ಶಿವಮೊಗ್ಗ: ರಂಜಾನ್ ಪ್ರಯುಕ್ತ ಮೇ 2 ರಂದು ನಡೆಯಬೇಕಿದ್ದ ಕುವೆಂಪು ವಿಶ್ವವಿದ್ಯಾನಿಲಯದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ವಿವಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ರಂಜಾನ್ ಪ್ರಯುಕ್ತ ಕುವೆಂಪು ವಿವಿಯ ಎಲ್ಲ ಸ್ನಾತಕ ಪರೀಕ್ಷೆಗಳ ಮುಂದೂಡಿಕೆ - ಕುವೆಂಪು ವಿಶ್ವವಿದ್ಯಾನಿಲಯದ ಎಲ್ಲಾ ಪರೀಕ್ಷೆಗಳು ಮುಂದೂಡಿಕೆ
ಸೋಮವಾರದಂದು ನಿಗದಿಯಾಗಿದ್ದ ಕುವೆಂಪು ವಿಶ್ವವಿದ್ಯಾಲಯದ ಎಲ್ಲ ಸ್ನಾತಕ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್. ಕೆ. ನವೀನ್ ಕುಮಾರ್ ಅವರು ತಿಳಿಸಿದ್ದಾರೆ.
ಕುವೆಂಪು ವಿವಿ
ಮೂನ್ ಕಮಿಟಿ ಖುತುಬ್-ಎ-ರಂಜಾನ್ ಹಬ್ಬವನ್ನು ಮೇ 02 ರಂದು ಆಚರಿಸಲು ನಿರ್ಣಯಿಸಿರುವ ಹಿನ್ನೆಲೆ ರಾಜ್ಯ ಸರ್ಕಾರ ಸಾರ್ವತ್ರಿಕ ರಜೆ ಘೋಷಣೆ ಮಾಡಿರುವುದರಿಂದ ಸೋಮವಾರದಂದು ನಿಗದಿಯಾಗಿದ್ದ ಕುವೆಂಪು ವಿಶ್ವವಿದ್ಯಾಲಯದ ಎಲ್ಲ ಸ್ನಾತಕ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಅಂದು ನಡೆಯಬೇಕಿದ್ದ ಪರೀಕ್ಷೆಯ ಮುಂದಿನ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್. ಕೆ. ನವೀನ್ ಕುಮಾರ್ ಅವರು ತಿಳಿಸಿದ್ದಾರೆ.
ಓದಿ:ಸಿಎಂ ಬೊಮ್ಮಾಯಿ ಆರ್ಎಸ್ಎಸ್ನವರಲ್ಲ, ಅವರನ್ನು ಬದಲಾಯಿಸ್ತಾರೆ: ಸಿದ್ದರಾಮಯ್ಯ