ಶಿವಮೊಗ್ಗ: ಉತ್ಪಾದಕನ ಯಾವುದೇ ವಸ್ತು ಗ್ರಾಹಕನಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸುವ ಜಾಹೀರಾತು ಉದ್ಯಮ, ಲಾಕ್ಡೌನ್ನಿಂದ ಸಾಕಷ್ಟು ತೊಂದರೆಗೆ ಒಳಗಾಗಿತ್ತು. ಅನ್ಲಾಕ್ ನಂತರ ಉದ್ಯಮ ಸಹಜ ಸ್ಥಿತಿಗೆ ಮರಳುತ್ತಿದೆ.
ಶಿವಮೊಗ್ಗದಲ್ಲಿ ಸುಧಾರಣೆಯತ್ತ ಜಾಹೀರಾತು ಉದ್ಯಮ - ಶಿವಮೊಗ್ಗದಲ್ಲಿ ಜಾಹೀರಾತು ಉದ್ಯಮ ಚೇತರಿಕೆ
ಕೊರೊನಾದಿಂದ ನಷ್ಟಕ್ಕೆ ಒಳಗಾಗಿದ್ದ ಕಂಪನಿಗಳು ಜಾಹೀರಾತು ನೀಡಲು ಹಿಂದೇಟು ಹಾಕುತ್ತಿದ್ದು, ಉದ್ಯಮವನ್ನೇ ನಂಬಿ ಬದುಕುತ್ತಿದ್ದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಖಾಲಿ ಇರುವ ಹೋರ್ಡಿಂಗ್
ಕೋವಿಡ್ ನೀಡಿದ ದೊಡ್ಡ ಪೆಟ್ಟಿನಿಂದ ಚೇತರಿಸಿಕೊಳ್ಳಲು ಹೆಣಗಾಡುತ್ತಿದ್ದ ಉದ್ಯಮಕ್ಕೆ ದಸರಾ, ದೀಪಾವಳಿ ಹಬ್ಬಗಳು ಕೊಂಚ ಮಟ್ಟಿಗೆ ನಿಟ್ಟುಸಿರು ಬಿಡುವಂತೆ ಮಾಡಿದವು. ಆದರೆ, ಪೂರ್ಣ ಪ್ರಮಾಣಕ್ಕೆ ಮರಳಲು ತುಂಬಾ ಸಮಯ ಬೇಕಾಗುತ್ತದೆ ಎನ್ನುತ್ತಾರೆ ಜಾಹೀರಾತು ಉದ್ಯಮಿಗಳು.
ಯುಕೆ ಅಡ್ವಟೈಸ್ ಮತ್ತು ಹೋಲ್ಡರ್ಸ್ ಮಾಲೀಕ ಉದಯ್
ಹಬ್ಬಗಳಿಂದ ಜಾಹೀರಾತು ಪ್ರದರ್ಶಿಸಲು ಕಂಪನಿಗಳು ಮುಂದೆ ಬರುತ್ತಿದ್ದು, ನೆಲಕಚ್ಚಿದ್ದ ಉದ್ಯಮ ಈಗ ಸ್ವಲ್ಪಮಟ್ಟಿಗೆ ಸುಧಾರಿಸುತ್ತಿದೆ ಎನ್ನುತ್ತಾರೆ ಯುಕೆ ಅಡ್ವಟೈಸ್ ಮತ್ತು ಹೋಲ್ಡರ್ಸ್ ಮಾಲೀಕ ಉದಯ್.