ಕರ್ನಾಟಕ

karnataka

ETV Bharat / state

Prakash Raj: ನಾನು ಹೋಮದಲ್ಲಿ ಭಾಗಿಯಾಗಿದ್ದು ನನಗೆ ಸಮಸ್ಯೆ ಇಲ್ಲ ಅಂದ್ಮೇಲೆ ನಿಮಗೇಕೆ?- ಪ್ರಕಾಶ್ ರಾಜ್ - Prakash raj press meet

Actor Prakash Raj: ನಟ ಪ್ರಕಾಶ್​ ರಾಜ್ ಅವರು ಶಿವಮೊಗ್ಗದಲ್ಲಿಂದು​ ಮಾಧ್ಯಮ ಸಂವಾದದಲ್ಲಿ ಭಾಗಿಯಾಗಿ, ಹಲವು ವಿಚಾರಗಳ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದರು.

Actor Prakash raj
ನಟ ಪ್ರಕಾಶ್​ ರಾಜ್

By

Published : Aug 8, 2023, 3:50 PM IST

ಶಿವಮೊಗ್ಗದಲ್ಲಿ ನಟ ಪ್ರಕಾಶ್​ ರಾಜ್ ಮಾಧ್ಯಮ ಸಂವಾದ

ಶಿವಮೊಗ್ಗ: "ದೇಹಕ್ಕಾದ ಗಾಯ ಸುಮ್ಮನಿದ್ದರೂ ವಾಸಿಯಾಗುತ್ತದೆ. ಆದರೆ ದೇಶಕ್ಕೆ, ಸಮಾಜಕ್ಕಾದ ಗಾಯ ಸುಮ್ಮನಿದ್ದಷ್ಟು ಹೆಚ್ಚುತ್ತದೆ" ಎಂದು ನಟ ಪ್ರಕಾಶ್ ರಾಜ್ ಹೇಳಿದರು. ನಗರದ ಖಾಸಗಿ ಹೋಟೆಲ್​ನಲ್ಲಿಂದು ನಡೆದ ಮಾಧ್ಯಮ ಸಂವಾದದಲ್ಲಿ ಭಾಗಿಯಾಗಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ ಅವರು, "ಮಾನವೀಯತೆಯನ್ನು ತುಳಿಯುವರ ವಿರುದ್ಧ ನಾವು ನಿಲ್ಲುತ್ತಿದ್ದೇವೆ. ನಮಗೆ ದ್ವೇಷ ಬೇಕಿಲ್ಲ, ನಮಗೆ ಬೇಕಿರುವುದು ಪ್ರೀತಿ. ಎಲ್ಲರಲ್ಲೂ ಸಮಾನತೆ ಇರಬೇಕು. ನಮ್ಮ ಕ್ರೌರ್ಯ, ವಿರೋಧಗಳು ದೇಶ ಹಾಳಾಗಲು ಕಾರಣವಾಗುತ್ತವೆ" ಎಂದು ಕಳವಳ ವ್ಯಕ್ತಪಡಿಸಿದರು.

ಪಠ್ಯ ಪರಿಷ್ಕರಣೆ ವಿಚಾರದ ಕುರಿತು ನಿಮ್ಮ ಅಭಿಪ್ರಾಯವೇನು?: "ಪಠ್ಯಪುಸ್ತಕಗಳ ಬದಲಾವಣೆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಭೂಮಿ ಮೇಲೆ ವಿಷಾನಿಲಗಳನ್ನು ಹಾಕುವ ಹಾಗೆ ಏನೇನೋ ಹಾಕಿದಾಗ ನಾವು ಅದನ್ನು ಪ್ರಶ್ನಿಸಬೇಕು. ನಮ್ಮ ಮಕ್ಕಳ ಜೀವನದಲ್ಲಿ ಯಾರು ಆಟ ಆಡುತ್ತಿದ್ದಾರೆ ಎನ್ನುವುದನ್ನು ಯೋಚನೆ ಮಾಡಬೇಕಾಗಿರುವುದು ನಾವೇ. ರಾಜಕೀಯದಲ್ಲಿರುವ ವ್ಯಕ್ತಿಗಳು ಹೀಗೆ ಪಠ್ಯಪುಸ್ತಕಗಳನ್ನು ತಿರುಚಿದಾಗ ನಾವು ಎಚ್ಚೆತ್ತುಕೊಳ್ಳಬೇಕು" ಎಂದರು.

