ಶಿವಮೊಗ್ಗ :ಬೈಕ್ ಸವಾರನೊಬ್ಬ ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬಿದ್ದು ಒದ್ದಾಡುವಾಗ, ಅದೇ ದಾರಿಯಲ್ಲಿ ಸಾಗುತ್ತಿದ್ದ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು ಅಪಘಾತಕ್ಕೀಡಾದ ವ್ಯಕ್ತಿಯನ್ನು ಆಸ್ಪತ್ರೆಗೆ ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ.
ಅಪಘಾತಕ್ಕೀಡಾಗಿ ಒದ್ದಾಡುತ್ತಿದ್ದ ವ್ಯಕ್ತಿ.. ಮಾನವೀಯತೆ ತೋರಿದ ಶಾಸಕ ಆರಗ ಜ್ಞಾನೇಂದ್ರ - ಬೈಕ್ ಸವಾರ ವಿದ್ಯುತ್ ಕಂಬಕ್ಕೆ ಡಿಕ್ಕಿ
ಇಂದು ಸಂಜೆ ಸಿರಿಗೆರೆ ಹಾಗೂ ಆಯನೂರು ನಡುವಿನ ರಸ್ತೆಯಲ್ಲಿ ಬೈಕ್ ಸವಾರ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬಿದ್ದು ಒದ್ದಾಡುತ್ತಿದ್ದ..
ಇಂದು ಸಂಜೆ ಸಿರಿಗೆರೆ ಹಾಗೂ ಆಯನೂರು ನಡುವಿನ ರಸ್ತೆಯಲ್ಲಿ ಬೈಕ್ ಸವಾರ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬಿದ್ದು ಒದ್ದಾಡುತ್ತಿದ್ದ. ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಶಾಸಕ ಆರಗ ಜ್ಞಾನೇಂದ್ರ ಅವರು ತಮ್ಮ ಕಾರನ್ನು ನಿಲ್ಲಿಸಿ, ಅಪಘಾತಕ್ಕೀಡಾದ ವ್ಯಕ್ತಿಗೆ ನೀರು ಕುಡಿಸಿ, ಸ್ವತಃ ತಾವೇ ಆ್ಯಂಬುಲೆನ್ಸ್ಗೆ ಕರೆ ಮಾಡಿದರು. ಆಯನೂರಿನ ತನಕ ಸಾಗಿ, ಬೈಕ್ ಸವಾರನ ಸಾಮಗ್ರಿಗಳನ್ನು ಮನೆಯವರಿಗೆ ನೀಡಿ ಧೈರ್ಯ ಹೇಳಿದ್ದಾರೆ.
ಬೈಕ್ ಸವಾರ ಆಯನೂರಿನ ನಿವಾಸಿಯಾಗಿದ್ದು, ಸೂಕ್ತ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿ ಕೊಟ್ಟು ಮಾನವೀಯತೆ ಮೆರೆದಿದ್ದಾರೆ ಶಾಸಕ ಆರಗ ಜ್ಞಾನೇಂದ್ರ.