ಮಂಡ್ಯ ಲೋಕಸಭೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಶ್ ಹಾಗೂ ನಿಖಿಲ್ ಕುಮಾರಸ್ವಾಮಿ ಇಬ್ಬರಿಗೂ ನಟ ಶಿವರಾಜ್ಕುಮಾರ್ ಶುಭ ಕೋರಿದ್ದಾರೆ.
ಮಧು ಪರ ಪ್ರಚಾರಕ್ಕೆ ನಾ ಹೋಗಲ್ಲ, ಪತ್ನಿ ಗೀತಾ ಹೋಗುತ್ತಾರೆ : ನಟ ಶಿವರಾಜ್ಕುಮಾರ್ - undefined
ಮೈದುನ ಮಧು ಬಂಗಾರಪ್ಪ ಪರ ಚುನಾವಣಾ ಪ್ರಚಾರಕ್ಕೆ ನಾನು ಹೋಗುತ್ತಿಲ್ಲ. ಪತ್ನಿ ಗೀತಾ ಪ್ರಚಾರದಲ್ಲಿ ಭಾಗವಹಿಸುತ್ತಾರೆ ಎಂದು ನಟ ಶಿವರಾಜ್ಕುಮಾರ್ ಹೇಳಿದ್ದಾರೆ.
'ಕವಚ ' ಸಿನಿಮಾ ಪ್ರಚಾರಕ್ಕಾಗಿ ಶಿವಮೊಗ್ಗಕ್ಕೆ ತೆರಳಿದ್ದ ಶಿವರಾಜ್ಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿದರು. ಸುಮಲತಾ, ನಿಖಿಲ್ ಇಬ್ಬರೂ ಚಿತ್ರರಂಗದವರು. ಇಬ್ಬರಿಗೂ ನಾನು ಗುಡ್ಲಕ್ ಹೇಳಲು ಬಯಸುತ್ತೇನೆ ಎಂದರು. ರಾಜಕೀಯವೇ ಬೇರೆ ಚಿತ್ರರಂಗವೇ ಬೇರೆ. ಚುನಾವಣೆ ಅದರ ಪಾಡಿಗೆ ಅದು ನಡೆಯುತ್ತದೆ. ಮಧು ಪರ ನಾನು ಚುನಾವಣಾ ಪ್ರಚಾರಕ್ಕೆ ಹೋಗುತ್ತಿಲ್ಲ. ಪ್ರಚಾರಕ್ಕೆ ಬನ್ನಿ ಎಂದು ಮಧು ಕೂಡಾ ನನ್ನನ್ನು ಕರೆಯುವುದಿಲ್ಲ. ನನ್ನ ಪತ್ನಿ ಗೀತಾ ಮಾತ್ರ ಪ್ರಚಾರಕ್ಕೆ ಹೋಗುತ್ತಿದ್ದಾರೆ ಎಂದು ಹೇಳಿದರು.
ನಟ ಎಂಬ ಅಡ್ವಾಂಟೇಜ್ ಪಡೆದುಕೊಳ್ಳದೆ ಮಧು ನನ್ನನ್ನು ನನ್ನ ಪಾಡಿಗೆ ಬಿಟ್ಟಿದ್ದಾರೆ. ಚುನಾವಣೆ ಬಗ್ಗೆ ನನಗೆ ಅಷ್ಟು ತಿಳಿಯುವುದಿಲ್ಲ. ನಾನು ಅಭಿಮಾನಿಗಳಿಗಾಗಿ ನಟಿಸುತ್ತೇನೆ. ಅದೇ ರೀತಿ ಜನರು ತಮಗಿಷ್ಟ ಬಂದ ಅಭ್ಯರ್ಥಿಗೆ ಓಟು ಹಾಕುತ್ತಾರೆ. ಮತವನ್ನು ಯಾರೂ ಮಾರಿಕೊಳ್ಳಬೇಡಿ. ಐದು ವರ್ಷಕ್ಕೆ ಒಮ್ಮೆ ಸಿಗುವ ಅವಕಾಶವನ್ನು ಬಳಸಿಕೊಂಡು ಒಳ್ಳೆಯವರನ್ನು ಆಯ್ಕೆ ಮಾಡಿ, ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ. ನಾನೂ ಮತ ಚಲಾಯಿಸುತ್ತೇನೆ ಎಂದು ಶಿವಣ್ಣ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.