ಕರ್ನಾಟಕ

karnataka

ETV Bharat / state

ಶಿವಮೊಗ್ಗದಲ್ಲಿ ಲಾರಿ-ಕಾರು ಅಪಘಾತ: ಮೂವರು ಸಾವು, ಓರ್ವನಿಗೆ ಗಾಯ - ETV Bharath Kannada

ಶಿವಮೊಗ್ಗದಲ್ಲಿ ಕಾರು ಮತ್ತು ಲಾರಿ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

accident between a lorry and a car three died
ಲಾರಿ ಹಾಗೂ ಕಾರು ನಡುವೆ ಭೀಕರ ಅಪಘಾತ

By

Published : Dec 11, 2022, 8:37 AM IST

ಶಿವಮೊಗ್ಗ: ಲಾರಿ ಹಾಗೂ ಕಾರ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಓರ್ವನಿಗೆ ಗಂಭೀರ ಗಾಯವಾಗಿದೆ. ಈ ದುರ್ಘಟನೆ ಶಿವಮೊಗ್ಗ ತಾಲೂಕು ಕಲ್ಲಾಪುರ ಗ್ರಾಮದ ಬಳಿ ಇಂದು ಬೆಳಗಿನ ಜಾವ ನಡೆಯಿತು.

ಶಿವಮೊಗ್ಗದಿಂದ ಸವಳಂಗ ಮೂಲಕ ದಾವಣಗೆರೆ ಕಡೆ ಹೊರಟಿದ್ದ (KA 17 MA 3581) ಬಲೆನೋ ಕಾರು ಹಾಗೂ ಸವಳಂಗ ಕಡೆಯಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ (KA 27 C 3924) ಮೆಕ್ಕೆಜೋಳ ತುಂಬಿದ್ದ ಲಾರಿ ನಡುವೆ ಅಪಘಾತ ಉಂಟಾಗಿದೆ. ಬಲೆನೋ ಜಖಂಗೊಂಡಿದೆ. ಕಾರಿನಲ್ಲಿದ್ದ ಕಾರ್ತಿಕ್, ವಿವೇಕ್ ಹಾಗೂ ಮೋಹನ್ ಸ್ಥಳದಲ್ಲಿಯೇ ಸಾವನ್ನ‌ಪ್ಪಿದ್ದಾರೆ. ರುದ್ರೇಶ್ ಎಂಬುವರಿಗೆ ಗಂಭೀರ ಗಾಯವಾಗಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಲಾರಿ ಚಾಲಕ ಪರಾರಿಯಾಗಿದ್ದಾನೆ. ಕಾರಿನಲ್ಲಿದ್ದವರು ದಾವಣಗೆರೆಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದ ವಿದ್ಯಾರ್ಥಿಗಳೆಂದು ತಿಳಿದು ಬಂದಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಧರ್ಮಸ್ಥಳದಿಂದ ಶೃಂಗೇರಿ ತೆರಳುವಾಗ ರಸ್ತೆ ಅಪಘಾತ : ಮಗು ಸೇರಿ ದಂಪತಿ ಸಾವು

ABOUT THE AUTHOR

...view details