ಕರ್ನಾಟಕ

karnataka

ETV Bharat / state

ಚುನಾವಣೆಯಲ್ಲಿ ವೈಯಕ್ತಿಕ ನಿಂದನೆ ಸಲ್ಲದು: ನಟ ಶಿವಣ್ಣ - undefined

ನಟ ಶಿವಣ್ಣ ಚುಣಾವಣೆಯಲ್ಲಿ ವಾಗ್ದಾಳಿ ನಡೆಸುವ, ಪರಸ್ಪರ ವೈಯಕ್ತಿಕ ತೇಜೋವಧೆಯ ಹೇಳಿಕೆ ನೀಡುವವರಿಗೆ ಸಲಹೆ ನೀಡಿದ್ದಾರೆ.

ನಟ ಶಿವಣ್ಣ

By

Published : Apr 10, 2019, 1:58 PM IST

Updated : Apr 10, 2019, 2:08 PM IST

ಯಾರೆ ಆಗಲಿ ಹೇಳಿಕೆಗಳನ್ನು ನೀಡುವಾಗ ಬೇರೆಯವರಿಗೆ ಭಿನ್ನಾಭಿಪ್ರಾಯ ಬರದಂತೆ ಹೇಳಿಕೆಗಳನ್ನು ನೀಡಬೇಕು ಎಂದು ನಟ ಶಿವರಾಜ ಕುಮಾರ್ ಚಿತ್ರರಂಗದವರಿಗೆ ಶಿವಮೊಗ್ಗದಲ್ಲಿ ಸಲಹೆ ನೀಡಿದ್ದಾರೆ. ಮಂಡ್ಯ ಲೋಕಸಭ ಕ್ಷೇತ್ರದಲ್ಲಿ ನಡೆಯುತ್ತಿರುವ ಮಾತಿನ ಸಮರದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಯಾರೆ ಆಗಲಿ ಇನ್ನೂಬ್ಬರಿಗೆ ಘಾಸಿಯಾಗುವಂತಹ ಹೇಳಿಕೆ ನೀಡಬಾರದು ಎಂದರು.

ಎಲ್ಲಾರದ್ದು ಅವರದ್ದೆ ಆದ ಸ್ಟೈಲ್ ಇರುತ್ತದೆ.ಅವರದ್ದೆ‌ ಆದ ವೈಯಕ್ತಿಕತೆ ಇರುತ್ತದೆ. ಅವರವರ ಅಭಿಪ್ರಾಯ ಅವರಿಗೆ ಬಿಟ್ಟು ಬಿಡಬೇಕು, ಮಿಕ್ಕಿದ್ದು ಜನ ತೀರ್ಮಾನ ಮಾಡ್ತಾರೆ. ನಾನಂತೂ ರಾಜಕೀಯ ಸುದ್ದಿಗಳನ್ನು ನೋಡೊದೆ ಇಲ್ಲ ಎಂದರು. ಚುನಾವಣೆ ಎಲ್ಲಾವನ್ನು ಜನರಿಗೆ ಬಿಡುವುದು ವಾಸಿ. ರಾಜಕೀಯ ಹಾಗೂ ಸಿನಿಮಾ ಅಂತ ಬಂದಾಗ ಎರಡು ಡಿಫರೇಟ್ ಆಗಿದೆ. ಸಿನಿಮಾವನ್ನು ಜನ ನೋಡಿ ಮೆಚ್ಚಿ ಶತಕ ಬಾರಿಸುತ್ತಿವೆ. ಜನ ನೋಡಿ ಮೆಚ್ಚಿದಾಗ ನಾಯಕ ಆಗ್ತಿವಿ. ರಾಜಕೀಯದಲ್ಲಿ ಕೆಲ್ಸ ಮಾಡಿ ಜನ ನೋಡಿ ಮೆಚ್ಚಿದಾಗ ಜನ ನಾಯಕರಾಗ್ತಾರೆ ಎಂದು ಮಾರ್ಮಿಕವಾಗಿ ನುಡಿದರು.

ನಟ ಶಿವಣ್ಣ
ಮಧು ಒಳ್ಳೆಯ ಮನುಷ್ಯ ನಾನು ಅವರನ್ನು ಸಾಕಷ್ಟು ವರ್ಷದಿಂದ ನೋಡ್ತಾ ಇದ್ದೀನಿ. ನೀವು ಗೆಲ್ಲಿತ್ತಿರಾ ಎಂದರು. ನನಗೆ ಶಿವಮೊಗ್ಗಕ್ಕೆ ಬರಲು ಬಹಳ ಇಷ್ಟ. ಇನ್ನ ಇಷ್ಟವಾದ ಸ್ಥಳ ಶಿವಮೊಗ್ಗ. ಆದ್ರೆ ನಾನು ಶಿವಮೊಗ್ಗ ಬಂದಗಾಗೆಲ್ಲಾ ಚುನಾವಣೆ ಇರುತ್ತೆ ಎಂದು ನಸು ನಕ್ಕರು.
ಮತ ಯಾಚನೆ:
ಕಾಂಗ್ರೆಸ್​ ಜೆಡಿಎಸ್​ ಮೈತ್ರಿ ಅಭ್ಯರ್ಥಿ ಪರ ಯುವ ಕಾಂಗ್ರೆಸ್ ವತಿಯಿಂದ ನಗರದಲ್ಲಿ ವಿಶೇಷ ಪೂಜೆ ನಡೆಸಿ ಮತಯಾಚನೆ ನಡೆಸಲಾಯಿತು. ಈ ಪೂಜೆಯಲ್ಲಿ ನಟ ಶಿವರಾಜ್​ಕುಮಾರ್​ ಪತ್ನಿ ಹಾಗೂ ಅಭ್ಯರ್ಥಿ ಮಧು ಬಂಗಾರಪ್ಪ ಅವರ ಸಹೋದರಿಯೂ ಆಗಿರುವ ಗೀತಾ ಶಿವರಾಜ್​ ಕುಮಾರ್​ ಭಾಗವಹಿಸಿದ್ದರು.

ನಗರದ ವೀರಶೈವ ಕಲ್ಯಾಣ ಮಂದಿರ ಪಕ್ಕದ ಕಾಶಿ ವಿಶ್ವನಾಥ ದೇವಾಲಯದಲ್ಲಿ ವಿಶೇಷ ಪೂಜೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕರಪತ್ರಕ್ಕೂ ಪೂಜೆ ಸಲ್ಲಿಸಲಾಯಿತು. ನಂತ್ರ ಬೀದಿ ವ್ಯಾಪಾರಿಗಳ ಬಳಿ ತೆರಳಿ ಕರಪತ್ರ ನೀಡಿ ಮತಯಾಚನೆ ಮಾಡಿದರು.
Last Updated : Apr 10, 2019, 2:08 PM IST

For All Latest Updates

TAGGED:

ABOUT THE AUTHOR

...view details