ಕರ್ನಾಟಕ

karnataka

ETV Bharat / state

ಕೊರೊನಾ ವೈರಸ್​ ಪ್ರಪಂಚದಿಂದ ತೊಲಗಲಿ ಎಂದು ಬೇಡಿಕೊಳ್ಳುತ್ತೇನೆ: ಅಬ್ದುಲ್ ಅಜೀಮ್ - ಸಿಟಿಜನ್ ಮೂಮೆಂಟ್ ಆಫ್‌ ಇಂಡಿಯಾ

ಸಿಟಿಜನ್ ಮೂವ್​ಮೆಂಟ್ ಆಫ್‌ ಇಂಡಿಯಾದ ವತಿಯಿಂದ ಕೊರೊನಾ ವಾರಿಯರ್ಸ್ ಗೆ ಸನ್ಮಾನ‌ ಮಾಡಲಾಯಿತು. ಇದರಲ್ಲಿ‌ ಕೊರೊನಾ ವಾರಿಯರ್ಸ್ ಅಗಿ ದುಡಿಯುತ್ತಿರುವ ಆರೋಗ್ಯ ಸಿಬ್ಬಂದಿ, ಪೊಲೀಸ್, ಅಂಗನವಾಡಿ‌ ಕಾರ್ಯಕರ್ತರು, ಪತ್ರಕರ್ತರು ಹೀಗೆ ವಿವಿಧ ಭಾಗದಲ್ಲಿ‌ ಸೇವೆ ಸಲ್ಲಿಸುವವರನ್ನು‌‌ ಗುರುತಿಸಿ‌‌ ಸನ್ಮಾನ‌ ಮಾಡಲಾಯಿತು.

abdul-hajim-talk-about-lets-hurry-up-the-corona-world
ಕೊರೊನಾ ಮಹಾಮಾರಿ ಪ್ರಪಂಚದಿಂದ ಬೇಗ ತೂಲಗಲಿ ಎಂದು ಬೇಡಿಕೊಳ್ಳುತ್ತೇನೆ: ಅಬ್ದುಲ್ ಅಜೀಮ್

By

Published : Sep 3, 2020, 6:17 PM IST

ಶಿವಮೊಗ್ಗ: ಕೊರೊನಾ ಮಹಾಮಾರಿ ನಮ್ಮ ಪ್ರಪಂಚದಿಂದ ಬೇಗ ತೊಲಗಬೇಕು ಎಂದು ರಾಜ್ಯ ಅಲ್ಪ ಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ.

ಕೊರೊನಾ ವೈರಸ್​ ಪ್ರಪಂಚದಿಂದ ತೊಲಗಲಿ ಎಂದು ಬೇಡಿಕೊಳ್ಳುತ್ತೇನೆ: ಅಬ್ದುಲ್ ಅಜೀಮ್

ಶಿವಮೊಗ್ಗದ ಜಿಲ್ಲಾ ಮುಸ್ಲಿಂ ಹಾಸ್ಟೆಲ್ ನಲ್ಲಿ ಅಲ್ಪ ಸಂಖ್ಯಾಂತರಿಗೆ ಪಿಎಸ್ಐ‌ ತರಬೇತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕೊರೊನಾ‌ ಎಲ್ಲಿ? ಯಾರಿಗೆ? ಹೇಗೆ? ಬರುತ್ತದೆ ಎಂದು ಹೇಳಲು ಆಗಲ್ಲ. ‌ಕೊರೊನಾದಿಂದ ನಾವೆಲ್ಲಾ‌ ಹುಷಾರಾಗಿರಬೇಕು ಎಂದರು. ‌ಕೊರೊನಾಕ್ಕೆ ಇದುವರೆಗೂ‌‌ ಔಷಧಿಯೇ ಬಂದಿಲ್ಲ,‌ ಇದರಿಂದ ನಾವೆಲ್ಲರು ಎಚ್ಚರಿಕೆಯಿಂದ ಇರಬೇಕು ಎಂದರು.

ಕೊರೊನಾ ವಾರಿಯರ್ಸ್​ಗೆ ಸನ್ಮಾನ:

ಸಿಟಿಜನ್ ಮೂವ್​ಮೆಂಟ್ ಆಫ್‌ ಇಂಡಿಯಾದ ವತಿಯಿಂದ ಕೊರೊನಾ ವಾರಿಯರ್ಸ್ ಗೆ ಸನ್ಮಾನ‌ ಮಾಡಲಾಯಿತು. ಇದರಲ್ಲಿ‌ ಕೊರೊನಾ ವಾರಿಯರ್ಸ್ ಅಗಿ ದುಡಿಯುತ್ತಿರುವ ಆರೋಗ್ಯ ಸಿಬ್ಬಂದಿ, ಪೊಲೀಸ್, ಅಂಗನವಾಡಿ‌ ಕಾರ್ಯಕರ್ತರು, ಪತ್ರಕರ್ತರು ಹೀಗೆ ವಿವಿಧ ಭಾಗದಲ್ಲಿ‌ ಸೇವೆ ಸಲ್ಲಿಸುವವರನ್ನು‌‌ ಗುರುತಿಸಿ‌‌ ಸನ್ಮಾನ‌ ಮಾಡಲಾಯಿತು.

ಇದರಲ್ಲಿ‌ ಪತ್ರಕರ್ತ ಎನ್.ಮಂಜುನಾಥ್,‌ ರಾಷ್ಟ್ರಪತಿ‌ ಪದಕ‌ ವಿಜೇತ ಅತೀಕ್ ವುಲ್‌‌ ರೆಹಮಾನ್,‌ ಪೊಲೀಸ್ ಇಲಾಖೆಯ ಹರೀಶ್ ಪಟೇಲ್, ಸುರೇಶ್,‌ ಡಾ.ಇರ್ಫಾನ್ ‌ಹಾಗೂ‌ ಅಂಗನವಾಡಿ ಕಾರ್ಯಕರ್ತೆಗೆ ಸನ್ಮಾನ ಮಾಡಲಾಯಿತು.‌ ಕೊರೊನಾದಲ್ಲಿ‌ ಕಾರ್ಯ ನಿರ್ವಹಿಸುತ್ತಿರುವರಿಗೆ ಸನ್ಮಾನ‌ ಮಾಡಿ ನನಗೆ ಅತಿ ಸಂತೋಷವಾಗುತ್ತಿದೆ ಎಂದರು.

ABOUT THE AUTHOR

...view details