ಶಿವಮೊಗ್ಗ:ವಿಶ್ವದಾದ್ಯಂತಕೊರೊನಾ ಮಹಾಮಾರಿ ಜನರ ನಿದ್ದೆಗೆಡಿಸಿದೆ. ಆದರೆ, ಮಲೆನಾಡು ಶಿವಮೊಗ್ಗದಲ್ಲಿ ಮಾತ್ರ ಮಂಗನಕಾಯಿಲೆ ಮರಣ ಮೃಂದಗ ಭಾರಿಸುತ್ತಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಕೋಣಂದೂರು ಸಮೀಪದ ಉಡುಕೆರೆಯ ನಿವಾಸಿ ಸುಬ್ರಮಣ್ಯ ಆಚಾರ್ (55) ಎಂಬುವರು ಮಂಗನ ಕಾಯಿಲೆಗೆ ಬಲಿಯಾಗಿದ್ದಾರೆ.
ಕೊರೊನಾ ಮಹಾಮಾರಿ ನಡುವೆ ಮಲೆನಾಡಿನಲ್ಲಿ ಕೆಎಫ್ಡಿಗೆ 4ನೇ ಬಲಿ - shivamogga
ಕೊರೊನಾ ಭೀತಿಯಿಂದ ಹೊರಬರುವ ಮೊದಲೇ ಮಲೆನಾಡಲ್ಲಿ ಮಂಗನ ಕಾಯಿಲೆ ಜನರ ನಿದ್ದೆಗೆಡಿಸಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕು ಕೋಣಂದೂರು ಸಮೀಪದ ಉಡುಕೆರೆಯ ನಿವಾಸಿ ಸುಬ್ರಮಣ್ಯ ಆಚಾರ್ (55) ಎಂಬುವರು ಮಂಗನ ಕಾಯಿಲೆಗೆ ಬಲಿಯಾಗಿದ್ದಾರೆ. ತಾಲೂಕಿನಲ್ಲಿಯೇ ಇದು 3ನೇ ಬಲಿಯಾಗಿದೆ. ಇನ್ನೊಂದು ಪ್ರಕರಣ ಸಾಗರದಲ್ಲಿ ಬಲಿಯಾಗಿದ್ದಾರೆ. ಇದು ಕೆಎಫ್ಡಿಗೆ 4ನೇ ಬಲಿಯಾಗಿದೆ.
ಸುಬ್ರಮಣ್ಯ ಆಚಾರ್ ಕಳೆದ ಮಾರ್ಚ್ 30ರಿಂದ ಮಣಿಪಾಲದ ಆಸ್ಪತ್ರೆಯಲ್ಲಿ ಕೆಎಫ್ಡಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಸುಬ್ರಮಣ್ಯ ಸಾವನ್ನಪ್ಪಿದ್ದಾರೆ. ಇದಕ್ಕೂ ಮೊದಲು ತೀರ್ಥಹಳ್ಳಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರಿಗೆ ಪತ್ನಿ, ಒಂದು ಗಂಡು, ಒಂದು ಹೆಣ್ಣು ಮಕ್ಕಳಿದ್ದಾರೆ. ಜನವರಿಯಿಂದ ಇದುವರೆಗೂ ತೀರ್ಥಹಳ್ಳಿ ತಾಲೂಕಿನಲ್ಲಿಯೇ ಇದು 3ನೇ ಬಲಿಯಾಗಿದೆ. ಇನ್ನೊಂದು ಪ್ರಕರಣ ಸಾಗರದಲ್ಲಿ ವರದಿಯಾಗಿದೆ. ಇದು ಕೆಎಫ್ಡಿಗೆ 4ನೇ ಬಲಿಯಾಗಿದೆ. ಈಗಲಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಸೂಕ್ತ ಕ್ರಮ ತೆಗೆದು ಕೊಳ್ಳಬೇಕಿದೆ.