ಕರ್ನಾಟಕ

karnataka

ETV Bharat / state

ಬೈಕ್ - ಪಿಕಪ್ ವಾಹನದ ನಡುವೆ ಡಿಕ್ಕಿ: ತಂದೆ-ಮಗಳ ದಾರುಣ ಸಾವು - ರಿಪ್ಪನಪೇಟೆ ಪೊಲೀಸ್ ಠಾಣೆ

ಬೈಕ್​ಗೆ ಮಹೇಂದ್ರ ಪಿಕಪ್‌ ವಾಹನ ಡಿಕ್ಕಿ ಹೊಡೆದ ಪರಿಣಾಮ ತಂದೆ ಮಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

Accident
ಬೈಕ್ -ಪಿಕಪ್ ನಡುವೆ ಡಿಕ್ಕಿ : ತಂದೆ-ಮಗಳ ಸಾವು

By

Published : Jan 31, 2020, 7:11 PM IST

ಶಿವಮೊಗ್ಗ:ಬೈಕ್​ಗೆ ಮಹೇಂದ್ರ ಪಿಕಪ್‌ ವಾಹನ ಡಿಕ್ಕಿ ಹೊಡೆದ ಪರಿಣಾಮ ತಂದೆ ಮಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ರಿಪ್ಪನಪೇಟೆಯಲ್ಲಿ ನಡೆದಿದೆ.

ಹೊಸನಗರ ತಾಲೂಕು ರಿಪ್ಪನಪೇಟೆಯ ರಾಘವೇಂದ್ರ(30) ಹಾಗೂ ಸಾಹಿತ್ಯ(5) ಸಾವನ್ನಪ್ಪಿದವರು. ಶಾಲೆಯಿಂದ ಮಗಳನ್ನು ಮನೆಗೆ ಕರೆತರುವಾಗ ಸಂದರ್ಭದಲ್ಲಿ ರಿಪ್ಪನಪೇಟೆಯ ತೀರ್ಥಹಳ್ಳಿ ರಸ್ತೆಯ ವರ್ನಾ ಹೊಂಡ ಬೈಕ್ ಷೋ ರೂಂ ಬಳಿ ಅಪಘಾತ ಸಂಭವಿಸಿದೆ.

ಇಲ್ಲಿನ ರಾಮಕೃಷ್ಣ ಶಾಲೆಯಲ್ಲಿ ಸಾಹಿತ್ಯ ಓದುತ್ತಿದ್ದು, ತಂದೆ ರಾಘವೇಂದ್ರ ಮಗಳನ್ನು ಮನೆಗೆ ಕರೆತರುವಾಗ ಮಹೇಂದ್ರ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಸಾಹಿತ್ಯ ಸ್ಥಳದಲ್ಲೆ ಸಾವನ್ನಪ್ಪಿದ್ದಾಳೆ. ರಾಘವೇಂದ್ರರನ್ನು ಶಿವಮೊಗ್ಗ ಆಸ್ಪತ್ರೆಗೆ ಕರೆ ತರುವಾಗ ಮಾರ್ಗದಲ್ಲಿ ಸಾವನ್ನಪ್ಪಿದ್ದಾರೆ.

ಈ ಕುರಿತು ರಿಪ್ಪನಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details