ಕರ್ನಾಟಕ

karnataka

ETV Bharat / state

ರುದ್ರೇಶಪ್ಪರನ್ನು ಶಿವಮೊಗ್ಗದ ಮನೆಗೆ ಕರೆ ತಂದು ಎಸಿಬಿ ವಿಚಾರಣೆ - Rudreshappa in shimoga

ಟಿ.ಎಸ್.ರುದ್ರೇಶಪ್ಪರನ್ನು ಗದಗದಿಂದ ಶಿವಮೊಗ್ಗಕ್ಕೆ ಕರೆ ತಂದು ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ರುದ್ರೇಶಪ್ಪ ಎಸಿಬಿ ಅಧಿಕಾರಿಗಳ ತನಿಖೆಗೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ACB inquired of Rudreshappa in shimoga
ರುದ್ರೇಶಪ್ಪರನ್ನು ಶಿವಮೊಗ್ಗದ ಮನೆಗೆ ಕರೆ ತಂದು ಎಸಿಬಿ ವಿಚಾರಣೆ

By

Published : Nov 24, 2021, 11:44 PM IST

ಶಿವಮೊಗ್ಗ: ಗದಗ ಜಿಲ್ಲಾ ಕೃಷಿ ಇಲಾಖೆಯ ಜಂಟಿ‌ ನಿರ್ದೇಶಕ ಟಿ.ಎಸ್.ರುದ್ರೇಶಪ್ಪರನ್ನು ಗದಗದಿಂದ ಶಿವಮೊಗ್ಗಕ್ಕೆ ಕರೆ ತಂದು ವಿಚಾರಣೆ ನಡೆಸಲಾಗಿದೆ. ಸಂಜೆ ಶಿವಮೊಗ್ಗದ ಚಾಲುಕ್ಯ ನಗರದ ಮನೆಗೆ ಕರೆ ತಂದು ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಎಸಿಬಿ ಪೂರ್ವ ವಲಯದ ಎಸ್ಪಿ ಜಯಪ್ರಕಾಶ್ ರುದ್ರೇಶಪ್ಪರನ್ನು ತೀವ್ರ ವಿಚಾರಣೆ ನಡೆಸಿದರು. ಈ ವೇಳೆ ರುದ್ರೇಶಪ್ಪ ತನ್ನ ಭ್ರಷ್ಟಚಾರವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ರುದ್ರೇಶಪ್ಪನವರು ಹೊಂದಿರುವ ಬ್ಯಾಂಕ್ ಲಾಕರ್ ಬಗ್ಗೆ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಈ ಲಾಕರ್ ಎಸ್ ಬಿ ಐ ಬ್ಯಾಂಕ್ ನಲ್ಲಿ ಇದೆ. ಲಾಕರ್ ಅನ್ನು ನಾಳೆ ಬೆಳಗ್ಗೆ ಓಪನ್ ಮಾಡಲು ನಿರ್ಧರಿಸಲಾಗಿದೆ. ರುದ್ರೇಶಪ್ಪರನ್ನು ಎಸಿಬಿ ಅಧಿಕಾರಿಗಳು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ರುದ್ರೇಶಪ್ಪರನ್ನು ಶಿವಮೊಗ್ಗದ ಮನೆಗೆ ಕರೆ ತಂದು ಎಸಿಬಿ ವಿಚಾರಣೆ

ರುದ್ರೇಶಪ್ಪ ಎಸಿಬಿ ಅಧಿಕಾರಿಗಳ ತನಿಖೆಗೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಅಧಿಕಾರಿಗಳು ಇನ್ನಷ್ಟು ಆಸ್ತಿ ಹೊಂದಿರುವ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ರುದ್ರೇಶಪ್ಪನವರ ಮನೆ ಮೇಲೆ ದಾಳಿಯ ವೇಳೆ 9.50 ಕೆ.ಜಿ ಚಿನ್ನ. 3 ಕೆ.ಜಿ ಬೆಳ್ಳಿ, 15 ಲಕ್ಷ ರೂ ನಗದು, ಎರಡು ಕಾರು, ಎರಡು ಮನೆ ಪತ್ತೆಯಾಗಿತ್ತು.

ABOUT THE AUTHOR

...view details