ಕರ್ನಾಟಕ

karnataka

ETV Bharat / state

ಮೀಸಲಾತಿ ಹೋರಾಟದಲ್ಲಿ ಸಿದ್ದರಾಮಯ್ಯ ಬಿಟ್ಟು ಎಲ್ಲರೂ ಸ್ವಾಮೀಜಿ ಜೊತೆಗಿದ್ದೇವೆ: ಕೆ.ಎಸ್.ಈಶ್ವರಪ್ಪ

ಸ್ವಾಮೀಜಿಗಳಿಬ್ಬರೂ ಸಹ ಮೊದಲು ನಿಮ್ಮ ಮನೆಗೆ ಬಂದು ಚರ್ಚೆ ನಡೆಸಿದ್ದಾರೆ. ಅವರು ರಸ್ತೆಗಿಳಿದು ಹೋರಾಟ ಮಾಡಲು ಬರಲ್ಲ ಎಂದು ತಿಳಿಸಿದ್ದಾರೆ. ನಂತರ ಸ್ವಾಮೀಜಿಗಳು ನನ್ನ ಬಳಿ ಬಂದರು. ಇದರಿಂದ ನಾನು ಕುರುಬ ಸಮಾಜಕ್ಕೆ ಎಸ್ಟಿ ಮೀಸಲಾತಿ ಸಿಗಬೇಕೆಂದು ಹೋರಾಟಕ್ಕೆ ಬಂದಿದ್ದೇನೆ ಎಂದು ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದ್ದಾರೆ.

ಕುರುಬ ಎಸ್ಟಿ ಮೀಸಲಾತಿ ಹೋರಾಟ
ಕುರುಬ ಎಸ್ಟಿ ಮೀಸಲಾತಿ ಹೋರಾಟ

By

Published : Jan 7, 2021, 6:02 PM IST

Updated : Jan 7, 2021, 6:41 PM IST

ಶಿವಮೊಗ್ಗ: ಕುರುಬರ ಎಸ್ಟಿ‌ ಮೀಸಲಾತಿ ಹೋರಾಟದಲ್ಲಿ ಸಿದ್ದರಾಮಯ್ಯ ಅವರನ್ನು ಬಿಟ್ಟು ಎಲ್ಲರೂ ಸಹ ಸ್ವಾಮೀಜಿಗಳ ಜೊತೆಗಿದ್ದೇವೆ. ನೀವು ಧೈರ್ಯವಾಗಿ ಮುನ್ನುಗ್ಗಿ ಎಂದು ಹೇಳುವ ಮೂಲಕ ಸಚಿವ ಕೆ. ಎಸ್. ಈಶ್ವರಪ್ಪ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿಗೆ ಧೈರ್ಯ ತುಂಬಿದ್ದಾರೆ.

ಕುರುಬರ ಎಸ್ಟಿ‌ ಮೀಸಲಾತಿ ಹೋರಾಟ ಸಮಾವೇಶ

ಶಿಕಾರಿಪುರದ ಹೊಸ ಸಂತೆ ಮೈದಾನದಲ್ಲಿ ನಡೆದ ಕುರುಬರ ಎಸ್ಟಿ‌ ಮೀಸಲಾತಿ ಹೋರಾಟ ಸಮಾವೇಶದಲ್ಲಿ ಮಾತನಾಡಿದ ಅವರು, ಸ್ವಾಮೀಜಿಗಳಿಬ್ಬರು ಸಹ ಮೊದಲು ನಿಮ್ಮ ಮನೆಗೆ ಬಂದು ಚರ್ಚೆ ನಡೆಸಿದ್ದಾರೆ. ಅವರು ರಸ್ತೆಗಿಳಿದು ಹೋರಾಟ ಮಾಡಲು ಬರಲ್ಲ ಎಂದು ತಿಳಿಸಿದ್ದಾರೆ. ನಂತರ ಸ್ವಾಮೀಜಿಗಳು ನನ್ನ ಬಳಿ ಬಂದರು. ಇದರಿಂದ ನಾನು ಕುರುಬ ಸಮಾಜಕ್ಕೆ ಎಸ್ಟಿ ಮೀಸಲಾತಿ ಸಿಗಬೇಕೆಂದು ಹೋರಾಟಕ್ಕೆ ಬಂದಿದ್ದೇನೆ. ನಮ್ಮ ಹೋರಾಟದಲ್ಲಿ ಸಿದ್ದರಾಮಯ್ಯನವರನ್ನು ಬಿಟ್ಟು ಎಲ್ಲಾ ಪಕ್ಷದವರು ನಮ್ಮ ಜೊತೆ ಇದ್ದಾರೆ ಎಂದರು.

ಓದಿ:ಹಗಲು ದರೋಡೆ ಬಿಟ್ಟು ನೆಮ್ಮದಿ ಜೀವನ ನಡೆಸಿ: ಯೋಗೇಶ್ವರ್​​ಗೆ ಹೆಚ್​ಡಿಕೆ ಟಾಂಗ್​​

ದೆಹಲಿಯಲ್ಲಿ ಮೋದಿ,‌ ಶಾರನ್ನು ಭೇಟಿಯಾಗಿದ್ದೇವೆ. ಸ್ವಾಮೀಜಿಗಳು ಉದ್ಯೋಗವಿಲ್ಲದೆ ಪಾದಯಾತ್ರೆ ಮಾಡುತ್ತಿಲ್ಲ. ಸಮಾಜಕ್ಕೋಸ್ಕರ ಪಾದಯಾತ್ರೆ ಮಾಡುತ್ತಿದ್ದಾರೆ. ನಿಮ್ಮ ಜೊತೆ 60 ಲಕ್ಷ ಜನ ಬಂದಾಗ ಸಿದ್ದರಾಮಯ್ಯ ಸಹ ಬರುತ್ತಾರೆ. ಸ್ವಾಮೀಜಿಗಳೇ ನಮಗೆ ದೇವರು. ಅವರ ಹಿಂದೆ ನಾವೆಲ್ಲ ಹೊರಡುತ್ತಿದ್ದೇವೆ. ನಮ್ಮ ಪಾದಯಾತ್ರೆಯನ್ನು ಸಿಎಂ, ಮಂತ್ರಿಗಳು ಯಾಕೆ ಮೋದಿ ಕೇಳ್ತಾರೆ. ಎಸ್ಟಿ‌ ಮೀಸಲಾತಿ ಸಿಗುವ ತನಕ ಹೋರಾಟ ನಿಲ್ಲಿಸುವುದಿಲ್ಲ. ಹಿಂದೆ ಆಗಲಿಲ್ಲ, ಈಗ ಯಾಕೆ ಆಗಲ್ಲ ನೋಡೋಣ. ಯಾರು ಸಹ ಈ ಹೋರಾಟಕ್ಕೆ‌ ನಿರ್ಲಕ್ಷ್ಯ ತೋರಬೇಡಿ ಎಂದರು.

Last Updated : Jan 7, 2021, 6:41 PM IST

ABOUT THE AUTHOR

...view details