ಕರ್ನಾಟಕ

karnataka

ETV Bharat / state

60 ವರ್ಷ ಕಳೆದರೂ ಕೆಎಫ್​ಡಿಗಿಲ್ಲ ಸೂಕ್ತ ಲಸಿಕೆ: ಉಣ್ಣೆ ಭಯದಲ್ಲಿ ಮಲೆನಾಡ ಜನತೆ

ಶಿವಮೊಗ್ಗ ಜಿಲ್ಲೆಯಲ್ಲಿ ಉಣ್ಣೆ ಕಚ್ಚುವುದರಿಂದ ಹರಡುವ ರೋಗವಾದ ಕ್ಯಾಸನೂರು ಫಾರೆಸ್ಟ್​​ ಡಿಸೀಸ್​ ಆರಂಭವಾಗಿದ್ದು, ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುತ್ತಿದೆ.

kasanur-forest-disease
ಕೆಎಫ್​ಡಿ

By ETV Bharat Karnataka Team

Published : Dec 19, 2023, 8:29 AM IST

Updated : Dec 19, 2023, 10:12 AM IST

ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ

ಶಿವಮೊಗ್ಗ:ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದ ಮಲೆನಾಡಿನ ಜಿಲ್ಲೆಯ ಜನತೆ ಪ್ರತಿ ವರ್ಷ ಡಿಸೆಂಬರ್​​ ಬಂದರೆ ಸಾಕು ಭಯದ ವಾತಾವರಣದಲ್ಲಿ ಬದುಕುತ್ತಾರೆ. ಈ ಭಯಕ್ಕೆ ಕಾರಣವಾಗಿರುವುದು ಕ್ಯಾಸನೂರು ಫಾರೆಸ್ಟ್ ಡಿಸೀಸ್​​.

ಕ್ಯಾಸನೂರು ಫಾರೆಸ್ಟ್​​ ಡಿಸೀಸ್ (KFD)​ ಮೊದಲ ಬಾರಿಗೆ ಪತ್ತೆಯಾಗಿದ್ದು, 1957 ರಲ್ಲಿ. ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಅರಣ್ಯದಂಚಿನ ಗ್ರಾಮವಾದ ಕ್ಯಾಸನೂರು ಗ್ರಾಮದಲ್ಲಿ ಈ ಕೀಟ ಪತ್ತೆಯಾಗಿತ್ತು. ಅಲ್ಲಿಂದ ಇದು ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾಗಿ, ರಾಜ್ಯದ ಚಿಕ್ಕಮಗಳೂರು, ಉಡುಪಿ, ಹಾಸನ, ಮೈಸೂರು, ಚಾಮರಾಜನಗರ ಹೀಗೆ ಕಾಡು ಪ್ರದೇಶ ಹೊಂದಿರುವ ಭಾಗಗಳಲ್ಲಿ ಈ ರೋಗ ಹರಡಿಕೊಂಡಿದೆ. ಕೆಎಫ್​ಡಿ ಪತ್ತೆಯಾಗಿ ಇಲ್ಲಿದೆ 66 ವರ್ಷಗಳಾಗಿವೆ. ಇದುವರೆಗೂ ಇದಕ್ಕೆ ಸೂಕ್ತ ಲಸಿಕೆ ಹಾಗೂ ಚಿಕಿತ್ಸೆ ಇಲ್ಲ.

ಉಣ್ಣೆ ಕಚ್ಚುವುದರಿಂದ ಹರಡುವ ರೋಗ:ಕೆಎಫ್​ಡಿ ರೋಗವು ಒಂದು ಸಣ್ಣ ಕೀಟದಿಂದ ಮನುಷ್ಯನಿಗೆ ಹರಡುತ್ತಿದೆ. ಇದು ಕಾಡಿನಲ್ಲಿ ಕಣ್ಣಿಗೆ ಕಾಣಿಸದಷ್ಟು ಸಣ್ಣ ಗಾತ್ರದಲ್ಲಿ ಇರುತ್ತದೆ. ಇದು ಮುಖ್ಯವಾಗಿ ಕಾಡು ಪ್ರಾಣಿಗಳ ಮೈಮೇಲೆ ವಾಸವಾಗಿರುತ್ತದೆ. ಪ್ರಾಣಿಗಳ ರಕ್ತ ಕುಡಿಯುತ್ತ, ತನ್ನ ವಂಶವನ್ನು ಹೆಚ್ಚಿಸಿಕೊಳ್ಳುತ್ತದೆ.

