ಕರ್ನಾಟಕ

karnataka

ETV Bharat / state

ಶಿವಮೊಗ್ಗದಲ್ಲಿ ಹಂದಿಗಳ ಅಸಹಜ ಸಾವು: ಜನರಲ್ಲಿ ಆತಂಕ

ಶಿವಮೊಗ್ಗ ಜಿಲ್ಲೆಯ ಮಹಾನಗರ ಪಾಲಿಕೆ ಹನುಮಂತಪುರದ ಬಳಿ ವಿಲೇವಾರಿ ಘಟಕ ನಿರ್ಮಿಸಲಾಗಿದೆ. ಆದ್ರೆ ಹನುಮಂತಪುರ ಗ್ರಾಮದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಹಂದಿಗಳು ಅಸಹಜವಾಗಿ ಸಾವನ್ನಪುತ್ತಿದ್ದು, ಇದರಿಂದ ಆತಂಕಗೊಂಡ ಜನ ಘಟಕಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

Pig death
ಹಂದಿಗಳ ಅಸಹಜ ಸಾವು

By

Published : Mar 19, 2020, 9:23 PM IST

ಶಿವಮೊಗ್ಗ: ಪುರದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹನುಮಂತಪುರ ಗ್ರಾಮದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಹಂದಿಗಳು ಅಸಹಜವಾಗಿ ಸಾವನ್ನಪ್ಪಿವೆ. ಇದರಿಂದ ಆತಂಕಗೊಂಡ ಜನರು ಘಟಕಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ನಗರದ ತ್ಯಾಜ್ಯವನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ಮಹಾನಗರ ಪಾಲಿಕೆ ಹನುಮಂತಪುರದ ಬಳಿ ವಿಲೇವಾರಿ ಘಟಕ ನಿರ್ಮಿಸಿದೆ. ಆದರೆ, ನಿರ್ವಹಣೆಗೆ ಕ್ರಮ ಕೈಗೊಂಡಿಲ್ಲ. ಕಸ ವಿಲೇವಾರಿ ಸಿಬ್ಬಂದಿ ವ್ಯವಸ್ಥಿತ ವಿಲೇವಾರಿ ಮಾಡುವ ಬದಲು ಅವೈಜ್ಞಾನಿಕ ಹಾಗೂ ಅಸಮರ್ಪಕ ವಿಲೇವಾರಿ ಮಾಡುತ್ತಿದ್ದಾರೆ. ಅಲ್ಲದೇ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಅಕ್ರಮವಾಗಿ ಹಂದಿ ಸಾಕಾಣೆ ಮಾಡುತ್ತಿದ್ದಾರೆ. ಹಂದಿಗಳು ಈಗ ಅಸಹಜವಾಗಿ ಸಾವನ್ನಪ್ಪಿದ್ದು, ಇದರಿಂದ ಹಂದಿಜ್ವರ ಕಾಣಿಸಿಕೊಳ್ಳುವ ಭೀತಿ ಎದುರಾಗಿದೆ ಎಂದು ಹನುಮಂತಾಪುರ-ಪುರದಾಳು ಗ್ರಾಮಸ್ಥರು ಆರೋಪಿಸಿದರು.

ಹಂದಿಗಳ ಅಸಹಜ ಸಾವು

ಹಂದಿಗಳು ಸಾವನ್ನಪ್ಪಿರುವ ಪರಿಣಾಮ ಇಡೀ ವಾತಾವರಣವೇ ಕಲುಷಿತಗೊಂಡಿದ್ದು, ಕೆಟ್ಟ ವಾಸನೆ ಬರುತ್ತಿದೆ. ಘಟಕ ಅಸ್ವಚ್ಛತೆಯಿಂದ ಗಬ್ಬು ನಾರುತ್ತಿದೆ. ಸೊಳ್ಳೆಗಳ ಉತ್ಪಾದನೆಯ ತಾಣವಾಗಿದೆ. ಕೋಳಿ ತ್ಯಾಜ್ಯ ಕೂಡ ತಂದು ಇದೇ ಘಟಕಕ್ಕೆ ಹಾಕುತ್ತಿದ್ದಾರೆ. ಇದರಿಂದ ಮಾಂಸದ ತ್ಯಾಜ್ಯ ತಿನ್ನಲು ಇಲ್ಲಿ ಸಾವಿರಾರು ಬೀದಿ ನಾಯಿಗಳಿವೆ. ಈ ಅವ್ಯವಸ್ಥೆ ತಡೆಗೆ ಸರಿಯಾದ ಕ್ರಮ ಇಲ್ಲ.

ಇದೇ ಮಾರ್ಗದ ವ್ಯಾಪ್ತಿಯಲ್ಲಿ ಅನುಪಿನಕಟ್ಟೆ, ಹನುಮಂತಪುರ, ಬೇಳೂರು, ಶಾಂತಿಪುರ, ಪುರದಾಳು ಗ್ರಾಮಗಳ ನಿವಾಸಿಗಳು, ವಿದ್ಯಾರ್ಥಿಗಳು ನಿತ್ಯ ಓಡಾಡಬೇಕಿದೆ. ಗಬ್ಬು ನಾರುತ್ತಿರುವ ವಾಸನೆಯಿಂದ ಜನರು ರೋಸಿ ಹೋಗಿದ್ದಾರೆ. ಸೊಳ್ಳೆ, ನಾಯಿ ಕಾಟದ ಜತೆಗೆ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಹಾಗಾಗಿ ಕೂಡಲೇ ಅಧಿಕಾರಿಗಳು ಈ ಕುರಿತು ಎಚ್ಚೆತ್ತುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ABOUT THE AUTHOR

...view details