"ಕಾಲೇಜುಗಳಲ್ಲಿ ಕೇಸರಿ ಬಣ್ಣ ಬಳಿಯುತ್ತೇವೆ ಎಂದರೆ ಅದು ತಪ್ಪಲ್ಲವೇ?" ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದರು. "ಜೀವನದಲ್ಲಿ ನಾನು ಎಂದೂ ಧರ್ಮದ ಬಗ್ಗೆ ಮಾತೇ ಆಡಿಲ್ಲ. ಇಂಥ ಹೇಳಿಕೆಗಳನ್ನು ನೀಡಿದಾಗ ನನ್ನನ್ನು ಧರ್ಮವಿರೋಧಿ ಎನ್ನುತ್ತಾರೆ. ಒಬ್ಬ ವ್ಯಕ್ತಿ ಅಥವಾ ಒಂದು ಪಕ್ಷ ಧರ್ಮ ಅಲ್ಲ, ಧರ್ಮ ನನ್ನದು. ರಾಜಕೀಯ ವ್ಯಕ್ತಿಗಳ ಕೆಲಸ ಆಡಳಿತ ನಡೆಸುವುದು, ಬಡವರಿಗೆ ಸೌಲಭ್ಯ, ಯುವಕರಿಗೆ ಉದ್ಯೋಗ ನೀಡುವುದು" ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳ ಬಗ್ಗೆ ಏನನ್ನುವಿರಿ?: "ಬಡವರ ದುಡ್ಡಲ್ಲಿ ಬಡವರಿಗೆ ಸೌಲಭ್ಯ ನೀಡಿದರೆ ಅದು ತಪ್ಪಲ್ಲ. ಗ್ಯಾರಂಟಿ ಯೋಜನೆಗಳನ್ನು ಸ್ವಾಗತಿಸುತ್ತೇನೆ. ಅದು ಅನುಷ್ಠಾನ ಆಗದೇ ಇದ್ದಾಗ ಅದನ್ನು ನಾವೆಲ್ಲರೂ ಪ್ರಶ್ನಿಸಬೇಕು. ಅದು ನಮ್ಮ ಕರ್ತವ್ಯ ಆಗಬೇಕು" ಎಂದು ತಿಳಿಸಿದರು. ಗ್ಯಾರಂಟಿ ಕೊಟ್ಟ ನಂತರ ಮಹಿಳೆಯರು ಹೊರಗೆ ಬರುತ್ತಿದ್ದಾರೆ, ಅವರ ಜೊತೆ ಅವರ ಗಂಡಂದಿರೂ ಸಹ ಮನೆಯಿಂದ ಹೊರಬರುತ್ತಿದ್ದಾರೆ. ಇದರಿಂದ ಸರ್ಕಾರಕ್ಕೂ ಹೆಚ್ಚಿನ ಆದಾಯ ಬರುತ್ತಿದೆ. ಕೇವಲ ಒಂದು ಶೇಕಡಾದಷ್ಟು ಜನರ ಬಳಿ ಮಾತ್ರ ಹಣವಿದೆ. ಬಡವರಿಗೆ ಕೊಡುವ ಯೋಜನೆಗಳ ಬಗ್ಗೆ ವ್ಯಾಖ್ಯಾನ ಯಾಕೆ ಬೇಕು?" ಎಂದು ಅವರು ಕೇಳಿದರು.

