ಕರ್ನಾಟಕ

karnataka

ETV Bharat / state

ಲಾಕ್ ಡೌನ್ ಜಾರಿಗೆ ಒತ್ತಾಯಿಸಿ ಅಖಿಲ ಭಾರತ ಕರುನಾಡ ಯುವಶಕ್ತಿ ಸಂಘಟನೆ ಮನವಿ - Akhil a Baharatha karunadu comity

ಕೊರೊನಾ ಪ್ರಕರಣಗಳ ತಡೆಗಟ್ಟಲು ಮತ್ತೆ ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿ ಮಾಡಬೇಕೆಂದು ಒತ್ತಾಯಿಸಿ ಅಖಿಲ ಭಾರತ ಕರುನಾಡ ಯುವಶಕ್ತಿ ಸಂಘಟನೆ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.

Shimoga
Shimoga

By

Published : Jun 29, 2020, 7:11 PM IST

ಶಿವಮೊಗ್ಗ:ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮತ್ತೊಮ್ಮೆ ಲಾಕ್‌ಡೌನ್ ಜಾರಿ ಮಾಡುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಮುಂದಾಗಬೇಕೆಂದು ಎಂದು ಅಖಿಲ ಭಾರತ ಕರುನಾಡ ಯುವಶಕ್ತಿ ಸಂಘಟನೆ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.

ಜಿಲ್ಲೆಯಲ್ಲಿ ಕೊರೊನಾ ಆತಂಕ ಮೂಡಿಸುತಿದ್ದು ಕೆಲವೇ ದಿನಗಳ ಅಂತರದಲ್ಲಿ ಸೋಂಕು ಸಮುದಾಯಕ್ಕೆ ಹರಡುವ ಸಾಧ್ಯತೆ ಇದೆ. ಸರ್ಕಾರ ಕೂಡಲೇ ಲಾಕ್‌ಡೌನ್ ಸಡಿಲಿಕೆಯನ್ನು ಕೈಬಿಟ್ಟು ಪುನಃ ಲಾಕ್‌ಡೌನ್ ಅ‌ನ್ನು ಜಾರಿಗೆ ತರುವ ಮೂಲಕ ಕೊರೊನಾವನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದರು.

ಆರ್ಥಿಕ ಚಟುವಟಿಕೆಗಳು ಅನಿವಾರ್ಯವಾದರೂ ಸಹ ಆರೋಗ್ಯಕ್ಕಿಂತ ಮುಖ್ಯವಾಗಿಲ್ಲ. ಪ್ರಾಣ ಮತ್ತು ಆರೋಗ್ಯ ಚೆನ್ನಾಗಿದ್ದರೆ ಆರ್ಥಿಕ ಸಮಸ್ಯೆಯನ್ನು ಮುಂದಿನ ದಿನಗಳಲ್ಲಿ ಬಗೆಹರಿಸಬಹುದು. ಕಾರ್ಮಿಕರು, ಸಣ್ಣ ಉದ್ಯಮಿದಾರರು, ವ್ಯಾಪಾರಿಗಳು ಹಾಗೂ ಇನ್ನಿತರ ಸಮುದಾಯಗಳಿಗೆ ಸರ್ಕಾರ ಸಹಾಯ ಹಸ್ತವನ್ನು ಚಾಚುವ ಮೂಲಕ ಮುಂದಿನ ಒಂದು ತಿಂಗಳುಗಳ ಕಾಲ ಲಾಕ್‌ಡೌನ್ ಕೈಗೊಂಡು ಕೊರೊನಾವನ್ನು ದೂರ ಮಾಡಬೇಕೆಂದು ಸಂಘಟನೆಯ ಪ್ರಮುಖರು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ವಸಂತ್ ಕುಮಾರ್, ರಮೇಶ್, ಶರವಣ ಮೊದಲಾದವರಿದ್ದರು.

ABOUT THE AUTHOR

...view details