ಕರ್ನಾಟಕ

karnataka

By

Published : Jan 12, 2020, 3:19 AM IST

Updated : Jan 12, 2020, 10:42 AM IST

ETV Bharat / state

ಸಾಮೂಹಿಕ ವಿವಾಹ: ವಧು- ವರರಿಗೆ ಸರ್ಕಾರದಿಂದ ₹ 55,000 ಆರ್ಥಿಕ ನೆರವು- ಪೂಜಾರಿ

ರಾಜ್ಯದ 110 ದೇವಸ್ಥಾನದಲ್ಲಿ ಏಪ್ರಿಲ್ 26 ರಂದು ಸರ್ಕಾರದಿಂದಲೇ ಸರಳ ಸಾಮೂಹಿಕ ವಿವಾಹ ನಡೆಸಲು ಉದ್ದೇಶಿಸಲಾಗಿದೆ ಎಂದು ಮುಜರಾಯಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

shivmogga
ಪ್ರಗತಿ ಪರಿಶೀಲನಾ ಸಭೆ

ಶಿವಮೊಗ್ಗ:ರಾಜ್ಯಸರ್ಕಾರದಿಂದಏಪ್ರಿಲ್ 26ರಂದುವಿವಿಧ ಭಾಗಗಳ 110 ದೇವಸ್ಥಾನಗಳಲ್ಲಿ ಸರಳ ಸಾಮೂಹಿಕ ವಿವಾಹ ನಡೆಸಲಾಗುತ್ತಿದೆ ಎಂದು ಮುಜರಾಯಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಮುಜರಾಯಿ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಮುಜರಾಯಿ ಹಾಗೂ ಧಾರ್ಮಿಕ ದತ್ತಿ ಇಲಾಖೆಯು 'ಎ' ಮತ್ತು 'ಬಿ' ಶ್ರೇಣಿಯ ದೇವಾಲಯಗಳ ಆದಾಯವನ್ನು ಬಳಸಿಕೊಂಡು ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಸರಳ ಸಾಮೂಹಿಕ ವಿವಾಹ ನಡೆಸಲಾಗುವುದು ಎಂದು ತಿಳಿಸಿದರು.

ಸಾಮೂಹಿಕ ವಿವಾಹಕ್ಕೆ ಜಾತಿ, ಧರ್ಮ, ಮತ ಭಾಷೆ ಬಣ್ಣಗಳಂತಹ ಎಲ್ಲೆಗಳೆಲ್ಲವನ್ನೂ ಮೀರಿ ಎಲ್ಲಾ ಧರ್ಮದವರಿಗೂ ಅವಕಾಶ ಕಲ್ಪಿಸಲಾಗುವುದು. ಸರಳವಾಗಿ ಮದುವೆಯಾಗಬೇಕೆಂಬ ಆಸೆಯ ಹೊಂದಿರುವವರಿಗೆ ಇದು ಸಹಕಾರಿಯಾಗಲಿದೆ. ಮದುವೆ ಸಂದರ್ಭದಲ್ಲಿ ವಧುವಿಗೆ 40,000 ರೂ. ಮೌಲ್ಯದ ಮಾಂಗಲ್ಯ ಸರ ಹಾಗೂ 10,000 ನಗದು ಮತ್ತು ವರನಿಗೆ 5,000 ರೂ. ಜತೆಗೆ 55,000 ರೂ. ಆರ್ಥಿಕ ನೆರವು ಒದಗಿಸಲಾಗುವುದು ಎಂದರು.

ಸಭೆಯಲ್ಲಿ ಶಾಸಕ ಕೆ.ಬಿ. ಅಶೋಕ ನಾಯ್ಕ್, ಉಪಮೇಯರ್​ ಚನ್ನಬಸಪ್ಪ, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Last Updated : Jan 12, 2020, 10:42 AM IST

For All Latest Updates

TAGGED:

ABOUT THE AUTHOR

...view details