"ಪ್ರಧಾನಿಯವರ ಗ್ಯಾರಂಟಿ ಕೇಳಿದರೆ ನಮ್ಮನ್ನು ವಿರೋಧಿಗಳೆನ್ನುತ್ತಾರೆ. ನಾವು ನಿಮಗೆ ಮತ ನೀಡಿದರೂ, ಮತ ನೀಡಿಲ್ಲವೆಂದರೂ ನೀವು ನನ್ನ ಪ್ರಧಾನಿ. ಹಾಗಾಗಿ ನಾನು ನಿಮ್ಮನ್ನು ಪ್ರಶ್ನೆ ಮಾಡುತ್ತೇನೆ, ಅದು ನನ್ನ ಹಕ್ಕು" ಎಂದರು.

ಇದನ್ನೂ ಓದಿ:ತಮನ್ನಾಗಾಗಿ ಭದ್ರತೆ ಭೇದಿಸಿ ಬಂದ ಫ್ಯಾನ್​...ನಾಜೂಕಾಗಿ ಪ್ರತಿಕ್ರಿಯಿಸಿದ ಸೌತ್​ ಸ್ಟಾರ್​ ನಟಿ

ಹೋಮ, ಹವನದಲ್ಲಿ ಭಾಗಿಯಾಗಿದ್ದಕ್ಕೆ ಟೀಕೆ ಕೇಳಿಬಂತಲ್ಲಾ?: "ನಾನು ಧರ್ಮ ವಿರೋಧಿ ಎನ್ನುವವರು ಸಾಕ್ಷಿಸಮೇತ ಮಾತನಾಡಬೇಕು. ನನ್ನ ಹಾಗೂ ನನ್ನ ಹೆಂಡತಿಯ ನಂಬಿಕೆ ವಿಭಿನ್ನ. ಅವರ ನಂಬಿಕೆ ವಿರೋಧಿಸುವ ಹಕ್ಕು ನನಗಿಲ್ಲ. ಹಾಗಾಗಿ ಹೋಮಕ್ಕೆ ಹೋಗಿದ್ದೇನೆ, ನನಗೆ ಸಮಸ್ಯೆ ಇಲ್ಲದ ಮೇಲೆ ನಿಮಗೇಕೆ ಸಮಸ್ಯೆ" ಎಂದು ಪ್ರಶ್ನಿಸಿದರು. "ನನ್ನ ಅರ್ಧಾಂಗಿ, ನನ್ನ ಮಕ್ಕಳ ತಾಯಿ, ನನ್ನನ್ನು ಪ್ರೀತಿಸುವ ನನ್ನ ಹೆಂಡತಿ ಅದನ್ನೊಪ್ಪಿದರೆ ನಾನು ಅದನ್ನು ಗೌರವಿಸಬೇಕು. ಹೀಗಾಗಿ ನಾನು ಪೂಜೆ ಮಾಡಿಸಿದ್ದೇನೆ. ನಾನು ನನ್ನ ಪತ್ನಿಯನ್ನು ಗೌರವಿಸುತ್ತೇನೆ. ಯಾರೋ ಅದನ್ನು ತಿರುಚಿ ಏನೇನೋ ಬರೆದರೆ ಅದಕ್ಕೆಲ್ಲ ಉತ್ತರ ಕೊಡಲು ಹೋಗುವುದಿಲ್ಲ" ಎಂದು ಸ್ಪಷ್ಟನೆ ಕೊಟ್ಟರು.

ಇದನ್ನೂ ಓದಿ:ಅಪ್ಪಟ ಚಿನ್ನದ ವ್ಯಕ್ತಿತ್ವವುಳ್ಳ ವಿಜಯ್​ ರಾಘವೇಂದ್ರರಿಗೆ ಭಗವಂತ ನೋವು ತಡೆಯುವ ಶಕ್ತಿ ನೀಡಲಿ: ವಿ. ಸೋಮಣ್ಣ

ABOUT THE AUTHOR

...view details