ಕರ್ನಾಟಕ

karnataka

ETV Bharat / state

ಹುಟ್ಟುಹಬ್ಬ ಆಚರಣೆಗೆ ಹೋದ ಯುವಕ ಕಾಲುವೆಗೆ ಬಿದ್ದು ನೀರುಪಾಲು! - Shivmogga a youth died in canal news

ಹುಟ್ಟುಹಬ್ಬದ ಆಚರಣೆ ಮುಗಿಸಿಕೊಂಡು ವಾಪಸ್ ಬರುವ ವೇಳೆ ಬಿದ್ದ ವಾಟರ್ ಬಾಟಲಿ ತರಲು ಕಾಲುವೆಗೆ ಇಳಿದ ಯುವಕ ನೀರಿನ ರಭಸಕ್ಕೆ ಕೊಚ್ಚಿ ಹೋದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

Died
Died

By

Published : Aug 15, 2020, 10:09 AM IST

ಶಿವಮೊಗ್ಗ: ಹುಟ್ಟುಹಬ್ಬ ಆಚರಣೆಗೆ ಸ್ನೇಹಿತರೊಂದಿಗೆ ತೆರಳಿದ್ದ ಪಾಲಿಕೆ ಸದಸ್ಯೆಯ ಪುತ್ರ ಕಾಲುವೆಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗ ಮಹಾನಗರ ಪಾಲಿಕೆಯ ಜಯನಗರ ವಾರ್ಡ್​ನ ಬಿಜೆಪಿ ಸದಸ್ಯೆ ಆರತಿ ಪ್ರಕಾಶ್ ಅವರ ಪುತ್ರ ಅತೀಶ್ (24) ಮೃತಪಟ್ಟ ಯುವಕ ಎನ್ನಲಾಗಿದೆ.

ಹುಟ್ಟುಹಬ್ಬದ ಆಚರಣೆ ಮುಗಿಸಿಕೊಂಡು ವಾಪಸ್ ಬರುವ ವೇಳೆ ಬಿದ್ದ ವಾಟರ್ ಬಾಟಲಿ ತರಲು ಕಾಲುವೆಗೆ ಇಳಿದಿದ್ದಾನೆ. ನೀರಿನ ರಭಸಕ್ಕೆ ಕಾಲುವೆಯಲ್ಲಿಯೇ ಅತೀಶ್ ಕೊಚ್ಚಿ ಹೋಗಿದ್ದಾನೆ ಎನ್ನಲಾಗಿದೆ.

ಅಗ್ನಿಶಾಮಕ ದಳ ಹಾಗೂ ಮುಳುಗು ತಜ್ಞರು ಅತೀಶ್ ಶವದ ಹುಟುಕಾಟ ನಡೆಸುತ್ತಿದ್ದಾರೆ. ಈ ಕುರಿತು ತುಂಗಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

ABOUT THE AUTHOR

...view details