ಕರ್ನಾಟಕ

karnataka

ETV Bharat / state

ಖಾತೆ ಬದಲಾವಣೆಗೆ ಲಂಚ; ಗೌವಟೂರು ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ - ಶಿವಮೊಗ್ಗ ಭ್ರಷ್ಟಚಾರ ನಿಗ್ರಹ ದಳದ ಸುದ್ದಿ

ಖಾತೆ ಬದಲಾವಣೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಗ್ರಾಮ ಲೆಕ್ಕಾಧಿಕಾರಿಯನ್ನು ಭ್ರಷ್ಟಚಾರ ನಿಗ್ರಹ ದಳ ತನ್ನ ಬಲೆಗೆ ಕೆಡವಿದೆ..

gowatur
ಗ್ರಾಮ ಲೆಕ್ಕಾಧಿಕಾರಿ

By

Published : Nov 4, 2020, 7:46 PM IST

ಶಿವಮೊಗ್ಗ:ಖಾತೆ ಬದಲಾವಣೆ ಮಾಡಲು ಹಣ ಬೇಡಿಕೆ ಇಟ್ಟಿದ್ದ ಗೌವಟೂರು ಗ್ರಾಮ ಪಂಚಾಯತ್ ಲೆಕ್ಕಾಧಿಕಾರಿ ಭ್ರಷ್ಟಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ.

ಹೊಸನಗರ ತಾಲೂಕಿನ ಗೌವಟೂರು ಗ್ರಾಮದ ಲೆಕ್ಕಾಧಿಕಾರಿ ರಾಘವೇಂದ್ರ ಎಸಿಬಿ ಬಲೆಗೆ ಬಿದ್ದ ಆರೋಪಿ. ಇದೇ ಗ್ರಾಮದ ಜೋಸೆಫ್ ಚಾಗೊರ ಎಂಬುವರಿಗೆ ಖಾತೆ ಬದಲಾವಣೆ ಮಾಡಿ ಕೊಡಲು 1 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದರು.

ಲೆಕ್ಕಾಧಿಕಾರಿ ರಾಘವೇಂದ್ರ ರಿಪ್ಪನಪೇಟೆ ಗ್ರಾಮ ಪಂಚಾಯತ್ ಬಳಿ ಲಂಚ ಪಡೆಯುವಾಗ ಎಸಿಬಿ ದಾಳಿ ಅಧಿಕಾರಿಗಳು ನಡೆಸಿದ್ದಾರೆ. ದಾಳಿಯಲ್ಲಿ ಎಸಿಬಿ ಡಿವೈಎಸ್ಪಿ ಲೋಕೇಶ್ ಹಾಗೂ ಸಿಬ್ಬಂದಿ ಹಾಜರಿದ್ದರು.

ABOUT THE AUTHOR

...view details