ಶಿವಮೊಗ್ಗ: ಡ್ರಗ್ಸ್ ದಂಧೆಯ ವಿರುದ್ಧ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಶಿವಮೊಗ್ಗ ಘಟಕ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದೆ. ಈ ವೇಳೆ ಡ್ರಗ್ಸ್ ದಂಧೆ ಹಿಂದೆ ಇರುವ ರಾಷ್ಟ್ರಘಾತುಕರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಎಂದು ಆಗ್ರಹಿಸಿದೆ.
ಡ್ರಗ್ಸ್ ದಂಧೆಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ
ರಾಜ್ಯದಲ್ಲಿ ಡ್ರಗ್ಸ್ ದಂಧೆ ಪ್ರರಕಣ ಹೆಚ್ಚುತ್ತಿರುವ ಹಿನ್ನೆಲೆ ಇಂತಹ ಜಾಲವನ್ನು ಪತ್ತೆ ಮಾಡಿ ಡ್ರಗ್ಸ್ ಮುಕ್ತ ಸಮಾಜ ನಿರ್ಮಿಸಬೇಕು ಎಂದು ಆಗ್ರಹಿಸಿ ಎಬಿವಿಪಿ ಪ್ರತಿಭಟನೆ ನಡೆಸಿದೆ. ಬಳಿಕ ಈ ಕುರಿತಂತೆ ಪೊಲೀಸರಿಗೆ ಮನವಿ ಪತ್ರ ನೀಡಿದ್ದಾರೆ.
ಡ್ರಗ್ಸ್ ದಂಧೆ ಸಮಾಜಕ್ಕೆ ಪಿಡುಗಾಗಿದೆ. ದೇಶದ ಯುವ ಶಕ್ತಿಯನ್ನು ಹಾಳು ಮಾಡಲು ಹೊರಟಿರುವ ಡ್ರಗ್ಸ್ ದಂಧೆಯನ್ನು ಬುಡ ಸಮೇತ ಕಿತ್ತು ಹಾಕಬೇಕು. ಸದ್ಯ ನಮ್ಮ ಸ್ಯಾಂಡಲ್ವುಡ್ನ ನಟ-ನಟಿಯರಿಗೆ ಬೃಹತ್ ಡ್ರಗ್ಸ್ ಜಾಲ ಇರುವುದು ಪತ್ತೆಯಾಗುತ್ತಿದೆ. ಇದರಲ್ಲಿ ನಟ-ನಟಿಯರಿಗೆ, ಪ್ರತಿಷ್ಠಿತ ಕುಟುಂಬಗಳು, ರಾಜಕಾರಣಿಗಳ ಮಕ್ಕಳು ಇರುವುದು ತಿಳಿದು ಬಂದಿದೆ.
ಇಂತಹ ಡ್ರಗ್ ಮಾಫಿಯಾದ ವಿರುದ್ಧ ಎಬಿವಿಪಿ ನಿರಂತರ ಹೋರಾಟ ನಡೆಸಿಕೊಂಡು ಬಂದಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿನ ಶಾಲಾ-ಕಾಲೇಜುಗಳಲ್ಲಿ ಡ್ರಗ್ಸ್ ಜಾಲವನ್ನು ಪತ್ತೆ ಮಾಡಬೇಕಿದೆ. ಕಾಲೇಜುಗಳಲ್ಲಿ ಡ್ರಗ್ಸ್ ತೆಗೆದು ಕೊಳ್ಳುವುದು ಪ್ರೆಸ್ಟೀಜ್ ಪ್ರಶ್ನೆಯಾಗಿದೆ. ಈ ಕುರಿತು ಪೋಷಕರು ಎಚ್ಚರಿಕೆಯಿಂದ ಇರಬೇಕು. ಪೊಲೀಸ್ ಇಲಾಖೆ ಇಂತಹ ಜಾಲವನ್ನು ಪತ್ತೆ ಮಾಡಿ, ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣಮಾಡಬೇಕೆದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.