ಶಿವಮೊಗ್ಗ:ಕಾಲುವೆಯಲ್ಲಿ ತೇಲಿ ಹೋಗುತ್ತಿದ್ದ ಯುವತಿಯನ್ನು ಯುವಕನೋರ್ವ ತನ್ನ ಪ್ರಾಣದ ಹಂಗು ತೊರೆದು ರಕ್ಷಿಸಿರುವ ಘಟನೆ ಸಾಗರದ ಕಾರ್ಗಲ್ ಬಳಿ ನಡೆದಿದೆ.
ಅರಳಗೋಡಿನಿಂದ ಸಾಗರದ ಕಡೆ ಅನುರಾಧ ಹಾಗೂ ಆಕೆಯ ಸಹೋದರ ಬೈಕ್ನಲ್ಲಿ ಹೊರಟಿದ್ದರು. ಈ ವೇಳೆ ಸಾಗರ ಕಡೆಯಿಂದ ಬಂದ ಕಾರು ಬೈಕ್ಗೆ ಚೈನಾ ಗೇಟ್ನ ಶರಾವತಿ ಕಾಲುವೆ ಬಳಿ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ಅಲ್ಲೆ ಬಿದ್ದಿದ್ದಾನೆ. ಆದರೆ ಬೈಕ್ನ ಹಿಂಬದಿ ಕುಳಿತಿದ್ದ ಯುವತಿ ಅನುರಾಧ ಹಾರಿ ಕಾಲುವೆಗೆ ಬಿದ್ದಿದ್ದಾಳೆ. ಕಾಲುವೆಯಲ್ಲಿ ನೀರು ವೇಗವಾಗಿ ಹರಿಯುತ್ತಿತ್ತು. ನೀರಿನ ರಭಸಕ್ಕೆ ಅನುರಾಧ ತೇಲಿ ಹೋಗಿದ್ದಾಳೆ. ಅಷ್ಟರಲ್ಲಿ ಮನೆಯಲ್ಲೇ ಇದ್ದ ಲತೀಫ್ ಎಂಬ ಯುವಕ ಅನುರಾಧ ತೇಲಿ ಹೋಗುವುದನ್ನು ನೋಡಿ ಯಾವುದೇ ಅಲೋಚನೆ ಮಾಡದೆ ಕಾಲುವೆ ಹಾರಿ ಯುವತಿಯನ್ನು ರಕ್ಷಿಸಿದ್ದಾನೆ.