ಕರ್ನಾಟಕ

karnataka

ETV Bharat / state

ಶಿವಮೊಗ್ಗ: ವೀಕೆಂಡ್​ ಕರ್ಫ್ಯೂ ಹಿನ್ನೆಲೆ ಸಿಐಡಿ ಎಡಿಜಿಪಿ ಸಿಟಿ ರೌಂಡ್ಸ್‌ - weekend curfew

ವೀಕೆಂಡ್​ ಕರ್ಫ್ಯೂ ಹಿನ್ನೆಲೆ ಪೂರ್ವ ವಲಯದ ಉಸ್ತುವಾರಿ ಎಡಿಜಿಪಿ ಉಮೇಶ್ ಕುಮಾರ್ ಶಿವಮೊಗ್ಗ ನಗರಗಳಲ್ಲಿ ಸಿಟಿ ರೌಂಡ್ಸ್​ ಹಾಕಿ ಪೊಲೀಸ್ ಇಲಾಖೆಯ ಬಂದೋಬಸ್ತ್ ವೀಕ್ಷಣೆ ಮಾಡಿದರು.

police
police

By

Published : Apr 25, 2021, 4:08 PM IST

ಶಿವಮೊಗ್ಗ: ವೀಕೆಂಡ್​ ಕರ್ಫ್ಯೂ ಹಿನ್ನೆಲೆ ಪೂರ್ವ ವಲಯದ ಉಸ್ತುವಾರಿ ಸಿಐಡಿಯ ಎಡಿಜಿಪಿ ಉಮೇಶ್ ಕುಮಾರ್​ ಇಂದು ಶಿವಮೊಗ್ಗ ಸಿಟಿ ರೌಂಡ್ಸ್ ನಡೆಸಿದ್ದಾರೆ.

ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯ ವಿವಿಧ ವಿಭಾಗದ ಎಡಿಜಿಪಿಗಳನ್ನು‌ ಜಿಲ್ಲೆಯ ಉಸ್ತುವಾರಿಗಳಾಗಿ ನೇಮಕ ಮಾಡಿದೆ. ಈ ಹಿನ್ನೆಲೆ ಉಮೇಶ್ ಕುಮಾರ್ ಶಿವಮೊಗ್ಗ ಸಿಟಿ ಹಾಗೂ ಗ್ರಾಮಾಂತರ ಭಾಗದಲ್ಲಿ ಸಂಚಾರ ಮಾಡಿ ಪೊಲೀಸ್ ಇಲಾಖೆಯ ಬಂದೋಬಸ್ತ್ ವೀಕ್ಷಣೆ ಮಾಡಿದರು. ನಂತರ ಟ್ರಾಫಿಕ್ ಪೊಲೀಸರಿಗೆ ಕೆಲ ಸಲಹೆ-ಸೂಚನೆಗಳನ್ನು ನೀಡಿದರು. ಎಡಿಜಿಪಿ ಉಮೇಶ್ ಕುಮಾರ್​ಗೆ ಎಸ್ಪಿ ಲಕ್ಷ್ಮಿ ಪ್ರಸಾದ್ ಸಾಥ್ ನೀಡಿದರು.

police

ಮಾಸ್ಕ್ ಇಲ್ಲದೆ ಹೋಗುತ್ತಿದ್ದ ಯುವಕನಿಗೆ ಮಾಸ್ಕ್ ನೀಡಿ ಮಾನವೀಯತೆ ಮೆರೆದ ಅಡಿಷನಲ್‌ ಎಸ್ಪಿ:

ಹೆಚ್ಚುವರಿ ಜಿಲ್ಲಾ ಪೊಲೀಸ್​ ರಕ್ಷಣಾಧಿಕಾರಿ ಡಾ. ಶೇಖರ್ ಇಂದು ನಗರದ ಪ್ರಮುಖ ವೃತ್ತಗಳಲ್ಲಿ ಸಂಚಾರ ಮಾಡುತ್ತಿದ್ದ ಕಾರು, ಬೈಕ್​​ಗಳನ್ನು ತಡೆದು ವಿಚಾರಣೆ ನಡೆಸಿದರು.‌ ಅನವಶ್ಯಕವಾಗಿ ಯಾರೂ ರಸ್ತೆಗಿಳಿಯದಂತೆ ಎಚ್ಚರಿಕೆ ನೀಡಿದರು. ಈ ವೇಳೆ ಮಾಸ್ಕ್​ ಇಲ್ಲದೆ ಸೈಕಲ್​ನಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಯುವಕನನ್ನು ಕರೆದು ತಮ್ಮ ಕಾರಿನಲ್ಲಿಟ್ಟಿದ್ದ ಮಾಸ್ಕ್ ನೀಡಿ ಮಾನವೀಯತೆ ಮೆರೆದರು.

ABOUT THE AUTHOR

...view details