ಶಿವಮೊಗ್ಗ:ಶಿವಮೊಗ್ಗ ನಗರದಿಂದ ಸ್ಫರ್ಧಿಸಲು ನನಗೊಂದು ಅವಕಾಶ ಕೊಡಿ ಎಂದು ಪಕ್ಷದ ನಾಯಕರಿಗೆ ಮನವಿ ಸಲ್ಲಿಸಿರುವುದಾಗಿ ಬಿಜೆಪಿ ಎಂಎಲ್ಸಿ ಆಯನೂರು ಮಂಜುನಾಥ್ ತಿಳಿಸಿದ್ದಾರೆ. ನಗರದಲ್ಲಿ ಮಾತಾನಡಿದ ಅವರು, ಕಾರ್ಮಿಕ ಹೋರಾಟದ ಹಿನ್ನೆಲೆಯಿಂದ ಬಂದ ನನಗೆ ಕಾರ್ಮಿಕರು, ನೌಕರರು, ಹಿತೈಷಿಗಳು ಒಂದಷ್ಟು ಜನ ನಾನು ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿಯಾಗಬೇಕೆಂದು ಹಾರೈಸಿದ್ದಾರೆ. ಅವರೆಲ್ಲರ ಆಶಯದಂತೆ ನಾನು ಕೂಡ ಶಿವಮೊಗ್ಗ ಕ್ಷೇತ್ರದ ಸ್ಪರ್ಧಾಳು ಆಗಬೇಕೆಂದು ಬಯಸಿದ್ದೆನೆ. ನಾನು ಕಾರ್ಮಿಕ ಹಿನ್ನೆಲೆಯಲ್ಲಿ ಬದುಕನ್ನು ಕಣ್ಮುಂದೆ ಇಟ್ಟುಕೊಂಡು ನನ್ನದೆ ದೃಷ್ಟಿಯಲ್ಲಿ ನಗರವನ್ನು ಬದಲಾಯಿಸಲು ಶಿವಮೊಗ್ಗ ನಗರದಿಂದ ಸ್ಫರ್ಧಿಸಲು ಅವಕಾಶ ಮಾಡಿಕೊಡಿ ಎಂದು ಪಕ್ಷದ ಎಲ್ಲಾ ನಾಯಕರಿಗೆ ಮನವಿ ಸಲ್ಲಿಸಿದ್ದೇನೆ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಹೇಳಿದರು.
ಪದವಿಧರ ಕ್ಷೇತ್ರದ ಮತದಾರರಿಗೆ ಪತ್ರ:ಪದವಿಧರ ಕ್ಷೇತ್ರದಿಂದ ಆಯ್ಕೆಯಾಗಿರುವ ಹಿನ್ನೆಲೆ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಲು ಕ್ಷೇತ್ರದ ಜನರು ಒಪ್ಪಿಗೆ ಬೇಕೆಂದು ಪದವಿಧರ ಕ್ಷೇತ್ರದ ಮತದಾರರಿಗೆ ಪತ್ರವನ್ನು ಬರೆದಿದ್ದೇನೆ. ಇದಕ್ಕೆ ಎಲ್ಲರೂ ಒಪ್ಪಿಗೆ ನೀಡಿದ್ದಾರೆಂದು ಆಯನೂರು ಮಂಜುನಾಥ್ ತಿಳಿಸಿದ್ದಾರೆ. ಪರಿಷತ್ ನಲ್ಲಿ ಜನರ ಧ್ವನಿಯಾಗಲು ಹೆಚ್ಚಿನ ಅವಕಾಶವಿಲ್ಲದ ಕಾರಣ ವಿಧಾನಸಭೆಯು ಕಾಯ್ದೆ ಕಾನೂನುಗಳನ್ನು ರೂಪಿಸುವ ಸ್ಥಾನವಾದ ಕಾರಣ ಸ್ಪರ್ಧಗೆ ಇಚ್ಛೆ ಪಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ನಡೆಯುತ್ತಿರುವ ಗಲಭೆಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಇದನ್ನು ಹತೋಟಿ ಮಾಡಲು ಈಶ್ವರಪ್ಪ ಶ್ರಮ ಹಾಕಿದ್ದಾರೆ. ದುಡಿದು ತಿನ್ನುವ ಜನರಿಗೆ ನಗರದಲ್ಲಿ ಸಂಕಷ್ಟದ ವಾತಾವರಣ ಸೃಷ್ಟಿಯಾಗಿದೆ. ಇದರಿಂದ ನನಗೂ ಒಂದ್ ಚಾನ್ಸ್ ಕೊಡಿ ಎಂದು ಆಯನೂರು ಮಂಜುನಾಥ್ ವಿನಂತಿಸಿಕೊಂಡಿದ್ದಾರೆ.