ಕರ್ನಾಟಕ

karnataka

ಬೈಕ್​ಗೆ ಲಾರಿ ಡಿಕ್ಕಿ: ಅಪಘಾತದ ವಿಡಿಯೋ ವೈರಲ್​​

ಶಿವಮೊಗ್ಗ ಜಿಲ್ಲೆಯಲ್ಲಿ ನಿನ್ನೆ ನಡೆದ ಲಾರಿ-ಬೈಕ್ ನಡುವಿನ ಅಪಘಾತವೊಂದರ ವಿಡಿಯೋ ಇಂದು ವೈರಲ್​ ಆಗಿದೆ.

By

Published : May 11, 2020, 8:23 PM IST

Published : May 11, 2020, 8:23 PM IST

accident between bike and lorry
ಅಪಘಾತದ ವಿಡಿಯೋ ವೈರಲ್..!

ಶಿವಮೊಗ್ಗ:ಜಿಲ್ಲೆಯ ಸಕ್ರೇಬೈಲು ಸಮೀಪ ನಿನ್ನೆ ಅಪಘಾತವೊಂದು ನಡೆದಿದ್ದು, ಇಂದು ಆ ಅಪಘಾತದ ವಿಡಿಯೋ ವೈರಲ್ ಆಗಿದೆ.

ಅಪಘಾತದಲ್ಲಿ ಜಖಂಗೊಂಡ ಕಾರು

ತೀರ್ಥಹಳ್ಳಿಯಿಂದ ಕಾರಿನಲ್ಲಿ ಬರುತ್ತಿದ್ದವರು ಮಳೆ ಬರುತ್ತಿರುವುದನ್ನು ವಿಡಿಯೋ ಮಾಡಿಕೊಳ್ಳುತ್ತಾ ಬರುತ್ತಿದ್ದರು. ಇದೇ ವೇಳೆ ವೇಗವಾಗಿ ಬಂದ ಲಾರಿ ತಿರುವಿನಲ್ಲಿ ಹಿಂಭಾಗದಿಂದ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ.

ಅಪಘಾತದ ವಿಡಿಯೋ ವೈರಲ್

ಪರಿಣಾಮ ಅಪಫಾತದ ರಭಸಕ್ಕೆ ವಿದ್ಯಾನಗರದ ಬೈಕ್ ಸವಾರ ಜನಾರ್ಧನ್ (19) ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ. ಇನ್ನೋರ್ವ ಬೈಕ್ ಹಿಂಬದಿ ಸವಾರ ರಫೀಕ್​​ಗೆ ಗಂಭೀರ ಗಾಯವಾಗಿದ್ದು, ಖಾಸಗಿ ಅಸ್ಪತ್ರೆಗೆ ದಾಖಲು ಮಾಡಲಾಗಿದೆ.

ಅಪಘಾತದಲ್ಲಿ ಜಖಂಗೊಂಡ ಕಾರು

ಬೈಕ್​​ಗೆ ಡಿಕ್ಕಿ ಹೊಡೆದ ನಂತರ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಸಹ ಜಖಂಗೊಂಡಿದೆ. ಕಾರಿನಲ್ಲಿದ್ದ ಮೂವರು ಪ್ರಾಣಾಯಾಪಾದಿಂದ ಪಾರಾಗಿದ್ದಾರೆ. ಈ ಸಂಬಂಧ ಶಿವಮೊಗ್ಗದ ತುಂಗಾನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details