ಮಂಗನ ಕಾಯಿಲೆ ಅಂತಾ ಕರೆಯೋದೇಕೆ?ಸಣ್ಣ ಕೀಟವಾಗಿರುವ ಉಣ್ಣೆ ಹೆಚ್ಚಾಗಿ ಮಂಗನ ದೇಹದಲ್ಲಿ ಇರುತ್ತದೆ. ಕೋತಿ ಕಾಡಿನಲ್ಲಿ ಮೃತಪಟ್ಟರೆ ಇದು ಆ ದೇಹದಿಂದ ಬೇರೆ ಪ್ರಾಣಿಯನ್ನು ಆಶ್ರಯಿಸುತ್ತದೆ. ಇದಕ್ಕಾಗಿಯೇ ಮಂಗನ ಕಾಯಿಲೆ ಎಂದು ಸಹ ಕರೆಯುತ್ತಾರೆ. ಕಾಡಂಚಿನ ಗ್ರಾಮಗಳ ಜಾನುವಾರುಗಳು ಕಾಡಿಗೆ ಮೇಯಿಲು ಹೋದಾಗ ಅವುಗಳಿಗೆ ಈ ಉಣ್ಣೆ ಹತ್ತಿಕೊಳ್ಳುತ್ತವೆ. ಈ ಜಾನುವಾರುಗಳು ಮನೆಗೆ ಬಂದಾಗ ಮನುಷ್ಯ ಇದರ ಸಂಪರ್ಕಕ್ಕೆ ಬಂದಾಗ, ಈ ಉಣ್ಣೆಗಳು ಮನುಷ್ಯನಿಗೆ ಕಚ್ಚಿದರೆ, ಮನುಷ್ಯನಿಗೆ ಮೊದಲು ಜ್ವರ ಬರುತ್ತದೆ. ನಂತರ ಸುಸ್ತು ಹೆಚ್ಚಾಗುತ್ತದೆ. ನಂತರ ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ಇದು ಮನುಷ್ಯನ ಜೀವಕ್ಕೇ ಹಾನಿಯನ್ನುಂಟು ಮಾಡುತ್ತದೆ.

ಮುನ್ನೆಚ್ಚರಿಕೆ ಕ್ರಮ ಅಗತ್ಯ; ಈ ಜ್ವರಕ್ಕೆ ಮುನ್ನಚ್ಚರಿಕಾ ಕ್ರಮವಾಗಿ ಚಿಕಿತ್ಸೆ ಪ್ರಾರಂಭಿಸಿದರೆ ರೋಗಕ್ಕೆ ತುತ್ತಾದವರನ್ನು ಬದುಕಿಸಬಹುದು.‌ ಪ್ರಸ್ತುತ ಜಿಲ್ಲೆಯಲ್ಲಿ ಶಿವಮೊಗ್ಗ ಸೇರಿದಂತೆ, ಸಾಗರ, ಹೊಸನಗರ ಹಾಗೂ ತೀರ್ಥಹಳ್ಳಿಯ ತಾಲೂಕು ಆಸ್ಪತ್ರೆಯಲ್ಲಿ ಕೆಎಫ್​ಡಿಗಾಗಿಯೇ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ.

ಕೆಎಫ್​ಡಿಗೆ ಇದುವರೆಗೂ ಬೂಸ್ಟರ್ ಡೋಸ್:ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಾಗಿ ಕೆಎಫ್​ಡಿ ಕಂಡು ಬರುವುದರಿಂದ ಇಲ್ಲಿ ಪ್ರತಿ ವರ್ಷ ಎರಡು ಬೂಸ್ಟರ್ ಡೋಸ್ ನೀಡಲಾಗುತ್ತಿತ್ತು. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಕೆಎಫ್​ಡಿ ಹರಡುವುದು ಕಡಿಮೆ ಆಗುತ್ತದೆ ಎಂದು ಆರೋಗ್ಯ ಇಲಾಖೆ ಡೋಸ್ ನೀಡುತ್ತಿತ್ತು. ಆದರೆ ಕಳೆದ ನಾಲ್ಕೈದು ವರ್ಷಗಳಲ್ಲಿ ಈ ಡೋಸ್ ಕೆಲಸ ಮಾಡದ ಕಾರಣ ಮತ್ತು ಕೆಲವರಿಗೆ ಅಡ್ಡ ಪರಿಣಾಮ ಬೀರುತ್ತಿದ್ದ ಪರಿಣಾಮ ಬೂಸ್ಟರ್ ಡೋಸ್ ತೆಗೆದುಕೊಳ್ಳಲು ಜನ ಹಿಂದೇಟು ಹಾಕುತ್ತಿದ್ದರು. ಕಾಡಂಚಿನ ಗ್ರಾಮದಲ್ಲಿ ಕಾಡಿನ ಸಂಪರ್ಕ ಇರುವವರಿಗೆ ಆರೋಗ್ಯ ಇಲಾಖೆ ಡಿಎಂಪಿ ಆಯಿಲ್ ನೀಡುತ್ತಿದ್ದರು. ಈ ಆಯಿಲ್ ಅನ್ನು ಹಚ್ಚಿಕೊಂಡು ಕಾಡಿಗೆ ಹೋದರೆ ಉಣ್ಣೆ ಕೈ ಹಾಗೂ ಕಾಲಿಗೆ ಹತ್ತುತ್ತಿರಲಿಲ್ಲ. ಹಾಗಾಗಿ ಈ ಆಯಿಲ್ ಅನ್ನು ಮಾತ್ರ ವಿತರಣೆ ಮಾಡಲಾಗುತ್ತಿದೆ. ಅಲ್ಲದೆ ಕಾಡಿಗೆ ಹೋಗುವವರು ಮೈ ತುಂಬ ಬಟ್ಟೆ ಧರಿಸಿ ಹೋಗುವುದು ಕಡ್ಡಾಯವಾಗಿದೆ.

