ಕರ್ನಾಟಕ

karnataka

ETV Bharat / state

ಶಿವಮೊಗ್ಗ: ಪೊಲೀಸ್​ ಕಾನ್ಸ್​ಟೇಬಲ್​ಗೆ ಚಾಕು ಇರಿತ - ಆರೋಪಿ ಪರಾರಿ! - attack on police

ದೊಡ್ಡಪೇಟೆ ಪೊಲೀಸ್ ಕಾನ್ಸ್​ಟೇಬಲ್​ ಗುರುನಾಯಕ್ ಅವರಿಗೆ ಆರೋಪಿ ಸಾಹಿಲ್ ಖುರೇಷಿ ಚಾಕು ಇರಿದಿದ್ದಾನೆ.

accused escaped who stabbed on police constable in shivamogga
ಪೊಲೀಸ್​ ಕಾನ್ಸ್​ಟೇಬಲ್​ಗೆ ಚಾಕು ಇರಿತ

By

Published : Jun 21, 2022, 1:31 PM IST

Updated : Jun 21, 2022, 2:07 PM IST

ಶಿವಮೊಗ್ಗ: ನಗರದ ದೊಡ್ಡಪೇಟೆ ಪೊಲೀಸ್ ಕಾನ್ಸ್​ಟೇಬಲ್​ ಗುರುನಾಯಕ್ ಅವರಿಗೆ ಪ್ರಕರಣವೊಂದರ ಆರೋಪಿ ಸಾಹಿಲ್ ಖುರೇಷಿ ಚಾಕು ಇರಿದು ಪರಾರಿ ಆಗಿದ್ದಾನೆ.

ಗಾಯಗೊಂಡ ಪೊಲೀಸ್​ ಕಾನ್ಸ್​ಟೇಬಲ್​ಗೆ ಮುಂದುವರಿದ ಚಿಕಿತ್ಸೆ

ಪ್ರಕರಣ ಒಂದರಲ್ಲಿ ಆರೋಪಿ ಆಗಿದ್ದ ಸಾಹಿಲ್ ಖುರೇಷಿಯನ್ನು ಪೊಲೀಸ್ ಕಾನ್ಸ್​ಟೇಬಲ್​ಗಳಾದ ರಮೇಶ್ ಹಾಗೂ ಗುರುನಾಯ್ಕ ಅವರು ಬಂಧಿಸಲು ಹೋದ ವೇಳೆ ಆರೋಪಿ ಖುರೇಷಿ ಇಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆಯಲ್ಲಿ ಪೊಲೀಸ್ ಕಾನ್ಸ್​ಟೇಬಲ್ ರಮೇಶ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಇನ್ನೋರ್ವ ಕಾನ್ಸ್​ಟೇಬಲ್​ ಗುರುನಾಯ್ಕ ಅವರ ಎದೆಗೆ ಚಾಕು ಇರಿತವಾಗಿದೆ.

ಇದನ್ನೂ ಓದಿ:ಮಂಡ್ಯ ಐಟಿಐ ಕಾಲೇಜು​ ಪ್ರಾಂಶುಪಾಲರಿಗೆ ಶಾಸಕ ಎಂ.ಶ್ರೀನಿವಾಸ್ ಕಪಾಳ ಮೋಕ್ಷ!

ಗಾಯಾಳು ಗುರುನಾಯ್ಕ ಅವರನ್ನು ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯವನ್ನು ಎಸ್ಪಿ ಲಕ್ಷ್ಮಿ ಪ್ರಸಾದ್ ವಿಚಾರಿಸಿದ್ದರು. ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Jun 21, 2022, 2:07 PM IST

ABOUT THE AUTHOR

...view details