ಶಿವಮೊಗ್ಗ:ನಗರದ ಜೆಎಂಎಫ್ಸಿ ನ್ಯಾಯಾಲಯದೊಳಗೆ ಹಾವೊಂದು ನುಗ್ಗಿ ಆತಂಕ ಸೃಷ್ಟಿಸಿರುವ ಘಟನೆ ನಡೆಯಿತು. ಸ್ನೇಕ್ ಮಾಸ್ಟರ್ ಕಿರಣ್ ಹಾವು ರಕ್ಷಿಸಿ ಅರಣ್ಯಕ್ಕೆ ಬಿಟ್ಟರು.
ನ್ಯಾಯಾಲಯದ ಕೊಠಡಿ ಸಮೀಪವೇ ಹಾವು ಬಂದಿದೆ. ಇದನ್ನು ಕಂಡು ಸಿಬ್ಬಂದಿ ಹೌಹಾರಿದ್ದಾರೆ. ನಂತರ ಸ್ನೇಕ್ ಮಾಸ್ಟರ್ಗೆ ಕರೆ ಮಾಡಿ ಮಾಹಿತಿ ನೀಡಲಾಗಿದೆ. ಅಂತೆಯೇ ಕೋರ್ಟ್ಗೆ ಆಗಮಿಸಿದ ಅವರು ಹಾವನ್ನು ಸುರಕ್ಷಿತವಾಗಿ ಸೆರೆಹಿಡಿದರು. ಇದು ಅಪರೂಪದ ತೋಳದ ಹಾವು (wolf snake) ಆಗಿದೆ, ವಿಷಕಾರಿಯಲ್ಲ. ಆದರೂ ಜನ ಭಯಪಡುತ್ತಾರೆ ಎಂದು ಕಿರಣ್ ತಿಳಿಸಿದರು.
ಬಲೆಯಲ್ಲಿ ಸಿಲುಕಿದ್ದ ಕೊಳಕಮಂಡಲ:ತಾಲೂಕಿನ ಗೊಂದಿ ಚಟ್ನಳಿಯ ಮೊರಾರ್ಜಿ ಶಾಲೆಯ ಬಳಿ ಲೋಹಿತ್ ಎಂಬುವರು ಹಂದಿ ಕಾಟಕ್ಕೆ ಮನೆಯ ಮುಂದೆ ಬೇಲಿಗೆ ಮೀನಿನ ಬಲೆ ಹಾಕಿದ್ದರು. ಈ ಬಲೆಗೆ ಕೊಳಕಮಂಡಲ ಹಾವೊಂದು ಸಿಲುಕಿಕೊಂಡಿತ್ತು. ವಿಷಯ ತಿಳಿದ ಸ್ನೇಕ್ ಕಿರಣ್ ಸ್ಥಳಕ್ಕೆ ಬಂದು ಅದನ್ನು ರಕ್ಷಣೆ ಮಾಡಿದ್ದಾರೆ.
ಕೊಳಕಮಂಡಲ ಅಪಾಯಕಾರಿ ಹಾವುಗಳಲ್ಲಿ ಒಂದು. ಇದು ಕಚ್ಚಿದ ಜಾಗ ಕೊಳೆಯಲು ಪ್ರಾರಂಭಿಸುತ್ತದೆ. ಕಿಡ್ನಿ ವೈಫಲ್ಯ ಮತ್ತು ಹೃದಯ ಸ್ತಂಭನವೂ ಉಂಟಾಗುತ್ತದೆ. ಇಂತಹ ಹಾವನ್ನು ರಕ್ಷಿಸುವಾಗ ಜಾಗರೂಕತೆ ಬೇಕು ಎಂದು ಹೇಳಿದರು.
ಇದನ್ನೂ ಓದಿ:ಭೂಕಬಳಿಕೆಗೆ ನಕಲಿ ದಾಖಲೆ ಸೃಷ್ಟಿ ಆರೋಪ: 17 ಜನರ ವಿರುದ್ಧ 4 ಪ್ರತ್ಯೇಕ ಪ್ರಕರಣ ದಾಖಲು