ಕರ್ನಾಟಕ

karnataka

ಆಹಾರೋದ್ಯಮಕ್ಕೆ ಆಹಾರ ಸುರಕ್ಷಾ, ಗುಣಮಟ್ಟ ಪ್ರಾಧಿಕಾರದ ಲೈಸನ್ಸ್​ ಕಡ್ಡಾಯ: ತಪ್ಪಿದ್ರೆ ಬೀಳುತ್ತೆ ದಂಡ

By

Published : Dec 3, 2020, 7:48 PM IST

ಆಹಾರಕ್ಕೆ ಸಂಬಂಧಿಸಿದ ಉದ್ಯಮ ಆರಂಭಿಸಲು ಎಫ್ಎಸ್ಎಸ್ಎಐ ಅವಶ್ಯವಾಗಿದ್ದು, ಪ್ರಾಧಿಕಾರದಿಂದ ಪ್ರತಿ 6 ತಿಂಗಳಿಗೊಮ್ಮೆ ಆಹಾರ ಪದಾರ್ಥಗಳ ಮಾದರಿ ಸಂಗ್ರಹಿಸಿ ಲ್ಯಾಬ್​​ನಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ.

food
ಆಹಾರ

ಶಿವಮೊಗ್ಗ:ಹೋಟೆಲ್, ಬೇಕರಿ, ನೀರಿನ ವ್ಯಾಪಾರ, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಆಹಾರಕ್ಕೆ ಸಂಬಂಧಿಸಿದ ಉದ್ಯಮ (ಆಹಾರೋದ್ಯಮ) ಪ್ರಾರಂಭಿಸಲು ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್ಎಸ್ಎಸ್ಎಐ) ಪರವಾನಗಿ ಕಡ್ಡಾಯ. ಪ್ರಾಧಿಕಾರ ಲೈಸನ್ಸ್​ ಪಡೆದರೆ ಸರ್ಕಾರದ ಎಲ್ಲಾ ಸಹಕಾರವು ವ್ಯಾಪಾರಿಗಳಿಗೆ ಸಿಗಲಿದೆ.

ಪರವಾನಗಿ ಪಡೆಯುವ ವಿಧಾನ:ಆಹಾರೋದ್ಯಮಕ್ಕೆ ಎಫ್ಎಸ್ಎಸ್ಎಐ ವೆಬ್​ಸೈಟ್​​ನಲ್ಲಿ ಅರ್ಜಿ ಸಲ್ಲಿಸಿ, ಪೂರಕ ದಾಖಲಾತಿ ಒದಗಿಸಿದ ನಂತರ ಸಂಬಂಧಿತ ಬ್ಯಾಂಕ್​ನಲ್ಲಿ ಶುಲ್ಕ ಪಾವತಿಸಿದರೆ 10 ದಿನದೊಳಗೆ ಪರವಾನಗಿ ಲಭ್ಯವಾಗುತ್ತದೆ. ಬ್ಯಾಂಕ್​​​ನಲ್ಲಿ‌ ಸಾಲಸೌಲಭ್ಯವೂ ಸಿಗುತ್ತದೆ. ಜೊತೆಗೆ ಸ್ಥಳೀಯ ಆಡಳಿತದಿಂದಲೂ ಅನುಮತಿ ಪಡೆಯಬೇಕಾಗುತ್ತದೆ.

ಪರವಾನಗಿ ಇಲ್ಲವಾದರೆ ದಂಡ:ಪ್ರಾಧಿಕಾರದಿಂದ ಅನುಮತಿ ಪಡೆಯದೆ ಆಹಾರೋದ್ಯಮ ಪ್ರಾರಂಭಿಸಿದರೆ ಅಸುರಕ್ಷಿತ ಆಹಾರವನ್ನು ಗ್ರಾಹಕರಿಗೆ ಒದಗಿಸುತ್ತಿದ್ದಾರೆ ಎಂದು ಅಧಿಕಾರಿಗಳು ಪ್ರಕರಣ ದಾಖಲಿಸಬಹುದು. ಅಪರ‌ ಜಿಲ್ಲಾಧಿಕಾರಿಗಳ ಕೋರ್ಟ್​​​ನಲ್ಲಿ ಪ್ರಕರಣ ದಾಖಲಾಗಲಿದ್ದು, ನಿಯಮ ಉಲ್ಲಂಘಿಸಿದವರಿಗೆ ಲಕ್ಷಾಂತರ ರೂಪಾಯಿ ದಂಡ ವಿಧಿಸಲಾಗುತ್ತದೆ. ಎಫ್ಎಸ್ಎಸ್ಎಐನಿಂದ ವರ್ಷಕ್ಕೊಮ್ಮೆ‌ ಇ-ಟ್ರೇಡ್ ಚಾಲೆಂಜ್ ಎಂಬ ಜಾಗೃತಿ ಜಾಥಾ ನಡೆಸಲಿದೆ. ಆಹಾರ ಸುರಕ್ಷತೆಯ ಕುರಿತು ಮಾಹಿತಿ ನೀಡಲಾಗುತ್ತದೆ.

