ಕರ್ನಾಟಕ

karnataka

ETV Bharat / state

ಮುಂಬೈನಿಂದ ಸೊರಬಕ್ಕೆ ಸೈಕಲ್​​ನಲ್ಲಿ ಬಂದವರ ವರದಿ ಬಂದ ನಂತರ ಕ್ರಮ: ಡಿಸಿ‌ - ಕೆ.ಬಿ.ಶಿವಕುಮಾರ್

ಸೊರಬದಿಂದ ಮುಂಬೈಗೆ ಬಂಗಾರದ ಕೆಲಸಕ್ಕೆ‌ ಹೋಗಿದ್ದ 6 ಜನ ಯುವಕರು ಶಿವಮೊಗ್ಗದ ಗಡಿ ಭಾಗ‌ ಆನವಟ್ಟಿಗೆ ಬಂದಾಗ ಅವರನ್ನು ಅಲ್ಲಿಯೇ ತಡೆದು ಶಿವಮೊಗ್ಗದ ಮೆಗ್ಗಾನ್ ಕೋವಿಡ್ ಆಸ್ಪತ್ರೆಗೆ ಕರೆ ತರಲಾಯಿತು.

DC KB Shivakumar
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

By

Published : May 13, 2020, 9:23 PM IST

ಶಿವಮೊಗ್ಗ:ಸೊರಬಕ್ಕೆ‌ ಮುಂಬೈನಿಂದ ಸೈಕಲ್​ನಲ್ಲಿ ಬಂದವರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದ್ದು, ಪರೀಕ್ಷಾ ವರದಿ ಬಂದ ನಂತರ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

ಸೊರಬದಿಂದ ಮುಂಬೈಗೆ ಬಂಗಾರದ ಕೆಲಸಕ್ಕೆ‌ ಹೋಗಿದ್ದ 6 ಜನ ಯುವಕರು ಶಿವಮೊಗ್ಗದ ಗಡಿ ಭಾಗ‌ ಆನವಟ್ಟಿಗೆ ಬಂದಾಗ ಅವರನ್ನು ಅಲ್ಲಿಯೇ ತಡೆದು ಶಿವಮೊಗ್ಗದ ಮೆಗ್ಗಾನ್ ಕೋವಿಡ್ ಆಸ್ಪತ್ರೆಗೆ ಕರೆ ತರಲಾಯಿತು. ಇಲ್ಲಿ ಅವರ ಗಂಟಲು ದ್ರವ ಪರೀಕ್ಷೆಗೆ ತೆಗೆದುಕೊಳ್ಳಲಾಗಿದ್ದು, ಅದರ ಫಲಿತಾಂಶ ಬಂದ ನಂತರ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು. ಜಿಲ್ಲೆಗೆ ಬೇರೆ ರಾಜ್ಯಗಳಿಂದ ಆಗಮಿಸಲು 700 ಜನರಿಗೆ ಅವಕಾಶ ಮಾಡಿ ಕೊಡಲಾಗಿದೆ. ಅದರಲ್ಲಿ‌‌ 580 ಜನ ಆಗಮಿಸಿದ್ದಾರೆ. ಜಿಲ್ಲೆಗೆ ಯಾರೇ ಬರಲಿ ಅವರನ್ನು ಮೊದಲು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ನಂತರ ಅವರ ಗಂಟಲು ದ್ರವ ತೆಗೆದುಕೊಂಡು ಪರೀಕ್ಷೆ ನಡೆಸಲಾಗುತ್ತದೆ.‌ ನಂತರ ಕ್ವಾರಂಟೈನ್​ಗೆ ಕಳುಹಿಸಲಾಗುತ್ತಿದೆ. ಇಂದು ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಿದ ಕಾರಣ ಮೊದಲು ಇವರಿಗೆ ಕ್ವಾರಂಟೈನ್ ಮಾಡಿಸಿ, ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದರು.

ಜಿಲ್ಲೆಗೆ ದಾವಣಗೆರೆ ಜಿಲ್ಲೆಯಿಂದ ಓರ್ವ ತಬ್ಲಿಘಿ ಆಗಮಿಸಿದ್ದು, ಅವರನ್ನು ಪರೀಕ್ಷಗೆ ಒಳಪಡಿಸಿದ್ದು, ವರದಿ ನೆಗೆಟಿವ್ ಬಂದಿದೆ.‌ ಜಿಲ್ಲೆಯಲ್ಲಿ 3,261 ಜನರ ರಕ್ತದ ಮಾದರಿ ಪರೀಕ್ಷೆಗೆ ಒಳಪಡಿಸಲಾಗಿತ್ತು.‌ ಅದರಲ್ಲಿ 3,095 ಫಲಿತಾಶ ಬಂದಿದೆ. ಇನ್ನೂ‌ 158 ಜನರ ಫಲಿತಾಂಶ ಬರಬೇಕಿದೆ. ನಮ್ಮ ಜಿಲ್ಲೆಯಿಂದ ಯಾರಿಂದ ಯಾರಿಗೂ ಪಾಸಿಟಿವ್ ಬಂದಿಲ್ಲ. ಒರ್ವ‌ ತಬ್ಲಿಘಿ ಬಂದಿದ್ದು,‌ ಆತನನ್ನು‌ ಸಹ ಪರೀಕ್ಷೆಗೆ ಒಳಪಡಿಸಲಾಗಿದೆ. ಆತನ ವರದಿ ಕೂಡ ನೆಗೆಟಿವ್ ಬಂದಿದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details