ಲಸಿಕೆ ಕಂಡು ಹಿಡಿಯಲು ನಿರ್ಲಕ್ಷ್ಯ:ಕೆಎಫ್​ಡಿ ರೋಗವು ಕೇವಲ ಒಂದೆರಡು ಜಿಲ್ಲೆಯಲ್ಲಿ ಮಾತ್ರ ಕಂಡು ಬರುತ್ತಿದೆ. ಇದು ಕೊರೊನಾ ರೀತಿ ವ್ಯಾಪಕವಾಗಿ ಹರಡದ ಕಾರಣ ಹಾಗೂ ಲಸಿಕೆಯು ನಿರ್ದಿಷ್ಟ ಪ್ರದೇಶದ ಜನರಿಗೆ ಮಾತ್ರ ನೀಡುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯ ಲಸಿಕೆ ಬೇಡವಾದ ಕಾರಣಕ್ಕೆ ಲಸಿಕೆ ಕಂಡು ಹಿಡಿಯಲು ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಬಿ ಎಸ್ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಕೆಎಫ್​​ಡಿ ರೋಗ ಪತ್ತೆ ಚಿಕಿತ್ಸೆ ಲಸಿಕೆಗಾಗಿ ಒಂದು ಲ್ಯಾಬ್​ನ್ನು ಜಿಲ್ಲೆಗೆ ಮಂಜೂರು ಮಾಡಲಾಗಿತ್ತು. ಈಗ ಲ್ಯಾಬ್ ಸಾಗರದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಕೆಎಫ್​ಡಿ ಲಸಿಕೆ ತಯಾರಿ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಕುಟುಂಬ ಹಾಗೂ ಆರೋಗ್ಯಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ಅವರು, ಕ್ಯಾಸನೂರು ಫಾರೆಸ್ಟ್ ಡಿಸೀಸ್​​ಗೆ ನೀಡಲಾಗುತ್ತಿದ್ದ ಬೂಸ್ಟರ್ ಡೋಸ್​ನ ಉತ್ಪಾದನೆಯನ್ನು 2021 ರಲ್ಲಿ ಸ್ಥಗಿತಗೊಳಿಸಲಾಗಿದೆ. ಈ ಡೋಸ್ ಅನ್ನು ಪುಣೆಯಲ್ಲಿ ತಯಾರು ಮಾಡಲಾಗುತ್ತಿದೆ. ಈಗ ಕೇಂದ್ರ ಸರ್ಕಾರ ಸ್ವಾಮ್ಯದ ನ್ಯಾಶನಲ್ ಇಸ್ಟಿಸ್ಟ್ಯೂಟ್ ಆಫ್ ವೈರಲ್​ನ ಲ್ಯಾಬ್​ನಲ್ಲಿ ಈಗ ಕೆಎಫ್​ಡಿಗೆ ಲಸಿಕೆ ಕಂಡು ಹಿಡಿಯಲು ಕೋರಲಾಗಿದೆ ಎಂದು ಎಂದು ಮಾಹಿತಿ ನೀಡಿದ್ದಾರೆ.

ಇದು ಕೇಂದ್ರದ ಪಾಲಸಿ ವಿಷಯವಾಗಿದೆ. ಹಿಂದೆ ಬೂಸ್ಟರ್ ಡೋಸ್​ನ್ನು ಕೇವಲ ಮೂರು ತಿಂಗಳಿಗೆ ಮಾತ್ರ ತಯಾರು ಮಾಡಿಕೊಲಾಗುತ್ತಿತ್ತು. ಇದರಿಂದ ಡೋಸ್ ತಯಾರಿಕ ಲ್ಯಾಬ್ ತನ್ನ ಉತ್ಪಾದನೆಯನ್ನು ನಿಲ್ಲಿಸಲಾಗಿದೆ. ಈಗ ಈ ರೋಗಕ್ಕೆ ಶಾಶ್ವತ ಲಸಿಕೆ ಕಂಡು ಹಿಡಿಯುವ ಪ್ಲಾನ್​ನಲ್ಲಿದೆ. ಇನ್ನು ಕೆಎಫ್​ಡಿ ರೋಗ ಪತ್ತೆಗಾಗಿ ಸಾಗರದಲ್ಲಿ ಒಂದು ಲ್ಯಾಬ್ ತಯಾರಾಗಿದೆ. ಇದು ಕರ್ತವ್ಯ ನಿರ್ವಹಿಸುತ್ತಿದೆ. ಇಲ್ಲಿ ಕೆಲ ಸಿಬ್ಬಂದಿಗಳ ಕೊರತೆ ಇದೆ. ಆದಷ್ಟು ಬೇಗ ನೇಮಕ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಶಿವಮೊಗ್ಗ: ಈ ವರ್ಷದ ಪ್ರಥಮ ಕೆಎಫ್​ಡಿ ಪ್ರಕರಣ ಪತ್ತೆ; ತೀರ್ಥಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ

Last Updated : Dec 19, 2023, 10:12 AM IST

ABOUT THE AUTHOR

...view details