿಸಲು ನಿರ್ಧಾರ.

By

Published : Mar 30, 2023, 11:00 PM IST

ಮತದಾನ ಬಹಿಷ್ಕರಿಸಿಲು ಗ್ರಾಮಸ್ಥರು ನಿರ್ಧಾರ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಹುಂಚದಕಟ್ಟೆ ಗ್ರಾಪಂ ವ್ಯಾಪ್ತಿ ಮೂಲಸೌಕರ್ಯ ವಂಚಿತ ಮಾದ್ಲುಮನೆ, ಉಂಬ್ಳೆಬೈಲು ಗ್ರಾಮಸ್ಥರು ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ಮಾದ್ಲುಮನೆ, ಉಂಬ್ಳೆಬೈಲು ಗ್ರಾಮಸ್ಥರು ಪ್ರತಿಭಟನೆ ಮಾಡುವದರೊಂದಿಗೆ ಚುನಾವಣೆ ಬಹಿಷ್ಕರಿಸುವದಾಗಿ ಎ ತಿಳಿಸಿದ್ದಾರೆ.ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಸಹ ಈ ಗ್ರಾಮಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿವೆ.ಚುನಾವಣಾ ಸಮಯದಲ್ಲಿ ಜನಪ್ರತಿನಿಧಿಗಳು ಸುಳ್ಳು ಭರವಸೆ ನೀಡಿ ಹೋದವರು ತಿರುಗಿ ನೋಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸುಳ್ಳು ಭರವಸೆಗೆ ಬೇಸತ್ತು ಬಹಿಷ್ಕಾರ: ಸ್ವಾತಂತ್ರ್ಯ ಬಂದ ನಂತರ ಬಂದ ಸರ್ಕಾರ ಹಾಗೂ ಜನಪ್ರತಿನಿಧಿಗಳು ನಮ್ಮ ಗ್ರಾಮಗಳಿಗೆ ಮೂಲ ಸೌಕರ್ಯ ಒದಗಿಸಲು ವಿಫಲರಾಗಿದ್ದಾರೆ. ಈ ಬಾರಿ ಚುನಾವಣೆ ಮತದಾನವನ್ನು ಸಾಮೂಹಿಕವಾಗಿ ಬಹಿಷ್ಕರಿಸುತ್ತಿರುವುದಾಗಿ ಗ್ರಾಮಸ್ಥರು ಘೋಷಿಸಿದ್ದಾರೆ.

ಗ್ರಾಮಕ್ಕೆ ರಸ್ತೆ ಇಲ್ಲ,ಕುಡಿಯುವ ನೀರಿಲ್ಲ: ವಿದ್ಯಾರ್ಥಿಗಳು ಶಾಲೆಗೆ ಹೋಗುವುದಕ್ಕೆ ಯುವಕರು ಕೆಲಸಕ್ಕೆ ಹೋಗುವುದಕ್ಕೆ ಸರಕು ಸಾಗಣೆ ಸಾಗಿಸುವ ವೇಳೆ ಹದಗೆಟ್ಟ ರಸ್ತೆಯಲ್ಲಿ ಬಿದ್ದು ಬಹಳಷ್ಟು ಜನರು ಕಾಲು ಮುರಿದುಕೊಂಡಿದ್ದಾರೆ. ಕುಡಿಯುವ ನೀರು ಸಮರ್ಪಕವಾಗಿ ನೀಡುತ್ತಿಲ್ಲ. ಹಲವಾರು ದಶಕಗಳಿಂದ ನಮ್ಮೂರಿಗೆ ಒಂದು ನಯಾ ಪೈಸೆ ಸರ್ಕಾರದಿಂದ ಅನುದಾನ ದೊರಕಿಲ್ಲ ಎಂದು ಗ್ರಾಮಸ್ಥರು ತಮ್ಮ ಸಮಸ್ಯೆಯನ್ನು ಹೊರ ಹಾಕಿದ್ದಾರೆ.

ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಗೃಹ ಸಚಿವರಾದರೂ ಸಹ ಗ್ರಾಮಗಳ ರಸ್ತೆ ಅಭಿವೃದ್ಧಿ ಆಗಿಲ್ಲ. ಜಿಲ್ಲಾ ತಾಲೂಕು, ಗ್ರಾಮ ಪಂಚಾಯತಿ ಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ. ಶಾಲಾ ಮಕ್ಕಳು ಸೇರಿದಂತೆ ಗ್ರಾಮಸ್ಥರ ಸಂಚಾರಕ್ಕೆ ಹಳ್ಳ ಗುಂಡಿಯ ರಸ್ತೆ ಮಾರ್ಗ ಅನಿವಾರ್ಯವಾಗಿದೆ. ಮತ ಕೊಟ್ಟರೂ ಕೆಲಸ ಆಗಲ್ಲ ಎಂದ ಮೇಲೆ ಮತದಾನ ಮಾಡದೇ ಸುಮ್ಮನಿರುವುದು ಲೇಸು ಎಂಬುದು ಗ್ರಾಮಸ್ಥರ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ.

ಹುಂಚದಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಂಬ್ಳೆಬೈಲು, ಮಾದ್ಲುಮನೆ, ಸಣ್ಣಮನೆ, ಹೊಸಕೊಪ್ಪ, ಕಪ್ಪೆಹೊಂಡ, ಆಲೂರು, ಹತ್ತಳ್ಳಿ, ಚಿಕ್ಕಮತ್ತಿಗ, ಕಲ್ಲಳ್ಳಿ, ಶಿವಳ್ಳಿಕೊಪ್ಪ, ದೇಮ್ಲಾಪುರ, ಮಳಲಿಮಕ್ಕಿ, ಕೋಣಂದೂರು ಸಂಪರ್ಕಿಸುವ ನಾಲ್ಕೈದು ಕಿ ಮೀ ರಸ್ತೆಯು ಸಂಪೂರ್ಣ ಹದಗೆಟ್ಟು ಹೋಗಿದೆ.

ರಸ್ತೆಯಲ್ಲಿ ಕಾಲ್ನಡಿಗೆಯಲ್ಲೂ ಹೋಗುವುದು ಕಷ್ಟಕರವಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಯಾವ ಆಟೋ ಚಾಲಕರು, ಆ್ಯಂಬುಲೆನ್ಸ್, ಶಾಲಾ ವಾಹನಗಳು, ಈ ರಸ್ತೆಯಲ್ಲಿ ಬರಲು ಒಪ್ಪದೇ ಇರುವುದರಿಂದ ನಿತ್ಯ ಸಂಕಷ್ಟದಲ್ಲಿ ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸರಕು ಸಾಮಾನುಗಳನ್ನು ತಲೆ ಮೇಲೆ ಹೊತ್ತುಕೊಂಡು ಹೋಗುವ ಪರಿಸ್ಥಿತಿ ಇಲ್ಲಿದೆ. ರಸ್ತೆ ಹದಗೆಟ್ಟಿರುವ ಬಗ್ಗೆ ಇಲ್ಲಿನ ಜನಪ್ರತಿನಿಧಿಗಳ ಹತ್ತಿರ ಸುಮಾರು ಇಪ್ಪತ್ತು ವರ್ಷಗಳಿಂದ ಸರಿ ಮಾಡಿಸಿಕೊಡುವಂತೆ ಮನವಿ ಮಾಡಿದರೂ, ಯಾವುದೇ ರೀತಿ ಪ್ರಯೋಜನವಾಗಿಲ್ಲ ಎಂದು ಗ್ರಾಮದ ನಾಗರಿಕರು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

ಆರಗ ಜ್ಞಾನೇಂದ್ರ ಅವರು ಗೃಹ ಸಚಿವರಾದ ಮೇಲೆಯೂ ಹೋಗಿ ಕೇಳಿದಾಗ ರಸ್ತೆ ಸೇರಿದಂತೆ ವಿವಿಧ ಅಭಿವೃದ್ದಿಗೆ 1 ಕೋಟಿ ರೂ ನೀಡುವುದಾಗಿ ಹೇಳಿದ್ದರು. ಆದರೆ ಅನುದಾನ ಬಿಡುಗಡೆ ಮಾಡಲಿಲ್ಲ. ಶೌಚಾಲಯ ನಿರ್ಮಾಣ ಮಾಡಿಕೊಂಡರು ಸಹ ಅದಕ್ಕೆ ಹಣ ಬಿಡುಗಡೆಯಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮದ ಅಭಿವೃದ್ಧಿಗಾಗಿ ಆಗ್ರಹಿಸಿ ಬಿಜೆಪಿ ಬೂತ್ ಅಧ್ಯಕ್ಷರು ಸೇರಿದಂತೆ ಬಿಜೆಪಿಯ ಕಾರ್ಯಕರ್ತರು ಚುನಾವಣೆ ಬಹಿಷ್ಕಾರ ಮಾಡುತ್ತಿದ್ದೇವೆ ಎಂದು ಬೂತ್ ಅಧ್ಯಕ್ಷ ಶಿವಕುಮಾರ್ ಹಾಗೂ ಬಿಜೆಪಿ ಕಾರ್ಯಕರ್ತ ಪ್ರಮೋದ್ ಹಾಗೂ ರಮೇಶ್ ತಿಳಿಸಿದ್ದಾರೆ.

ಈಗಾಗಲೇ ಗ್ರಾಮದಲ್ಲಿ ಬಹಿಷ್ಕಾರದ ಪ್ಲೆಕ್ಸ್ ಹಾಕಿದ್ದಾರೆ. ಮತದಾರ ಬಹಿಷ್ಕಾರ ಹಾಕುವವರನ್ನು ಅಧಿಕಾರಿಗಳು ಹೇಗೆ ಮನವೊಲಿಸುತ್ತಾರೆ ಎಂಬುದನ್ನು ಕಾದು‌ ನೋಡಬೇಕಿದೆ.

ಇದನ್ನೂ ಓದಿ:ಹಣ ದುರುಪಯೋಗ, ಕರ್ತವ್ಯ ಲೋಪ: ಪಿಡಿಒ ಅಮಾನತು

ABOUT THE AUTHOR

...view details