ಕರ್ನಾಟಕ

karnataka

ETV Bharat / state

ಶಿಮುಲ್ ಅಧ್ಯಕ್ಷರ ವಿರುದ್ಧ ಎಲ್ಲಾ ನಿರ್ದೇಶಕರ ಅವಿಶ್ವಾಸ ಮಂಡನೆ - All Directors No-confidence motion against Shimul President news

ಶಿಮುಲ್​ನಲ್ಲಿ ಒಟ್ಟು 14 ನಿರ್ದೇಶಕರಿದ್ದು, ಇದರಲ್ಲಿ ಆನಂದ್ ವಿರುದ್ಧ 13 ಜನ ನಿರ್ದೇಶಕರು ಅವಿಶ್ವಾಸ ಗೊತ್ತುವಳಿಯ ಪರ ಮತ ಚಲಾಯಿಸಿದರು. ಇದರಿಂದ ಅಧ್ಯಕ್ಷ ಆನಂದ್ ತಮ್ಮ ಸ್ಥಾನದಿಂದ ಕೆಳಗೆ ಇಳಿಯಬೇಕಾಗಿದೆ.

All Directors No-confidence motion against Shimul President
ಶಿಮುಲ್ ಅಧ್ಯಕ್ಷ

By

Published : Oct 22, 2021, 9:13 PM IST

ಶಿವಮೊಗ್ಗ :ಇಂದು ನಡೆದ ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಹಾಲು ಒಕ್ಕೂಟದ ಅಧ್ಯಕ್ಷರ ಅವಿಶ್ವಾಸ ಗೊತ್ತುವಳಿಯಲ್ಲಿ ಅಧ್ಯಕ್ಷ ಆನಂದ್ ವಿರುದ್ಧ ಎಲ್ಲಾ ನಿರ್ದೇಶಕರು ಮತ ಚಲಾಯಿಸಿದರು.

ಶಿವಮೊಗ್ಗ ಜಿಲ್ಲೆಯ ಮಾಚೇನಹಳ್ಳಿ ಇರುವ ಶಿಮುಲ್​ನಲ್ಲಿ ಇಂದು ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೂತ್ತುವಳಿ ಸಭೆ ನಡೆಯಿತು. ಈ ಸಭೆಗೆ ಅಧ್ಯಕ್ಷ ಆನಂದ್ ಗೈರಾಗಿದ್ದರು. ಅಧ್ಯಕ್ಷರ ಗೈರಿಯಲ್ಲಿ ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.

ಶಿಮುಲ್ ಅಧ್ಯಕ್ಷ

ಶಿಮುಲ್​ನಲ್ಲಿ ಒಟ್ಟು 14 ನಿರ್ದೇಶಕರಿದ್ದು, ಇದರಲ್ಲಿ ಆನಂದ್ ವಿರುದ್ಧ 13 ಜನ ನಿರ್ದೇಶಕರು ಅವಿಶ್ವಾಸ ಗೂತ್ತುವಳಿಯ ಪರ ಮತ ಚಲಾಯಿಸಿದರು. ಇದರಿಂದ ಅಧ್ಯಕ್ಷ ಆನಂದ್ ತಮ್ಮ ಸ್ಥಾನದಿಂದ ಕೆಳಗೆ ಇಳಿಯಬೇಕಾಯಿತು.

ಉಪಾಧ್ಯಕ್ಷ ಬಸಪ್ಪರಿಗೆ ಪ್ರಭಾರ ಅಧ್ಯಕ್ಷ ಸ್ಥಾನ :ಅಧ್ಯಕ್ಷರ ವಿರುದ್ಧ ನಡೆದ ಅವಿಶ್ವಾಸ ಗೂತ್ತುವಳಿಯಲ್ಲಿ ಆನಂದ್ ಸೋತ ಕಾರಣ, ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವವರೆಗೂ ಉಪಾಧ್ಯಕ್ಷ ಬಸಪ್ಪ ಅವರನ್ನು ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಹಕಾರ ಇಲಾಖೆಯ ಪ್ರಬಂಧಕ ನಾಗೇಶ್ ಡೋಂಗ್ರೆ ಅವರ ಸುಮ್ಮುಖದಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಲಾಯಿತು.

For All Latest Updates

ABOUT THE AUTHOR

...view details