ಕರ್ನಾಟಕ

karnataka

ETV Bharat / state

ಮಾತ್ರೆ ಸೇವಿಸಿ ಮಲಗಿದ್ದ ಯುವಕ ಸಾವು...ಮಣಿಪಾಲ್ ವೈದ್ಯರ ನಿರ್ಲಕ್ಷ್ಯ ಆರೋಪ - shimoga recent news

ಶಿವಮೊಗ್ಗ ವಿದ್ಯಾನಗರ ನಿವಾಸಿ, ಅಜಯ್ ಸಿಂಗ್(23) ಮೃತ ಯುವಕ. ಅಜಯ್ ಸಿಂಗ್​​ ಕಳೆದ ಎರಡು‌ ದಿನದ ಹಿಂದಷ್ಟೆ ಬಲ ತೋಳಿಗೆ ಆಪರೇಷನ್ ​ ಮಾಡಿಸಿಕೊಂಡಿದ್ದ. ನಂತರ ಅಲ್ಲಿನ ವೈದ್ಯರು ಅಜಯ್ ಸಿಂಗ್​​ರನ್ನು ಡಿಸ್ಚಾರ್ಜ್​ ಮಾಡಿಸಿ ಕಳುಹಿಸಿ ಕೊಟ್ಟಿದ್ದರು. ಮಣಿಪಾಲದಿಂದ ಬಂದ ನಂತರ ಅಜಯ್ ಸಿಂಗ್, ಮನೆಯಲ್ಲಿ ಎರಡು ಬಾರಿ ವಾಂತಿ ಮಾಡಿ ಕೊಂಡಿದ್ದಾನೆ.

ಅಜಯ್ ಸಿಂಗ್(23) ಮೃತ ಯುವಕ

By

Published : Sep 27, 2019, 6:21 PM IST

ಶಿವಮೊಗ್ಗ: ಯುವಕನೊಬ್ಬ ಇಂದು ಮುಂಜಾನೆ ಮೃತ ಪಟ್ಟಿದ್ದು, ಮಣಿಪಾಲ್ ವೈದ್ಯರ ನಿರ್ಲಕ್ಷ್ಯದಿಂದಲೇ ಮೃತಪಟ್ಟಿದ್ದಾನೆ ಎಂದು ಪೋಷಕರು ಆರೋಪ ಮಾಡಿದ್ದಾರೆ.

ಶಿವಮೊಗ್ಗ ವಿದ್ಯಾನಗರ ನಿವಾಸಿ, ಅಜಯ್ ಸಿಂಗ್(23) ಮೃತ ಯುವಕ. ಅಜಯ್ ಸಿಂಗ್​​ಗೆ ಕಳೆದ ಎರಡು‌ ದಿನದ ಹಿಂದಷ್ಟೆ ಮಣಿಪಾಲ್ ವೈದ್ಯ ಡಾ. ಕಿರಣ್ ಆಚಾರ್ಯ ಎಂಬುವವರು ಬಲ ತೋಳಿಗೆ ಆಪರೇಷನ್ ಮಾಡಿದ್ದರು. ಆಪರೇಷನ್ ನಡೆಸಿದ ನಂತರ ಅಲ್ಲಿನ ವೈದ್ಯರು ಅಜಯ್ ಸಿಂಗ್​​ರನ್ನು ಡಿಸ್ಚಾರ್ಜ್​ ಮಾಡಿಸಿ ಕಳುಹಿಸಿ ಕೊಟ್ಟಿದ್ದರು. ಮಣಿಪಾಲದಿಂದ ಬಂದ ನಂತರ ಅಜಯ್ ಸಿಂಗ್, ಮನೆಯಲ್ಲಿ ಎರಡು ಬಾರಿ ವಾಂತಿ ಮಾಡಿ ಕೊಂಡಿದ್ದಾರೆ.

ಮಾತ್ರೆ ಸೇವಿಸಿ ಮಲಗಿದ್ದ ಯುವಕ ಸಾವು

ಆ ವೇಳೆ ಡಾ.‌ಕಿರಣ್ ಆಚಾರ್ಯರವರಿಗೆ ಫೋನ್ ಮಾಡಿ ಹೇಳಿದಾಗ, ಅವರು ವಾಟ್ಸ್​ಆ್ಯಪ್​ನಲ್ಲಿ ಮಾತ್ರೆಯ ಹೆಸರನ್ನು ಕಳುಹಿಸಿ, ಆ ಮಾತ್ರೆ ಕುಡಿಸಿ ಸರಿಯಾಗುತ್ತದೆ ಎಂದು ಹೇಳಿದ್ದಾರೆ.

ಡಾ. ಕಿರಣ್ ಆಚಾರ್ಯ ಹೇಳಿದಂತೆ ಮಾತ್ರ ಸೇವಿಸಿ ಮಲಗಿದ್ದ ಅಜಯ್ ಸಿಂಗ್​ಗೆ ಇಂದು ಬೆಳಗಿನ ಜಾವ ತೀವ್ರ ಉಸಿರಾಟದ ಸಮಸ್ಯೆ ಎದುರಾಗಿದೆ. ತಕ್ಷಣ ಶಿವಮೊಗ್ಗದ ಸಂಜೀವಿನಿ ಆಸ್ಪತ್ರೆಗೆ ಕರೆತಂದು ತೋರಿಸಿದಾಗ‌, ಅಲ್ಲಿನ ವೈದ್ಯರು ಅಜಯ್ ಸಿಂಗ್ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ. ಇದಾದ ನಂತರ ಸಿಂಗ್​ ಸಂಬಂಧಿಕರು ತಕ್ಷಣ ಮೆಗ್ಗಾನ್ ಆಸ್ಪತ್ರೆಗೆ ಕರೆ ತಂದಿದ್ದಾರೆ. ಅಲ್ಲೂ ಕೂಡ ಸಿಂಗ್​ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ.

ವೈದ್ಯರ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಅಜಯ್ ಸಿಂಗ್ ಪೋಷಕರು, ಸಂಬಂಧಿಕರು ಹಾಗೂ ಸ್ನೇಹಿತರು ಆರೋಪಿಸಿದ್ದಾರೆ. ಘಟನೆ ಕುರಿತು ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ABOUT THE AUTHOR

...view details