ಕರ್ನಾಟಕ

karnataka

ETV Bharat / state

ಖಾಸಗಿ ಬಸ್-ಕಾರು ಮುಖಾಮುಖಿ ಡಿಕ್ಕಿ: ಬಾಲಕ ಸೇರಿ ಇಬ್ಬರು ಸಾವು - ಶಿವಮೊಗ್ಗ ಅಪಘಾತದ ಸುದ್ದಿ

ಸಾಗರದಲ್ಲಿ ಬಸ್​ ಮತ್ತು ಕಾರು ನಡುವೆ ಡಿಕ್ಕಿ- ಚಾಲಕ, ಬಾಲಕ ಸಾವು- ಸಾಗರ ತಾಲೂಕಲ್ಲಿ ದುರ್ಘಟನೆ

Shivamogga accident
Shivamogga accident

By

Published : Aug 1, 2022, 7:23 PM IST

ಶಿವಮೊಗ್ಗ : ಖಾಸಗಿ ಬಸ್ ಹಾಗೂ ಕಾರಿನ ನಡುವೆ ಮುಖಮುಖಿ ಡಿಕ್ಕಿಯಾದ ಪರಿಣಾಮ ಓರ್ವ ಬಾಲಕ ಸೇರಿದಂತೆ ಇಬ್ಬರು ಮೃತಪಟ್ಟಿರುವ ಘಟನೆ ಸಾಗರ ತಾಲೂಕು ಆಲಳ್ಳಿ ಗ್ರಾಮದ ಬಳಿ ಸಂಭವಿಸಿದೆ. ಕಾರು ಚಾಲಕ ಶಹಬಾಜ್ (23) ಮತ್ತು ಬಾಲಕ ರಿಹಾನ್​ (13) ಮೃತರು ಎಂದು ತಿಳಿದುಬಂದಿದೆ.

ಹೊನ್ನಾವಾರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಕಾರು ಚಾಲಕ ಸ್ಥಳದಲ್ಲೇ ಉಸಿರು ಚೆಲ್ಲಿದರೆ ಬಾಲಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಅಪಘಾತದಿಂದ ಕಾರಿನಲ್ಲಿದ್ದ ಮೂವರು ಮಹಿಳೆಯರು, ಇಬ್ಬರು ಪುರುಷರು ಸೇರಿದಂತೆ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ‌.

ಕಾರಿನಲ್ಲಿದ್ದವರು ದಾವಣಗೆರೆ ಜಿಲ್ಲೆ ಚನ್ನಗಿರಿ ಪಟ್ಟಣದ ನಿವಾಸಿಗಳಾಗಿದ್ದು, ಎಲ್ಲರೂ ಸೇರಿ ಜೋಗ ಜಲಪಾತ ನೋಡಲು ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಗಾಯಾಳುಗಳಿಗೆ ಸಾಗರದ ಉಪ ವಿಭಾಗಿಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಅಲ್ಲಿಂದ ಶಿವಮೊಗ್ಗಕ್ಕೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿದೆ. ಈ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಖಾಸಗಿ ಬಸ್ ಜೋಗದಿಂದ ಸಾಗರದ ಕಡೆ ವಾಪಸ್ ಬರುತ್ತಿತ್ತು. ಈ ಬಸ್ ನಾಳೆ ದಾವಣಗೆರೆಯಲ್ಲಿ ನಡೆಯುವ ಸಿದ್ದರಾಮೋತ್ಸವಕ್ಕೆ ತೆರಳುತ್ತಿತ್ತು ಎನ್ನಲಾಗ್ತಿದೆ. ಆದರೆ, ಅಪಘಾತವಾಗುತ್ತಲೇ ಬಸ್​​ನ ಚಾಲಕ ಸೇರಿದಂತೆ ಪ್ರಯಾಣಿಕರು ಸಹ ಪರಾರಿಯಾಗಿದ್ದಾರೆ.

ಇದನ್ನೂ ಓದಿ:ಆಗುಂಬೆ ಘಾಟ್​ನಲ್ಲಿ ಮೃತದೇಹವಿದ್ದ ಆಂಬ್ಯುಲೆನ್ಸ್ ಪಲ್ಟಿ, ಓರ್ವನಿಗೆ ಗಾಯ

ABOUT THE AUTHOR

...view details