ಎಫ್ಎಸ್ಎಸ್ಎಐ ಪರವಾನಗಿ ಕಡ್ಡಾಯ ಕುರಿತು ಅಭಿಪ್ರಾಯ

ಪ್ರತಿ 6 ತಿಂಗಳಿಗೊಮ್ಮೆ ಆಹಾರ ಪದಾರ್ಥಗಳ ಮಾದರಿ ಸಂಗ್ರಹಿಸಿ ಅದನ್ನು ಸೀಲ್ ವ್ಯಾಕ್ಸಿನ್ ಕ್ಯಾರಿಯರ್​​ನಲ್ಲಿ ಲ್ಯಾಬ್​​ನಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅದರ ವರದಿ ಬರಲು 10-15 ದಿನಗಳಾಗುತ್ತದೆ. ವರದಿಯನ್ನು ಆಧಾರಿಸಿ, ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಲಾಗುತ್ತದೆ. ಒಂದು ವೇಳೆ ಸುಧಾರಿಸದೆ ಹೋದರೆ, ಎಡಿಸಿ ಕೋರ್ಟ್​​ನಲ್ಲಿ ಪ್ರಕರಣ ದಾಖಲಿಸಲಾಗುತ್ತದೆ.

ಎಫ್‌ಎಸ್‌ಎಸ್‌ಎಐ ಕೆಲಸವೇನು?

ಎಫ್‌ಎಸ್‌ಎಸ್‌ಎಐ ಆರೋಗ್ಯ ಸಚಿವಾಲಯದ ಆಡಳಿತ ವ್ಯಾಪ್ತಿಗೆ ಬರುತ್ತದೆ. ದೆಹಲಿಯಲ್ಲಿ ಎಫ್‌ಎಸ್‌ಎಸ್‌ಎಐನ ಕೇಂದ್ರ ಕಚೇರಿ ಇದ್ದು, ಉಳಿದಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಾಧಿಕಾರವಿದೆ. ರಾಜ್ಯ ಆಹಾರ ಸುರಕ್ಷತೆ ಆಯುಕ್ತರು ರಾಜ್ಯದ ವಿವಿಧ ಆಡಳಿತ ಪ್ರದೇಶಗಳಲ್ಲಿ ಆಹಾರ ಸುರಕ್ಷತೆ ಅಧಿಕಾರಿಗಳನ್ನು (ಎಫ್‌ಎಸ್‌ಒ) ನೇಮಕ ಮಾಡುತ್ತಾರೆ. ಇವರು ಆಹಾರ ಉತ್ಪನ್ನಗಳು ತಯಾರಾಗುವ, ಸಂಗ್ರಹಿಸುವ ಸ್ಥಳದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುವ ಅಧಿಕಾರ ಹೊಂದಿರುತ್ತಾರೆ.

ಕಲಬೆರೆಕೆ ಹಾಗೂ ಗುಣಮಟ್ಟವಿಲ್ಲದ ಆಹಾರ ಉತ್ಪನ್ನಗಳನ್ನು ತಯಾರಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವೂ ಅವರಿಗೆ ಇರುತ್ತದೆ. ಪ್ರತಿ ಜಿಲ್ಲೆಗಳಲ್ಲಿ ನಿಯೋಜಿತ ಅಧಿಕಾರಿಗಳು ಆಹಾರ ಉತ್ಪನ್ನಗಳನ್ನು ತಯಾರಿಸುವವರಿಗೆ ಪರವಾನಗಿಯನ್ನು ನೀಡುವ, ರದ್ದು ಮಾಡುವ, ಪರಿಶೀಲನೆ ನಡೆಸುವ, ದೂರುಗಳನ್ನು ಸ್ವೀಕರಿಸುವ ಮತ್ತು ತನಿಖೆ ನಡೆಸುವುದು ಸೇರಿದಂತೆ ಹಲವಾರು ಕೆಲಸಗಳನ್ನು ನಿರ್ವಹಿಸುತ್ತಾರೆ.

ABOUT THE AUTHOR

...view details