ಕರ್ನಾಟಕ

karnataka

ETV Bharat / state

30 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಪಿಡಿಒ - ಗುಡ್ಡೇಕೊಪ್ಪ ಗ್ರಾಮ ಪಂಚಾಯತ್​ ಪಿಡಿಒ ಎಸಿಬಿ ಬಲೆಗೆ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಎಂ.ಗುಡ್ಡೇಕೊಪ್ಪದ ಗ್ರಾಮ ಪಂಚಾಯಿತಿಯಲ್ಲಿ ಲಂಚ ಪಡೆಯುತ್ತಿದ್ದ ಗ್ರಾಪಂ ಪಿಡಿಒ ಮುರುಗೇಶ್​ ಎಸಿಬಿ ಬಲೆಗೆ ಬಿದ್ದಿದ್ದಾರೆ.

ACB raids on gudde koppa grama panchayat
ಗುಡ್ಡೇಕೊಪ್ಪ ಗ್ರಾಮ ಪಂಚಾಯತ್​ ಮೇಲೆ ಎಸಿಬಿ ದಾಳಿ

By

Published : Mar 31, 2022, 9:30 AM IST

ಶಿವಮೊಗ್ಗ:ಜಾಗವನ್ನು ಭೂ ಪರಿವರ್ತನೆ ಮಾಡಿ ಕೊಡಲು ವ್ಯಕ್ತಿಯಿಂದ ಲಂಚ ಪಡೆಯುತ್ತಿದ್ದ ವೇಳೆ ಗ್ರಾಮ ಪಂಚಾಯಿತಿ ಪಿಡಿಒ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಎಂ.ಗುಡ್ಡೇಕೊಪ್ಪದಲ್ಲಿ ನಡೆದಿದೆ.

ಎಂ.ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ಪಿಡಿಒ ಮುರುಗೇಶ್ ಎಸಿಬಿ ಬಲೆಗೆ ಬಿದ್ದಿರುವ ಅಧಿಕಾರಿ. ಈತ ಕುಸಗುಂಡಿ ಗ್ರಾಮದ ಸಿದ್ದಗಿರಿ ನಿವಾಸಿ ಸತೀಶ್​​​ ಎಂಬುವವರ 10 ಗುಂಟೆ ಭೂಮಿಯನ್ನು ಭೂ ಪರಿವರ್ತನೆ ಮಾಡಿ ಕೊಡಲು 2 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಮೊದಲ ಕಂತಾಗಿ 20 ಸಾವಿರ ರೂ.ಗಳನ್ನು ಮುರುಗೇಶ್​ ಮೊದಲೇ ಪಡೆದಿದ್ದರು. ಎರಡನೇ ಕಂತಾಗಿ 30 ಸಾವಿರ ರೂ. ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಕಾರ್ಯಾಚರಣೆಯೂ ದಾವಣಗೆರೆ ಎಸಿಬಿ ಅಧೀಕ್ಷಕ ಜಯಪ್ರಕಾಶ್‌ ಅವರ ಮಾರ್ಗದರ್ಶನ ನಡೆಸಲಾಗಿದ್ದು, ಈ ವೇಳೆ ಶಿವಮೊಗ್ಗ ಎಸಿಬಿಯ ಡಿವೈಎಸ್‌ಪಿ ಜೆ.ಲೋಕೇಶ್, ಇಮ್ರಾನ್ ಬೇಗ್ ಸೇರಿದಂತೆ ಸಿಬ್ಬಂದಿ ಇದ್ದರು.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ದಾಖಲೆ ಬಿಸಿಲಿನ ಬೇಗೆ.. ಕರ್ನಾಟಕ ಸೇರಿ ಎಲ್ಲೆಲ್ಲಿ ತಾಪಮಾನ ಹೆಚ್ಚಿದೆ ?

For All Latest Updates

TAGGED:

ABOUT THE AUTHOR

...view details