ಕರ್ನಾಟಕ

karnataka

ETV Bharat / state

ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಬ್ಯಾಂಕ್ ಲಾಕರ್ ಖಾಲಿ ಖಾಲಿ.. ಎಸಿಬಿಗೇ ಶಾಕ್​ - ರುದ್ರೇಶಪ್ಪ ಬ್ಯಾಂಕ್ ಲಾಕರ್ ಪರಿಶೀಲಿಸಿದ ಎಸಿಬಿ

ರುದ್ರೇಶಪ್ಪ ಅವರ ಬ್ಯಾಂಕ್ ಲಾಕರ್​ನಲ್ಲಿ ಇನ್ನಷ್ಟು ಮಾಹಿತಿ ಸಿಗಲಿದೆ ಎಂಬ ನಿರೀಕ್ಷೆಯೊಂದಿಗೆ ಶೋಧ ಕಾರ್ಯಕ್ಕೆ ಮುಂದಾಗಿದ್ದ ಎಸಿಬಿ ಅಧಿಕಾರಿಗಳು ಲಾಕರ್ ಖಾಲಿ ಇದ್ದದ್ದನ್ನು ಕಂಡು ಶಾಕ್​ಗೆ ಒಳಗಾಗಿದ್ದಾರೆ.

JD Rudreshappa
ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ

By

Published : Nov 25, 2021, 4:19 PM IST

ಶಿವಮೊಗ್ಗ: ಗದಗ ಜಿಲ್ಲಾ ಜಂಟಿ ಕೃಷಿ ಅಧಿಕಾರಿ ರುದ್ರೇಶಪ್ಪ ಅವರ ಬ್ಯಾಂಕ್ ಲಾಕರ್​ನ್ನು ಇಂದು (ಗುರುವಾರ) ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಆದರೆ, ಲಾಕರ್​ನಲ್ಲಿ ಯಾವುದೇ ದಾಖಲೆಗಳು ಕಂಡುಬಂದಿಲ್ಲ. ನಿನ್ನೆ ಕಂತೆ ಕಂತೆ ಹಣ ಪತ್ತೆ ಹಚ್ಚಿದ್ದ ಅಧಿಕಾರಿಗಳಿಗೆ ಇಂದು ಬ್ಯಾಂಕ್​ ಲಾಕರ್​ ನೋಡಿ ಅಚ್ಚರಿ ಆಗಿದೆ.

ಶಿವಮೊಗ್ಗದ ಗೋಪಾಲಗೌಡ ಬಡಾವಣೆಯ ಅವರ ನಿವಾಸದ ಮೇಲೆ ಬುಧವಾರ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣದ ಚಿನ್ನ ಹಾಗು ಹಣವನ್ನು ವಶಕ್ಕೆ ಪಡೆದುಕೊಂಡಿದ್ದರು.

ರುದ್ರೇಶಪ್ಪ ಅವರ ಬ್ಯಾಂಕ್ ಲಾಕರ್ ಪರಿಶೀಲಿಸಿದ ಎಸಿಬಿ ಅಧಿಕಾರಿಗಳು

ರುದ್ರೇಶಪ್ಪ ಅವರ ಬ್ಯಾಂಕ್ ಲಾಕರ್​ನಲ್ಲಿ ಇನ್ನಷ್ಟು ಮಾಹಿತಿ ಸಿಗಲಿದೆ ಎಂಬ ನಿರೀಕ್ಷೆಯೊಂದಿಗೆ ಶೋಧ ಕಾರ್ಯಕ್ಕೆ ಮುಂದಾಗಿದ್ದ ಎಸಿಬಿ ಅಧಿಕಾರಿಗಳು ಲಾಕರ್ ಖಾಲಿ ಇದ್ದದ್ದನ್ನು ಕಂಡು ಶಾಕ್​ಗೆ ಒಳಗಾಗಿದ್ದಾರೆ.

ಸದ್ಯ ಎಸಿಬಿ ಅಧಿಕಾರಿಗಳು ರುದ್ರೇಶಪ್ಪ ಅವರನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದು, ಸಂಜೆಯ ನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.

ಓದಿ:ರುದ್ರೇಶಪ್ಪರನ್ನು ಶಿವಮೊಗ್ಗದ ಮನೆಗೆ ಕರೆ ತಂದು ಎಸಿಬಿ ವಿಚಾರಣೆ

ABOUT THE AUTHOR

...view details