ಶಿವಮೊಗ್ಗ:ಆಗಸ್ಟ್.10 ರಂದು ರಾಜ್ಯಾದ್ಯಂತ ಕಾರ್ಪೊರೇಟ್ ಕಂಪನಿಗಳೇ ಕೃಷಿ ಬಿಟ್ಟು ತೊಲಗಿ ಎಂಬ ಚಳವಳಿಯನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಗೌರವಾಧ್ಯಕ್ಷರಾದ ಹೆಚ್ .ಆರ್ ಬಸವರಾಜಪ್ಪ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಖಿಲ ಭಾರತ ಸಮನ್ವಯ ಸಮಿತಿಯ ವತಿಯಿಂದ 1942ರಲ್ಲಿ ಆಗಸ್ಟ್ 9 ರಂದು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿಯನ್ನು ನಡೆಸಿದ್ದರು. ಇದೀಗ ಆಗಸ್ಟ್.10 ರಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ರಾಜ್ಯಾದ್ಯಂತ ಕಾರ್ಪೊರೇಟ್ ಕಂಪನಿಗಳೆ ಕೃಷಿ ಬಿಟ್ಟು ತೊಲಗಿ ಎಂಬ ಚಳವಳಿಯನ್ನು ರಾಜ್ಯದ ಎಲ್ಲ ತಾಲೂಕು ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.