ಶಿವಮೊಗ್ಗ:ಜೀವನದಲ್ಲಿ ಜಿಗುಪ್ಸೆಗೊಂಡ ಯುವಕನೊಬ್ಬ ಭದ್ರಾ ಕಾಲುವೆ ಹಾರಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.
ಭದ್ರಾವತಿ ಹೊಸಮನೆ ಬಡಾವಣೆಯ ಹನುಮಂತ ನಗರದ ನಿವಾಸಿ ಗೌಸ್ ಪೀರ್ (24) ಆತ್ಮಹತ್ಯೆಗೆ ಶರಣಾದ ಯುವಕ. ಗೌಸ್ ಪೀರ್ನ ತಂದೆ-ತಾಯಿ ಇಬ್ಬರು ಮೃತರಾಗಿದ್ದು, ಮನೆಯಲ್ಲಿ ಒಬ್ಬಂಟ್ಟಿಯಾಗಿ ವಾಸ ಮಾಡ್ತಿದ್ದ. ತನ್ನ ತಂದೆ-ತಾಯಿಯ ಅಗಲಿಕೆ ನೋವು ಆತನ ಮನಸ್ಸಿಗೆ ಗಾಯಗೊಳಿಸಿತ್ತು.
ಮನೆಯಲ್ಲಿ ಒಂಟಿಯಾಗಿದ್ದು, ಯಾರು ತನ್ನ ಜೊತೆಯಲ್ಲಿ ಇಲ್ಲ ಎಂದು ತಿಳಿದ ಗೌಸ್ ಭದ್ರಾವತಿ ತಾಲೂಕಿನ ಗೊಂದಿಯ ಭದ್ರಾ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತಂದೆ-ತಾಯಿ ಇಲ್ಲದೇ ಅನಾಥವಾಗಿದ್ದ ಗೌಸ್ ಶವ ಪತ್ತೆಯಾಗಿದ್ದು, ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.